Advertisement

Kidiyur Hotels: ಅಷ್ಟಪವಿತ್ರ ನಾಗಮಂಡಲೋತ್ಸವಕ್ಕೆ ಚಪ್ಪರ ಮುಹೂರ್ತ

12:03 AM Jan 13, 2024 | Team Udayavani |

ಉಡುಪಿ: ಕಿದಿಯೂರ್‌ ಹೊಟೇಲ್ಸ್‌ ಪ್ರೈ.ಲಿ.ನ ಕಾರಣಿಕ ಶ್ರೀ ನಾಗ ಸಾನ್ನಿಧ್ಯದಲ್ಲಿ ಶ್ರೀ ನಾಗದೇವರಿಗೆ ನೂತನವಾಗಿ ನಿರ್ಮಿಸಲಾದ ರಜತ ಮಂಟಪ, ರಜತ ಕವಚಗಳ ಮತ್ತು ಸ್ವರ್ಣ ಲೇಪಿತ ರಜತ ಪ್ರಭಾವಳಿಯಲ್ಲಿ ರಜತ ಬಲಿಮೂರ್ತಿಯ ಸಮರ್ಪಣೆ ಯೊಂದಿಗೆ ಜ. 26ರಿಂದ 31ರ ವರೆಗೆ ನಡೆಯಲಿರುವ ಅಷ್ಟಪವಿತ್ರ ನಾಗ
ಮಂಡಲೋತ್ಸವ ಹಾಗೂ ಇತರ ಧಾರ್ಮಿಕ ಕಾರ್ಯ ಗಳ ಚಪ್ಪರ ಮುಹೂರ್ತವು ಶುಕ್ರವಾರ ನೆರವೇರಿತು.

Advertisement

ಚಪ್ಪರ ಮುಹೂರ್ತದ ಮುನ್ನ ನಾಗ ಸಾನ್ನಿಧ್ಯದಲ್ಲಿ ವೇ|ಮೂ| ಜೋತಿಷ ವಿದ್ವಾನ್‌ ಕಬಿಯಾಡಿ ಜಯರಾಮ ಆಚಾರ್ಯ ಅವರ ಪೌರೋಹಿತ್ಯದಲ್ಲಿ ಸಾನ್ನಿಧ್ಯ ಪೂಜೆ, ಕಲೊ³àಕ್ತ ಪೂಜೆ ನೆರವೇರಿಸಿ, ಸಾಮೂಹಿಕ ಪ್ರಾರ್ಥನೆ ಯೊಂದಿಗೆ ಶ್ರೀ ದೇವರಿಗೆ ಫ‌ಲನ್ಯಾಸ ಸಮರ್ಪಿಸಲಾಯಿತು.

ದ.ಕ. ಮತ್ತು ಉಡುಪಿ ಜಿಲ್ಲಾ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್‌, ಆರೋಗ್ಯ ಭಾರತೀಯ ಎನ್‌ಇಎಸ್‌ ಸದಸ್ಯ ಸದಾಶಿವ, ಚಪ್ಪರ ಉಸ್ತುವಾರಿ ಪ್ರದೀಪ್‌, ಪ್ರಮುಖರಾದ ಎಚ್‌.ಡಿ. ಕಿದಿಯೂರು, ಹರಿಯಪ್ಪ ಕೋಟ್ಯಾನ್‌, ಯುವರಾಜ್‌ ಸಾಲ್ಯಾನ್‌ ಕಿದಿಯೂರು, ಗಣೇಶ್‌ ರಾವ್‌, ಡಾ| ವಿಜಯೇಂದ್ರ ರಾವ್‌, ರಮೇಶ್‌ ಕೋಟ್ಯಾನ್‌, ಸುಧಾಕರ ಮೆಂಡನ್‌, ರಮೇಶ್‌ ಕಿದಿಯೂರು, ಆರ್‌.ಕೆ. ಮೆಂಡನ್‌, ಆಶೀಶ್‌ ಕುಮಾರ್‌, ಗಿರೀಶ್‌ ಕಾಂಚನ್‌, ಶ್ರೀಧರ ಭಟ್‌, ಶಶಿಧರ ಭಟ್‌, ಸುರೇಂದ್ರ ಮೆಂಡನ್‌, ಜಗನ್ನಾಥ ಕರ್ಕೇರ, ಪುರಂದರ ಕಿದಿಯೂರು, ವಿಲಾಸ್‌, ಸೋಮನಾಥ ಕಾಂಚನ್‌, ಕೃಷ್ಣ ಶೆಟ್ಟಿ, ದಿನೇಶ್‌ ಎರ್ಮಾಳ್‌, ಭೋಜರಾಜ ಕಿದಿಯೂರು, ಶೇಖರ ಕೋಟ್ಯಾನ್‌, ಪ್ರಶಾಂತ್‌ ಶೆಟ್ಟಿ ಹಾವಂಜೆ, ಚಂದ್ರಶೇಖರ ಶೆಟ್ಟಿ, ಮಧುಸೂದನ ಕೆಮ್ಮಣ್ಣು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next