Advertisement

kiccha sudeep: ಬಾಯಿ ಇದೆ ಎಂದು ಏನೇನೋ ಮಾತನಾಡಬಾರದು..ಮಾನನಷ್ಟ ಮೊಕದ್ದಮೆ ದಾಖಲಿಸಿದ ಕಿಚ್ಚ

03:52 PM Jul 15, 2023 | Team Udayavani |

ಬೆಂಗಳೂರು: ತಮ್ಮ ವಿರುದ್ಧದ ಆರೋಪಗಳಿಗೆ ಕಿಚ್ಚ ಸುದೀಪ್ ಕಾನೂನು ಮೂಲಕ ಹೋರಾಟ ಮಾಡಲು ಮುಂದಾಗಿದ್ದು, ಈ ಹಿನ್ನೆಲೆಯಲ್ಲಿ ನ್ಯಾಯಾಲಯದ ಮೆಟ್ಟಿಲು ಹತ್ತಿದ್ದಾರೆ.

Advertisement

ಈ ಕುರಿತು ಜೆಎಂಎಫ್‌ ಸಿ ಆವರಣದಲ್ಲಿ ಮಾತನಾಡಿದ ಅವರು “ ಕನ್ನಡ ವಾಣಿಜ್ಯ ಮಂಡಳಿ ನಮಗೆ ತಾಯಿ ಸಮಾನ. ನಾನು ಕಷ್ಟಪಟ್ಟು ಹೆಸರು ಗಳಿಸಿದವ. ನನ್ನ ಹೆಸರನ್ನು ಈ ರೀತಿಯಾಗಿ ಹಾಳು ಮಾಡಲು ನಾನು ಬಯಸುವುದಿಲ್ಲ. ಜನರಿಗೆ ಇದರಿಂದ ನನ್ನ ಬಗ್ಗೆ ತಪ್ಪು ಸಂದೇಶ ಹೋಗಬಾರದು.ಬಾಯಿ ಇದೆ ಎಂದು ಏನೇನೋ ಮಾತನಾಡಬಾರದು. ಇವರನ್ನು ಹಾಗೆಯೇ ಬಿಟ್ಟರೆ ಮಾತನಾಡುವುದು ಮುಂದುವರೆಯುತ್ತದೆ. ನನ್ನ ಮೇಲೆ ಮಾಡಿದ ಆರೋಪಗಳಿಗೆ ಸ್ಪಷ್ಟನೆ ನೀಡುವಂತೆ ನೋಟಿಸ್‌ ನೀಡಿದ್ದೆ. ಆದರೆ ನೋಟಿಸ್‌ ಗೆ ಸರಿಯಾದ ಪ್ರತಿಕ್ರಿಯೆನೀಡದ ಕಾರಣಕ್ಕೆ ಲೀಗಲ್‌ ಆಗಿ ಹೋಗುವ ಎಂದು ಕೋರ್ಟ್‌ ಗೆ ಬಂದಿದ್ದೇನೆ” ಎಂದು ಅವರು ಹೇಳಿದ್ದಾರೆ.

“ಕಾನೂನು ವ್ಯಾಪ್ತಿಯಲ್ಲಿ ಎಲ್ಲದಕ್ಕೂ ಉತ್ತರವಿದೆ. ಈ ಪ್ರಕರಣದಲ್ಲಿ ಕಾನೂನಾತ್ಮಕವಾಗಿ ಹೋರಾಟ ಮಾಡುತ್ತೇನೆ. ಕಾನೂನಿನಲ್ಲಿ ಎಲ್ಲದಕ್ಕೂಉತ್ತರವಿ”ದೆ ಎಂದು ನಟ ಹೇಳಿದರು.

ಸದ್ಯ ಕಿಚ್ಚ ಸುದೀಪ್‌ ಅವರ ಮಾನನಷ್ಟ ಮೊಕದ್ದಮ್ಮೆ ಪ್ರಕರಣವನ್ನು ಕೋರ್ಟ್‌ ಸ್ವೀಕರಿಸಿದೆ ಇದರ ವಿಚಾರಣೆಯನ್ನು ಆಗಸ್ಟ್‌ 17 ಕ್ಕೆ ಮುಂದೂಡಿದೆ.

ಪ್ರಕರಣ ಏನು?: ನಿರ್ಮಾಪಕ ಎಂಎನ್‌ ಕುಮಾರ್‌ ಅವರು ಕಿಚ್ಚ ಸುದೀಪ್‌ ಅವರು 9 ಕೋಟಿ ಹಣವನ್ನು ಪಡೆದು ಸಿನಿಮಾ ಮಾಡದೇ ವಂಚಿಸಿದ್ದಾರೆ ಎಂದು ನಿರ್ಮಾಪಕ ಎಂಎನ್ ಕುಮಾರ್‌ ಆರೋಪ ಮಾಡಿ ದೂರು ನೀಡಿದ್ದರು. ಕಿಚ್ಚನ ವಿರುದ್ಧದ ಆರೋಪಗಳಿಗೆ ಎಂಎನ್‌ ಸುರೇಶ್‌ ಅವರು ಕೂಡ ಧ್ವನಿಗೂಡಿಸಿದ್ದರು.

Advertisement

ಈ ಹಿನ್ನೆಲೆಯಲ್ಲಿ ಕಿಚ್ಚ ಆರೋಪಗಳಿಗೆ ಸ್ಪಷ್ಟನೆ ನೀಡುವಂತೆ ಇಬ್ಬರಿಗೂ ನೋಟಿಸ್‌ ನೀಡಿದ್ದರು. ನೋಟಿಸ್‌ ಗೆ ಉತ್ತರ ನೀಡದ ಕಾರಣಕ್ಕೆ ಕೋರ್ಟ್‌ ನಲ್ಲಿ ಕಿಚ್ಚ ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಿದ್ದಾರೆ.

ಇತ್ತೀಚೆಗಷ್ಟೇ ಕಿಚ್ಚ‌ ಸುದೀಪ್‌ ಈ ಕುರಿತು ವಾಣಿಜ್ಯ ಮಂಡಳಿಗೆ ಸುದೀರ್ಘ ಪತ್ರವನ್ನು ಬರೆದಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next