ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಕಿಚ್ಚ ಸುದೀಪ್ ಅವರ ಮುಂದಿನ ಚಿತ್ರಕ್ಕೆ ಅಭಿಮಾನಿಗಳು ಕಾಯುತ್ತಿದ್ದಾರೆ. ಈಗಾಗಲೇ ವಿಜಯ್ ಕಾರ್ತಿಕೇಯನ್ ನಿರ್ದೇಶನದಲ್ಲಿ ಸುದೀಪ್ ಚಿತ್ರ ಮಾಡುತ್ತಿದ್ದು ಅದರ ಶೂಟಿಂಗ್ ನಡೆಯುತ್ತಿದೆ. ಇದರ ನಡುವೆ ಕಿಚ್ಚನ ಹೊಸ ಚಿತ್ರದ ಬಗ್ಗೆ ಅಪ್ಡೇಟ್ ಬರುತ್ತಿದೆ.
ಮಗಧೀರ, ಬಾಹುಬಲಿ, ಆರ್.ಆರ್.ಆರ್ ನಂತಹ ಹಿಟ್ ಚಿತ್ರಗಳ ಕಥೆಗಾರ ವಿ .ವಿಜಯೇಂದ್ರ ಪ್ರಸಾದ್ ಅವರು ಕನ್ನಡದ ಪ್ರತಿಷ್ಠಿತ ಆರ್.ಸಿ ಸ್ಟುಡಿಯೋಸ್ ಸಂಸ್ಥೆಯ ಚೊಚ್ಚಲ ಚಿತ್ರಕ್ಕೆ ಸ್ಕ್ರಿಪ್ಟ್ ಸೂಪರ್ ವೈಸ್ ಮಾಡಿದ್ದು, ಈ ಚಿತ್ರದಲ್ಲಿ ಕಿಚ್ಚ ಸುದೀಪ್ ಅವರು ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಆರ್. ಚಂದ್ರು ಅವರು ಆಕ್ಷನ್ ಕಟ್ ಹೇಳಲಿದ್ದಾರೆ.
ಇದನ್ನೂ ಓದಿ:LS Election ; ಉದಾಸಿ, ಸಿದ್ದೇಶ್ವರ,ಡಿವಿಎಸ್ ಸೇರಿ ಹಲವರು ಸ್ಪರ್ಧಿಸುವುದಿಲ್ಲ: ಯತ್ನಾಳ್
ಆರ್ ಸಿ ಸ್ಟುಡಿಯೋಸ್ ಈ ಚಿತ್ರದ ಶೀರ್ಷಿಕೆ ಬಿಡುಗಡೆಗೊಳಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಕಿಚ್ಚನ ಹುಟ್ಟುಹಬ್ಬವಾದ ಸೆಪ್ಟೆಂಬರ್ 2 ರಂದು ಅಧಿಕೃತವಾಗಿ ಘೋಷಣೆಯಾಗಲಿದೆ.
ವಿಜಯೇಂದ್ರ ಪ್ರಸಾದ್ ಕಥೆ ಮೇಲ್ವಿಚಾರಣೆ, ಕಿಚ್ಚ ಸುದೀಪ್ ಅವರ ನಟನೆ ಮತ್ತು ಆರ್ ಚಂದ್ರು ಅವರ ನಿರ್ದೇಶನದ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.