Advertisement

ಕ್ಷಿಪ್ರಗತಿ ಬೆಳವಣಿಗೆಯಲ್ಲಿ ಕೆಐಎಎಲ್‌ಗೆ 2ನೇ ಸ್ಥಾನ

11:35 AM Aug 22, 2018 | |

ದೇವನಹಳ್ಳಿ: ಜಗತ್ತಿನಲ್ಲಿ ಅತ್ಯಂತ ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿರುವ 20 ಪ್ರಮುಖ ವಿಮಾನ ನಿಲ್ದಾಣಗಳ ಪೈಕಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟೀಯ ವಿಮಾನ ನಿಲ್ದಾಣ ಎರಡನೇ ಸ್ಥಾನ ಪಡೆದಿದೆ ಎನ್ನುವುದಕ್ಕೆ ಹೆಮ್ಮೆಪಡುತ್ತದೆ ಎಂದು ಬಿಐಎಎಲ್‌ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಹರಿ ಮಾರರ್‌ ತಿಳಿಸಿದರು. 

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2018ರ ಮೊದಲ ಆರು ತಿಂಗಳುಗಳಲ್ಲಿ 4.18 ದಶಲಕ್ಷ ಪ್ರಯಾಣಿಕರ ಸಂಖ್ಯೆಯನ್ನು ಸೇರಿಸಿಕೊಂಡಿರುವ ಬೆಂಗಳೂರಿನ ಈ ವಿಮಾನ ನಿಲ್ದಾಣ ವಾಸ್ತವ ಪ್ರಯಾಣಿಕರ ಸಂಖ್ಯೆಯಲ್ಲಿ ಜಗತ್ತಿನ ಎರಡನೇ ಅತ್ಯಂತ ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿರುವ ವಿಮಾನ ನಿಲ್ದಾಣವಾಗಿದೆ ಎಂದು ಹೇಳಿದರು.

ವಿಶ್ವದಲ್ಲಿ ಅತ್ಯಂತ ವೇಗದಲ್ಲಿ ಬೆಳೆಯುತ್ತಿರುವ ವೈಮಾನಿಕ ಮಾರುಕಟ್ಟೆಗಳಲ್ಲಿ ಭಾರತ ಒಂದೆಂಬ ಅಂಕಿ ಅಂಶಗಳಿಗೆ ತಕ್ಕಂತೆ ರೂಟ್ಸ್‌ಆನ್‌ಲೈನ್‌ನ ಅಧ್ಯಯನ ಇದೆ. ಈ ಬೆಳವಣಿಗೆಯೊಂದಿಗೆ ಹೊಂದಿಕೊಂಡು ನಡೆಯಲು ವಿಮಾನ ನಿಲ್ದಾಣ ಬೃಹತ್‌ ಮೂಲ ಸೌಕರ್ಯ ಅಭಿವೃದ್ಧಿ ಕಾರ್ಯಕ್ಕೆ ಮುಂದಾಗಿದೆ.

ಈ ಸೌಕರ್ಯಗಳಲ್ಲಿ ನೂತನ ಟರ್ಮಿನಲ್‌ ಮತ್ತು ಎರಡನೇ ರನ್‌ವೇ ಸೇರಿವೆ. ಇದರಿಂದ ಹೆಚ್ಚುತ್ತಿರುವ ಪ್ರಯಾಣಿಕರ ಸಂಖ್ಯೆಗೆ ತಕ್ಕಂತೆ ನಾವು ಹೊಂದಿಕೊಂಡು ಅಗತ್ಯ ಸೌಲಭ್ಯ ಕಲ್ಪಿಸಲು ಅನುಕೂಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next