Advertisement

ಮಾರುಕಟ್ಟೆಯಲ್ಲಿ ಅತಿ ಜನಪ್ರಿಯ; ಕ್ರೆಟಾ ಹಿಂದಿಕ್ಕಿದ ಸೆಲ್ಟೋಸ್‌

11:22 AM Oct 11, 2019 | Nagendra Trasi |

ನವದೆಹಲಿ: ಆಗಸ್ಟ್‌ ಕೊನೆಯ ವಾರದಲ್ಲಿ ಭಾರತಕ್ಕೆ ಬಿಡುಗಡೆಗೊಂಡು ಹೊಸ ಸಂಚಲನ ಸೃಷ್ಟಿಸಿದ್ದ ಕಿಯಾ ಸೆಲ್ಟೋಸ್‌, ಈಗ ಮಿನಿ ಎಸ್‌ಯುವಿ ಕಾರುಗಳ ಶ್ರೇಣಿಯಲ್ಲಿ ಅತಿ ಜನಪ್ರಿಯ ಕಾರೆಂಬ ಹೆಗ್ಗಳಿಕೆ ಪಡೆದಿದೆ.

Advertisement

ಮಾರುಕಟ್ಟೆಯಲ್ಲಿ ತನ್ನ ಸಮೀಪದ ಪ್ರತಿಸ್ಪರ್ಧಿಯಾದ ಹುಂಡೈ ಕ್ರೆಟಾ, ಎಂ.ಜಿ. ಹೆಕ್ಟರ್‌ ಕಾರುಗಳನ್ನೂ ಹಿಂದಿಕ್ಕಿರುವ ಸೆಲ್ಟೋಸ್‌, ಸೆಪ್ಟೆಂಬರ್‌ ತಿಂಗಳೊಂದರಲ್ಲೇ 7,754 ಕಾರುಗಳ ಮಾರಾಟ ದಾಖಲಿಸಿದೆ. ಅದೇ ಅವಧಿಯಲ್ಲಿ ಕ್ರೆಟಾ 6,641 ಹಾಗೂ ಎಂ.ಜಿ. ಹೆಕ್ಟರ್‌ 2,608 ಕಾರುಗಳು ಮಾರಾಟವಾಗಿವೆ. ಬಿಡುಗಡೆಗೂ ಮುನ್ನವೇ ಸೆಲ್ಟೋಸ್‌ ಹೆಚ್ಚು ಕ್ರೇಜ್‌ ಸೃಷ್ಟಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next