Advertisement

ದಾಖಲೆ ಪ್ರಮಾಣದಲ್ಲಿ ಮಾರಾಟವಾಗುತ್ತಿರುವ ಕಿಯಾ “ಸೆಲ್ಟೋಸ್‌’

10:13 AM Oct 11, 2019 | Team Udayavani |

ಕಳೆದ ಎರಡು ತಿಂಗಳ ಹಿಂದೆ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದ್ದ ಎಸ್‌ಯುವಿ ಸೆಲ್ಟೋಸ್‌ ದಾಖಲೆ ಮಟ್ಟದಲ್ಲಿ ಮಾರಾಟವಾಗುತ್ತಿದ್ದು, ಕೊರಿಯಾ ಮೂಲದ ಕಿಯಾ ಮೋಟಾರ್ಸ್‌ ಕಂಪನಿಯ ಉತ್ಪನ್ನ ದೇಶದೆಲ್ಲೆಡೆ ಸದ್ದು ಮಾಡುತ್ತಿದೆ.

Advertisement

7754 ಕಾರುಗಳ ಮಾರಾಟ
ಆಂಧ್ರ ಪ್ರದೇಶದ ಅನಂತಪುರದ ಉತ್ಪಾದನಾ ಘಟಕದಲ್ಲಿ ತಯಾರಾಗಿರುವ ಸೆಲ್ಟೋಸ್‌ ಸಮಕಾಲೀನ ತಂತ್ರಜ್ಞಾನ, ವಿನ್ಯಾಸ, ಐಷಾರಾಮಿ ಅನುಕೂಲತೆಗಳನ್ನು ಹೊಂದಿದ್ದು, ಕಳೆದ ತಿಂಗಳು 7754 ಕಾರುಗಳು ಮಾರಾಟವಾಗಿದೆ.

40 ಸಾವಿರ ಕಾರುಗಳು ಬುಕಿಂಗ್‌
ಸೆಷ್ಟೆಂಬರ್‌ ತಿಂಗಳ ಅಂತ್ಯಕ್ಕೆ ಸುಮಾರು 40 ಸಾವಿರ ಕಾರುಗಳು ಬುಕಿಂಗ್‌ ಆಗಿದ್ದು, ಈ ಮೂಲಕ ಕಡಿಮೆ ಅವಧಿಯಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಬುಕಿಂಗ್‌ ಆದ ಕಾರು ಎಂಬ ಹೆಗ್ಗಳಿಕೆಯನ್ನು ಪಡೆದು ಕೊಂಡಿದೆ.

ಮೊದಲ ಸ್ಥಾನಕ್ಕೆ ಜಿಗಿತ
ಇನ್ನೂ ಮೊದಲ ಸ್ಥಾನದಲ್ಲಿದ್ದ ಹ್ಯುಂಡೈ ಕ್ರೆಟಾ ಇದೀಗ ಎರಡನೇ ಸ್ಥಾನಕ್ಕೆ ಇಳಿದಿದ್ದು, ಕಿಯಾ ಮೋಟಾರ್ಸ್‌ ಕಂಪನಿ ಅತೀ ಹೆಚ್ಚು ಗ್ರಾಹಕರನ್ನು ಹೊಂದುವ ಮೂಲಕ ಪ್ರಥಮ ಸ್ಥಾನವನ್ನು ಅಲಂಕರಿಸಿದೆ.

Advertisement

ವೈಶಿಷ್ಟಗಳೇನು ?
ಇತರ ಕಾರುಗಳಿಗೆ ಹೋಲಿಸಿದ್ದರೆ ಕಿಯಾ ಸೆಲ್ಟೋಸ್‌ ಎಂಜಿನ್‌ ಸಾಮರ್ಥ್ಯ ಉತ್ತಮವಾಗಿದ್ದು, ಬಿಎಸ್‌-6 ಎಮಿಶನ್‌ ಎಂಜಿನ್‌ ಹೊಂದಿದೆ. ಹಾಗೇ ಇದರಲ್ಲಿ 3 ವೇರಿಯೆಂಟ್‌ ಎಂಜಿನ್‌ಗಳು, 1.5 ಲೀಟರ್‌ ಸಾಮರ್ಥ್ಯವಿರುವ ಪೆಟ್ರೋಲ್‌ ಎಂಜಿನ್‌ ಅನ್ನು ಹೊಂದಿದೆ. ಹಾಗೇ 115 ಹೆಚ್‌ಪಿ ಪವರ್‌ ಹಾಗೂ 144 ಎನ್‌ಎಂ ಪೀಕ್‌ ಟಾರ್ಕ್‌ ಇದ್ದು, 1.4 ಲೀ ಟಬೋì ಪೆಟ್ರೋಲ್‌ ಮತ್ತು 140 ಹೆಚ್‌ಪಿ ಪವರ್‌, 242ಎನ್‌ಎಂ ಪೀಕ್‌ ಟಾಕ್‌ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.

9.69 ಲಕ್ಷ
ಜತೆಗೆ ಈ ಸೆಗೆ¾ಂಟ್‌ ಕಾರುಗಳ ಬೆಲೆ 9.69 ಲಕ್ಷದಿಂದ ಆರಂಭವಾಗಲಿದ್ದು, ಕಡಿಮೆ ಬೆಲೆ ಮತ್ತು ಆಕರ್ಷಕ ಲುಕ್‌ ಹೊಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next