ಹೈದರಾಬಾದ್ : ಖ್ಯಾತ ನಟಿ, ಬಿಜೆಪಿ ನಾಯಕಿ ಖುಷ್ಬು ಸುಂದರ್ ಅಸ್ವಸ್ಥರಾಗಿದ್ದು, ತೀವ್ರ ಜ್ವರದಿಂದ ಎಪ್ರಿಲ್ 7, ಶುಕ್ರವಾರ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಖುಷ್ಬು ಅವರೇ ಸುದ್ದಿಯನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳು ತಮ್ಮ ಆರೋಗ್ಯವನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ಎಚ್ಚರಿಕೆ ಚಿಹ್ನೆಗಳನ್ನು ನಿರ್ಲಕ್ಷಿಸದಂತೆ ಅವರು ಸಲಹೆ ನೀಡಿದ್ದಾರೆ.
ಟ್ವಿಟ್ಟರ್‌ನಲ್ಲಿ “ನಾನು ಹೇಳುತ್ತಿರುವಂತೆ, ಜ್ವರ ಕೆಟ್ಟದ್ದು. ಅದು ನನ್ನ ಮೇಲೆ ಪರಿಣಾಮ ಬೀರಿದೆ. ಅತಿ ಹೆಚ್ಚು ಜ್ವರ, ದೇಹದ ನೋವು ಮತ್ತು ದೌರ್ಬಲ್ಯ ಕಾಡುತ್ತದೆ. ಅದೃಷ್ಟವಶಾತ್ ಅಪೋಲೋ ಹೈದರಾಬಾದ್ ನಲ್ಲಿ ಉತ್ತಮ ಆರೈಕೆಯಲ್ಲಿದ್ದೇನೆ, ಯಾವಾಗಲೂ ಚಿಹ್ನೆಗಳನ್ನು ನಿರ್ಲಕ್ಷಿಸಬೇಡಿ. ಚೇತರಿಕೆಯ ಹಾದಿಯಲ್ಲಿದ್ದೇನೆ, ಆದರೆ ಬಹಳ ದೂರ ಹೋಗಬೇಕಾಗಿದೆ.” ಎಂದು ಬರೆದಿದ್ದಾರೆ.