Advertisement

ಖಂಡ್ರೆ ಪಂಥಾಹ್ವಾನ ಒಪ್ಪಿದ ಖೂಬಾ

03:38 PM Oct 27, 2020 | Suhan S |

ಬೀದರ: ವಸತಿ ಹಗರಣ, ಜಿಲ್ಲಾ ಅಭಿವೃದ್ಧಿ ಕುರಿತಂತೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಮತ್ತು ಸಂಸದ ಭಗವಂತ ಖೂಬಾ ಅವರ ಮಧ್ಯ ಬಹಿರಂಗ ಚರ್ಚೆಗೆ ಕೊನೆಗೂ ಅಂತಿಮ ಮಹೂರ್ತ ನಿಗದಿಯಾಗಿದೆ. ಖಂಡ್ರೆ ಅವರು ನೀಡಿದ್ದ ಪಂಥಾಹ್ವಾನವನ್ನು ಒಪ್ಪಿಕೊಂಡಿರುವ ಸಂಸದ ಖೂಬಾ, ನ. 5ರಂದೇಚರ್ಚಿಸೋಣ. ಆದರೆ, ಗಣೇಶ ಮೈದಾನ ಬದಲು ರಂಗ ಮಂದಿರದಲ್ಲಿ ವೇದಿಕೆ ಸಿದ್ಧಪಡಿಸೋಣ ಎಂದು ಹೇಳಿದ್ದಾರೆ.

Advertisement

ಬಹಿರಂಗ ಚರ್ಚೆಯ ನಿಮ್ಮ ಆಹ್ವಾನಕ್ಕೆ ನಾನು ಒಪ್ಪಿಕೊಂಡಿದ್ದೇನೆ ಎಂದು ಸಂಸದ ಖೂಬಾ ಅವರು ಶಾಸಕ ಖಂಡ್ರೆಗೆ ಪತ್ರ ಬರೆದಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದೊಂದು ಮಾದರಿ ಚರ್ಚೆಯಾಗಲಿ ಎಂಬುದು ನನ್ನ ಆಶಯ. ಚರ್ಚೆಯೂ ಸೂಸುತ್ರವಾಗಿ ನಡೆಯಲು ಹಿರಿಯ ಶಾಸಕ ಬಂಡೆಪ್ಪ ಖಾಶೆಂಪುರ್‌ ಅಧ್ಯಕ್ಷತೆಯಲ್ಲಿಸಮಿತಿ ರಚಿಸಿ ಅದಕ್ಕೆ ಜಿಲ್ಲೆಯ ಎಲ್ಲ ಶಾಸಕರು, ಎಂಎಲ್‌ಸಿಗಳನ್ನು ಸದಸ್ಯರನ್ನಾಗಿ ನೇಮಿಸೊಣ. ಜತೆಗೆ ಸಮಯಪರಿಪಾಲನೆ, ವಿಷಯಗಳು ದಾರಿ ತಪ್ಪದಂತೆ ನೋಡಿಕೊಳ್ಳಲು ಒಬ್ಬ ಮಧ್ಯಸ್ಥಗಾರರನ್ನು ನೇಮಿಸೋಣ. ಇನ್ನೂ ಚರ್ಚೆಗೆ ತಗಲುವು ವೆಚ್ಚದಲ್ಲಿ ನಾನು ನನ್ನ ಪಾಲಿನ ಖರ್ಚು ಭರಿಸುತ್ತೇನೆ ಎಂದಿದ್ದಾರೆ.

ಚರ್ಚೆಯಲ್ಲಿ ಭ್ರಷ್ಟಚಾರ, ಸ್ವಜನಪಕ್ಷಪಾತ,  ಮನೆ ಹಗರಣ, ಬ್ರಿಮ್ಸ್‌ ಆಸ್ಪತ್ರೆಯಲ್ಲಿ ನಡೆದ ಅವ್ಯವಹಾರ, ಶಾಂತಿವರ್ಧಕ ಶಿಕ್ಷಣ ಸಂಸ್ಥೆ, ಭಾಲ್ಕಿ ಹಿರೇಮಠ ಸಂಸ್ಥಾನ, ಬಿಎಸ್‌ಎಸ್‌ ಕೆ ಮತ್ತು ಎಂಜಿಎಸ್‌ಎಸ್‌ಕೆ ಕಾರ್ಖಾನೆ, ಅನುಭವ ಮಂಟಪಕ್ಕೆ ಸಂಬಂಧಿಸಿದ ವಿಷಯಗಳು ಸೇರಿ ಜಿಲ್ಲೆಯ ಅಭಿವೃದ್ಧಿ ಬಗ್ಗೆ ಚರ್ಚಿಸೋಣ. ನಿಮ್ಮ ಎಲ್ಲಾ ವಿಷಯಗಳಿಗೆ ಉತ್ತರಿಸಲು ನಾನು ಸಿದ್ಧನಿದ್ದು, ನನ್ನೆಲ್ಲ ಸವಾಲುಗಳಿಗೆ ಉತ್ತರಿಸಲು ನೀವು ಸಿದ್ಧರಾಗಿ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಚರ್ಚೆಗೆ ಆಮಂತ್ರಣ ಪತ್ರಿಕೆ ಮುದ್ರಿಸಿ, ಪ್ರೇಕ್ಷಕರಾಗಿ ಎಲ್ಲಾ ಚುನಾಯಿತ ಪ್ರತಿನಿಧಿಗಳು, ಪರಾಭವಗೊಂಡ ಅಭ್ಯರ್ಥಿಗಳು, ಎಲ್ಲ ಕ್ಷೇತ್ರದ ಮುಖಂಡರು, ಶಿಕ್ಷಕ ವೃಂದದವರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಮಾಧ್ಯಮದವರನ್ನುಆಹ್ವಾನಿಸಿ ಬಹಿರಂಗ ಚರ್ಚೆಯನ್ನು ಅರ್ಥಪೂರ್ಣವಾಗಿ ನಡೆಸೋಣ ಎಂದು ಖೂಬಾ ಹೇಳಿದ್ದಾರೆ.

ಖಂಡ್ರೆ ಕುರಿತು ವೈಯಕ್ತಿಕ ಟೀಕೆ ಸಲ್ಲ :

Advertisement

ಬೀದರ: ಸಂಸದ ಭಗವಂತ ಖೂಬಾ ಅವರು ಸ್ವಾತಂತ್ರ್ಯ ಹೋರಾಟಗಾರರಾದ, ಮಾಜಿ ಸಚಿವ ಭೀಮಣ್ಣ ಖಂಡ್ರೆ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರ ಕುರಿತು ವೈಯಕ್ತಿಕ ಟೀಕೆ ಮಾಡಿರುವುದು ಸರಿಯಲ್ಲ. ಅವರು ತಮ್ಮ ಸ್ಥಾನದ ಘನತೆ ಕಾಪಾಡಬೇಕು ಎಂದು ಶಾಸಕ ರಹೀಮ್‌ ಖಾನ್‌ ಹೇಳಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ರಾಜಕೀಯ ಅಭಿವೃದ್ಧಿ ಹಾಗೂ ಜನ ಹಿತಕ್ಕೆ ಬಳಕೆಯಾಗಬೇಕೇ ಹೊರತು ಟೀಕೆ-ಟಿಪ್ಪಣಿಗಳಿಗೆ ವೇದಿಕೆಯಾಗಬಾರದು ಎಂದು ಸಲಹೆ ನೀಡಿರುವ ಶಾಸಕ ಖಾನ್‌, ಭೀಮಣ್ಣ ಖಂಡ್ರೆ ಅವರು ಬೀದರ ಜಿಲ್ಲೆಗೆ ನೀಡಿರುವ ಕೊಡುಗೆ ಮರೆಯಲಾಗದು. ಅವರು ಲಿಂಗಾಯತರು ಸೇರಿದಂತೆ ರಾಜ್ಯದ ಸರ್ವ ಸಮುದಾಯಗಳ ಏಳ್ಗೆಗೆ ಶ್ರಮಿಸಿದ್ದರು. ಅವರ ಕಾರ್ಯಗಳನ್ನು ರಾಜ್ಯದ ಜನ ಇಂದಿಗೂ ಸ್ಮರಿಸುತ್ತಾರೆ ಎಂದು ತಿಳಿಸಿದ್ದಾರೆ.

ಸಂಸದ ಖೂಬಾ ಅವರು ಅಭಿವೃದ್ಧಿಯ ವಿಷಯದಲ್ಲಿ ಪೈಪೋಟಿ ನಡೆಸಲಿ. ಭಾಲ್ಕಿ ವಸತಿ ಯೋಜನೆಯಲ್ಲಿಯಾವುದೇ ಅವ್ಯವಹಾರ ನಡೆದಿಲ್ಲ. ಖಂಡ್ರೆ ಅವರು ಸಾವಿರಾರು ಮನೆ ಇಲ್ಲದವರಿಗೆ ಮನೆ ಮಂಜೂರು ಮಾಡಿಸಿ ನೆರವಾಗಿದ್ದಾರೆ. ಜಿಲ್ಲೆಯ ಇತರೆ ತಾಲೂಕುಗಳಲ್ಲೂ ಮನೆಮಂಜೂರಾಗಿವೆ. ಆದರೆ, ಸಂಸದರು ಕೇವಲ ಭಾಲ್ಕಿಯ ವಸತಿ ಯೋಜನೆ ಕುರಿತು ಪದೇ ಪದೇ ದೂರು ಸಲ್ಲಿಸಿ,ಅನುದಾನ ತಡೆಗೆ ಕಾರಣರಾಗಿ, ಬಡ ಫಲಾನುಭವಿಗಳಿಗೆ ತೊಂದರೆ ಉಂಟು ಮಾಡುತ್ತಿರುವುದು ಸೂಕ್ತವಲ್ಲ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next