Advertisement

ಖೋ ಖೋ ಉಸಿರಾಗಿಸಿಕೊಂಡ ಯರಮರಸ್‌

06:24 PM Sep 22, 2021 | Team Udayavani |

ರಾಯಚೂರು: ಒಂದೊಂದು ಪ್ರದೇಶ ತನ್ನದೇಯಾದ ವಿಶೇಷ ಹೆಗ್ಗುರುತಿನಿಂದ ಪ್ರಸಿದ್ಧಿ ಹೊಂದಿರುತ್ತದೆ. ‌ ಅದೇ ರೀತಿ ಸಮೀಪದ ಯರಮರಸ್‌ ಖೋ ಖೋ
ಕ್ರೀಡೆಯಿಂದಲೇ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆಯುವ ಮೂಲಕ ಸಾಧನೆಗೆ ಗರಿಮೆ ಮುಡಿಗೇರಿಸಿಕೊಂಡಿದೆ. ಈಚೆಗೆ ರಾಯಚೂರು ಜಿಲ್ಲೆಯು ಕ್ರೀಡೆ ವಿಚಾರದಲ್ಲಿ ಸಾಕಷ್ಟು ಹೆಸರು ಮಾಡುತ್ತಿದೆ.

Advertisement

ಅಂಡರ್‌19ಕ್ರೀಡೆಯಲ್ಲಿ ಜಿಲ್ಲೆಯ ಯುವಕ ವಿದ್ಯಾಧರ ಪಾಟೀಲ್‌ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್‌ ಪಂದ್ಯಾವಳಿ ಆಡಿ ಗಮನ ಸೆಳೆದರೆ; ಖೋ ಖೋದಲ್ಲಿ ಜಿಲ್ಲೆಯ ಅದರಲ್ಲೂ ಯರಮರಸ್‌ ಗ್ರಾಮದ ಮಕ್ಕಳ ಸಾಧನೆ ನಿಜಕ್ಕೂ ಹುಬ್ಬೇರಿಸುವಂತೆ ಮಾಡುತ್ತದೆ. ರಾಯಚೂರು ಜಿಲ್ಲಾ ಖೋ ಖೋ ಅಸೋಸಿಯೇಷನ್‌ನಿಂದ ಪ್ರತಿ ವರ್ಷ ಒಬ್ಬರಲ್ಲ ಒಬ್ಬರು ರಾಷ್ಟ್ರಮಟ್ಟದ ಖೋ ಖೋ ಪಂದ್ಯಾವಳಿಗೆ ಆಯ್ಕೆಯಾಗುತ್ತಿರುವುದು ಗಮನಾರ್ಹ. ಅಸೋಸಿಯೇಷನ್‌ ಗೂ ಮುಂಚೆಯೇ ಹುಟ್ಟಿಕೊಂಡ ಆದಿಬಸವೇಶ್ವರ ಖೋ ಖೋ ಕ್ಲಬ್‌ ‌ಅಕ್ಷರಶಃ ಕ್ರೀಡಾಪಟುಗಳನ್ನು ತಯಾರು ಮಾಡುವ ಕಾರ್ಖಾನೆಯಂತೆ ಕೆಲಸಮಾಡುವ ಮೂಲಕ ಜನಮೆಚ್ಚುಗೆ ಗಳಿಸುತ್ತಿದೆ.

ಒಟ್ಟು 17ಜನ ರಾಷ್ಟ್ರಮಟ್ಟಕ್ಕೆ: ಈ ಬಾರಿಯೂ ರಾಷ್ಟ್ರೀಯ ಮಟ್ಟದ ಖೋ ಖೋ ಪಂದ್ಯಾವಳಿಗೆ ಯರಮರಸ್‌ ಗ್ರಾಮದ ಸರ್ಕಾರಿ ಪ್ರೌಢಶಾಲೆ8ನೇತರಗತಿ ವಿದ್ಯಾರ್ಥಿನಿ ಮಂಜುಳಾ ಆಯ್ಕೆಯಾಗಿದ್ದಾರೆ. ಈಚೆಗೆ ಕೋಲಾರದಲ್ಲಿ ನಡೆದ ಸೆಲೆಕ್ಷನ್‌ ಕ್ಯಾಂಪ್‌ನಲ್ಲಿ ಇಲ್ಲಿನ ತಂಡ ಕೂಡ ಪಾಲ್ಗೊಂಡಿತ್ತು. ಅದರಲ್ಲಿ ಮೂವರನ್ನು ಕಾಯ್ದಿರಿಸಿದ್ದಾರೆ, ‌ರಾಷ್ಟ್ರೀಯ ಕ್ರೀಡಾಕೂಟಕ್ಕೆ ಮಂಜುಳಾರನ್ನು ಆಯ್ಕೆ ಮಾಡಲಾಗಿದೆ. ಅಚ್ಚರಿ ಎಂದರೆ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಕೂಡ ಇದೇ ಗ್ರಾಮದ ಬರೋಬ್ಬರಿ 13 ಬಾಲಕಿಯರು ಹಾಗೂ ಮೂವರು ಬಾಲಕರು ಕೂಡ ಆಯ್ಕೆಯಾಗಿದ್ದರು. ಎಲ್ಲ ವಿದ್ಯಾರ್ಥಿಗಳು ಯರಮರಸ್‌ ಗ್ರಾಮದವರೇ ಎನ್ನುವುದು ವಿಶೇಷ.

ಸತತ ರಾಜ್ಯಮಟ್ಟಕ್ಕೆ ಆಯ್ಕೆ: ಈ ಆದಿಬಸವೇಶ್ವರ ಖೋ ಖೋ ಕ್ಲಬ್‌ ‌ ನ ಸಾಧನೆ ಇಲ್ಲಿಗೆ ಮುಗಿಯುವುದಿಲ್ಲ. 2006ರಿಂದ ಈ ವರೆಗೆ ‌ ಪ್ರತಿ ವರ್ಷ ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಇಲ್ಲಿನ ತಂಡ ಕಡ್ಡಾಯವಾಗಿ ಆಯ್ಕೆಯಾಗುತ್ತದೆ. ಅಲ್ಲದೇ, ದಸರಾ ಕೀಡಾಕೂಟಕ್ಕೂ ಆಯ್ಕೆಯಾಗುತ್ತಿದೆ. ಸೌತ್‌ ಜೋನ್‌ ಕ್ರೀಡಾಕೂಟದಲ್ಲೂ ರಾಜ್ಯವನ್ನು ಪ್ರತಿನಿಧಿಸುವ ತಂಡದಲ್ಲಿ ಇಲ್ಲಿನ ಮಕ್ಕಳಿಗೆ ಕಡ್ಡಾಯ ಸ್ಥಾನ ಇರುತ್ತದೆ. ಅದಕ್ಕೆ ಮುಖ್ಯ ಕಾರಣವೇ ಕಠಿಣ ಅಭ್ಯಾಸ. ಇಲ್ಲಿ ಮಕ್ಕಳು ತಪಸ್ಸು ಮಾvುವ ‌ ರೀತಿಯಲ್ಲಿ ದಿನ ಬೆಳಗ್ಗೆ ‌ ಸಂಜೆ ಕಡ್ಡಾಯವಾಗಿ ಅಭ್ಯಾಸದಲ್ಲಿ ಪಾಲ್ಗೊಳ್ಳುತ್ತಾರೆ. ಬೆಳಗ್ಗೆ ಎರಡು ಗಂಟೆ ಸಂಜೆ ಎರಡು ಗಂಟೆ ಅಭ್ಯಾಸ ಮಾತ್ರ ತಪ್ಪುವುದಿಲ್ಲ. ಒಮ್ಮೊಮ್ಮೆ ನೆರಳು ಬೆಳಕಿನಲ್ಲೂ ಅಭ್ಯಾಸ ಮಾಡುತ್ತಾರೆ. ಅದರಲ್ಲೂ ಬಾಲಕಿಯರೇ ಹೆಚ್ಚಾಗಿ ಅಭ್ಯಾಸದಲ್ಲಿ ತೊಡಗುವುದು ಗಮನಾರ್ಹ

ಕಡುಬಡತನದ ಪ್ರತಿಭೆ ಮಂಜುಳಾ
ಈ ಬಾರಿ ರಾಷ್ಟ್ರಮಟ್ಟದಖೋಖೋ ಪಂದ್ಯಾವಳಿಗೆ ಆಯ್ಕೆಯಾದ ಜಿಲ್ಲೆಯ ಮಂಜುಳಾ ಅಕ್ಷರಶಃ ಕಡು ಬಡತನದ ಬೆಳೆದ ಪ್ರತಿಭೆ. ಕಳೆದ ತಿಂಗಳಷ್ಟೇ ತಂದೆ ಕಳೆದುಕೊಂಡು ಭಾರದ ಮನಸಿನಲ್ಲೇ ಆಡಲುಹೋಗಿದ್ದಾಳೆ. ತಂದೆ ಸೋಮಶೇಖರಪ್ಪ ಕೂಲಿ ಮಾಡಿಕೊಂಡಿದ್ದರೆ, ತಾಯಿ ಜಯಮ್ಮಕೂಡ ಅವರಿವರ ಮನೆಗೆಲಸ ಮಾಡಿ ಜೀವನ ನಡೆಸುತ್ತಿದ್ದರು. ಮಂಜುಳಾ ಕೂಡ ತಾಯಿ ಜತೆ ಮನೆಗೆಲಸ ಮಾಡಿಕೊಂಡು ಶಾಲೆ ಓದುವ ಜತೆಗೆಕ್ರೀಡೆಯಲ್ಲೂ ಭರವಸೆ ಮೂಡಿಸಿರುವುದು ಗಮನಾರ್ಹ. ಮನೆಯಲ್ಲಿ ಎಷ್ಟೇ ಕಷ್ಟವಿದ್ದರೂ ಖೋಖೋ ಕ್ರೀಡಾಭ್ಯಾಸಕ್ಕೆ ಮಾತ್ರ ಧಕ್ಕೆ ಬಾರದಂತೆ ಮಂಜುಳಾ ಶ್ರದ್ಧೆಯಿಂದ ಆಡಿದ್ದರು. ಅದರ ಫಲವೇ ಇಂದು ಅವರು ರಾಷ್ಟ್ರಮಟ್ಟದ ತಂಡಕ್ಕೆ ಆಯ್ಕೆಯಾಗಿರುವುದು. ಈಗ ತಂದೆ ಇಲ್ಲದಕುಟುಂಬಕ್ಕೆ ತಾಯಿಯೇ ಆಧಾರ. ಇಂಥ ಪ್ರತಿಭೆಗಳಿಗೆ ಬೆನ್ನು ತಟ್ಟಿ ಪ್ರೋತ್ಸಾಹಿಸುವಕೈಗಳ ಅಗತ್ಯವಿದೆ.

Advertisement

ಇಂದುಖೋಖೋದಲ್ಲಿಯರಮರಸ್‌ ದೊಡ್ಡ ಮಟ್ಟದಲ್ಲಿ ಸಾಧನೆ ಮಾಡುತ್ತಿದೆ ಎಂದರೆ ಅದಕ್ಕೆ ಗ್ರಾಮದ ಪ್ರತಿಯೊಬ್ಬರ ಸಹಕಾರಕಾರಣ. ಈ ಹಿಂದೆಕೂಡ ಸಾಕಷ್ಟು ಮಕ್ಕಳು ರಾಷ್ಟ್ರ ಮಟ್ಟದ ಆಟಕ್ಕೆ ಆಯ್ಕೆಯಾಗಿದ್ದಾರೆ.ಕೋಲಾರದಲ್ಲಿ ನಡೆದ ಆಯ್ಕೆ ಪ್ರಕ್ರಿಯೆ ನಮ್ಮ ಇಡೀ ತಂಡಹೋಗಿತ್ತು. ಅಲ್ಲಿ ಮೂವರು ಆಯ್ಕೆಯಾಗಿದ್ದರು. ಆದರೆ, ಆ ದಿನ ಮಂಜುಳಾದ್ದು ಆಗಿದ್ದರಿಂದ ಆಯ್ಕೆಯಾಗಿದ್ದಾಳೆ. ನಮ್ಮಲ್ಲಿಖೋಖೋ ಇನ್ನೂ ದೊಡ್ಡ ಮಟ್ಟದಲ್ಲಿ ಬೆಳೆಯಬೇಕು. ಅದಕ್ಕೆ ಜಿಲ್ಲೆಯಲ್ಲಿ ಅತ್ಯುನ್ನತಖೋಖೋ ಕ್ರೀಡಾಂಗಣನಿರ್ಮಾಣವಾಗಬೇಕು.
ಲಿಂಗಣ್ಣ ಯರಮರಸ್‌, ತರಬೇತುದಾರ

ಸಿದ್ದಯ್ಯಸ್ವಾಮಿ ಕುಕುನೂರು

Advertisement

Udayavani is now on Telegram. Click here to join our channel and stay updated with the latest news.

Next