Advertisement

ಹರಾಜ್‌ನಲ್ಲಿ ಖಿಲಾರಿ ತಳಿ ಮಾರಾಟ

03:10 PM Jun 13, 2020 | Suhan S |

ಬಂಕಾಪುರ: ಪಟ್ಟಣದ ಖಿಲಾರಿ ತಳಿ ಗೋವು ಸಂವರ್ಧನಾ ಕೇಂದ್ರದಲ್ಲಿ ಹರಾಜಿನ ಮೂಲಕ ಜಾನುವಾರುಗಳನ್ನು ಮಾರಾಟ ಮಾಡಲಾಯಿತು.

Advertisement

ಕಳೆದ ಸಾಲಿನಲ್ಲಿ ಸಾರ್ವಜನಿಕ ಬಹಿರಂಗ ಹರಾಜಿನಲ್ಲಿ ವಿಲೇವಾರಿ ಆಗದೇ ಉಳಿದ ಜಾನುವಾರುಗಳನ್ನು ಖಿಲಾರಿ ತಳಿ ಗೋವು ಸಂವರ್ಧನಾ ಕೇಂದ್ರದ ಅಧಿಕಾರಿಗಳು ಸರ್ಕಾರದ ಆದೇಶದ ಮೇರೆಗೆ ಸರ್ಕಾರದ ನೋಂದಾಯಿತ ಗೋ ಶಾಲೆ ಮತ್ತು ಸಂಸ್ಥೆಗಳಿಗೆ 16 ಆಕಳು, ಎರಡು ಹೋರಿಗಳನ್ನು ಹರಾಜಿನ ಮೂಲಕ ಮಾರಾಟ ಮಾಡಲಾಯಿತು.

ಹರಾಜಿನಲ್ಲಿ ಒಂದು ಸಂಸ್ಥೆ ಎರಡು ಗೋ ಶಾಲೆಗಳು ಪಾಲ್ಗೊಂಡಿದ್ದವು. ಇವುಗಳಲ್ಲಿ ಬಾಲೆಹೋಸುರಿನ ದಿಂಗಾಲೇಶ್ವರಮಠದ ಕುಮಾರೇಶ್ವರ ಜೀವ ವಿಕಸನ ಟ್ರಸ್ಟ್‌ ಗೋಶಾಲೆ ಎಂಟು ಆಕಳು ಒಂದು ಹೋರಿಯನ್ನು ಹರಾಜಿನಲ್ಲಿ ಖರೀದಿಸಿದರೆ, ದಾವಣಗೆರೆ ಹೆಬ್ಟಾಳ ಮಠದ ಗೋಶಾಲೆ ಐದು ಆಕಳು ಒಂದು ಹೋರಿಯನ್ನು ಲೀಲಾವಿನಲ್ಲಿ ಖರೀದಿಸಿತು. ಬೆಳಗಾವಿ ಯುನೈಟೆಡ್‌ ಸಮಾಜ ಕಲ್ಯಾಣ ಟ್ರಸ್ಟ್‌ಗೆ ಮೂರು ಆಕಳುಗಳನ್ನು ಮಾರಲಾಯಿತು. ಬಾಲೆಹೊಸೂರಿನ ದಿಂಗಾಲೇಶ್ವರ ಶ್ರೀಗಳು, ಧಾರವಾಡ ಜಂಟಿ ನಿರ್ದೇಶಕ ಡಾ| ಜೆ.ಪಂಪಾಪತಿ, ಕೃಷಿ ವಿವಿ ಪ್ರಾಧ್ಯಾಪಕ ಡಾ| ಅನೀಲ ಪಾಟೀಲ, ಬಂಕಾಪುರ ಗೋ ಸಂವರ್ಧನ ಕೇಂದ್ರದ ಉಪನಿರ್ದೇಶಕ ಡಾ| ಬಸವರಾಜ ಹಿರೇಮಠ, ಜ್ಯೋತಿ ಹಿರೇಮಠ, ಬಿ.ಎಚ್‌.ಬ್ಯಾಡಗಿ, ಕೃಷ್ಣಾ ನಾಯಕ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next