Advertisement

ಉಕ್ರೇನ್ ನ ಖೇರ್ಸನ್ ನಗರ ರಷ್ಯಾ ಸೇನೆ ವಶಕ್ಕೆ; 9,000 ರಷ್ಯಾ ಸೈನಿಕರ ಹತ್ಯೆ; ಉಕ್ರೇನ್

02:49 PM Mar 03, 2022 | Team Udayavani |

ಮಾಸ್ಕೋ/ಕೀವ್: ಉಕ್ರೇನ್ ನ ಪ್ರಮುಖ ನಗರಗಳನ್ನು ಗುರಿಯಾಗಿರಿಸಿಕೊಂಡು ರಷ್ಯಾ ಸೇನಾಪಡೆ ದಾಳಿಯನ್ನು ತೀವ್ರಗೊಳಿಸಿದ್ದು, ಗುರುವಾರ (ಮಾರ್ಚ್ 03) ರಷ್ಯಾ ಸೇನೆ ಉಕ್ರೇನ್ ನ ಪ್ರಮುಖ ನಗರವಾದ ಖೇರ್ಸನ್ ಅನ್ನು ವಶಪಡಿಸಿಕೊಂಡಿರುವುದಾಗಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

Advertisement

ಇದನ್ನೂ ಓದಿ:ನಂಬಲಸಾಧ್ಯ!; ಭಾರತದ ಕೋವಿಡ್ ಸಾವುಗಳ ಕುರಿತು ಚಿದಂಬರಂ ಶಂಕೆ

ಉಕ್ರೇನ್ ನ ಚೆರ್ನಿಹಿವ್ ನಗರದಲ್ಲಿರುವ ತೈಲಾಗಾರದ ಮೇಲೆ ರಷ್ಯಾ ಪಡೆ ಶೆಲ್ ದಾಳಿ ನಡೆಸಿದ ನಂತರ ಬೆಂಕಿ ಹೊತ್ತಿಕೊಂಡಿದ್ದು, ಖಾರ್ಕಿವ್ ನಗರದಲ್ಲಿ ವಿದ್ಯುತ್ ಸರಬರಾಜನ್ನು ಸ್ಥಗಿತಗೊಳಿಸಲಾಗಿದೆ ಎಂದು ವರದಿ ಹೇಳಿದೆ.

ಬುಧವಾರ ಕೂಡಾ ರಷ್ಯಾ ಪಡೆ ಉಕ್ರೇನ್ ನ ಎರಡು ಬಂದರುಗಳನ್ನು ವಶಕ್ಕೆ ತೆಗೆದುಕೊಂಡಿತ್ತು. ಅಲ್ಲದೇ ಕೀವ್ ನಗರದ ಲ್ಲಿ ಬಾಂಬ್ ಗಳ ಸುರಿಮಳೆಗೈದಿರುವುದಾಗಿ ವರದಿ ವಿವರಿಸಿದೆ. ರಷ್ಯಾ ದಾಳಿಯಲ್ಲಿ ಅಂದಾಜು ಎರಡು ಸಾವಿರ ಮಂದಿ ಸಾವನ್ನಪ್ಪಿರುವುದಾಗಿ ಶಂಕಿಸಲಾಗಿದೆ.

ಉಕ್ರೇನ್ ನ ಎರಡನೇ ಅತೀ ದೊಡ್ಡ ನಗರವಾದ ಖಾರ್ಕಿವ್ ನಲ್ಲಿ ರಷ್ಯಾದ ಭಾರೀ ಪ್ರಮಾಣದ ಶೆಲ್ ಮತ್ತು ಕ್ಷಿಪಣಿ ದಾಳಿಗೆ ಪುರಾತನ ಯೂನಿರ್ವಸಿಟಿ ಹಾಗೂ ಪೊಲೀಸ್ ಕಟ್ಟಡ ಸೇರಿದಂತೆ ಹಲವು ಕಟ್ಟಡಗಳು ಧ್ವಂಸಗೊಂಡಿರುವುದಾಗಿ ವರದಿ ತಿಳಿಸಿದೆ.

Advertisement

ಮತ್ತೊಂದೆಡೆ ಉಕ್ರೇನ್ ನಲ್ಲಿ ಯಾವುದೇ ವಿದ್ಯಾರ್ಥಿಯನ್ನು ಒತ್ತೆಯಾಳನ್ನಾಗಿ ಇರಿಸಿಕೊಂಡ ಬಗ್ಗೆ ಯಾವುದೇ ಮಾಹಿತಿಯಾಗಲಿ ಅಥವಾ ವರದಿಯಾಗಲಿ ಬಂದಿಲ್ಲ ಎಂದು ಭಾರತ ಸರಕಾರ ತಿಳಿಸಿದೆ. ಪ್ರತಿಪಕ್ಷಗಳ ಆರೋಪದ ನಡುವೆಯೂ ಗುರುವಾರ ಭಾರತದ ಆಪರೇಷನ್ ಗಂಗಾ ಕಾರ್ಯಾಚರಣೆಯಡಿ 19 ವಿಮಾನಗಳ ಮೂಲಕ ಉಕ್ರೇನ್ ನ ನೆರೆದೇಶಗಳ ಗಡಿಯಲ್ಲಿರುವ 3,726 ಭಾರತೀಯರನ್ನು ಕರೆತರಲಾಗುತ್ತಿದೆ ಎಂದು ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂದ್ಯಾ ತಿಳಿಸಿದ್ದಾರೆ. ಯುದ್ಧಗ್ರಸ್ತ ಉಕ್ರೇನ್ ನಲ್ಲಿ ಇನ್ನೂ ಸುಮಾರು 8,000 ಭಾರತೀಯ ವಿದ್ಯಾರ್ಥಿಗಳು ಸಿಲುಕಿಕೊಂಡಿರುವುದಾಗಿ ವರದಿ ತಿಳಿಸಿದೆ.

ಯುದ್ಧದಲ್ಲಿ ರಷ್ಯಾದ ಸೈನಿಕರ ಮಾರಣಹೋಮ:

ಕಳೆದ 8 ದಿನಗಳಿಂದ ರಷ್ಯಾ ಮತ್ತು ಉಕ್ರೇನ್ ನಡುವೆ ಮುಂದುವರಿದಿರುವ ಯುದ್ಧದಲ್ಲಿ ರಷ್ಯಾದ ಒಂಬತ್ತು ಸಾವಿರ ಸೈನಿಕರನ್ನು ಹತ್ಯೆಗೈದಿದ್ದು, 290ಕ್ಕೂ ಅಧಿಕ ಯುದ್ಧ ಟ್ಯಾಂಕ್ ಗಳನ್ನು , 90 ಸೇನಾ ವಾಹನಗಳನ್ನು ನಾಶಗೊಳಿಸಿರುವುದಾಗಿ ಉಕ್ರೇನ್ ಅಧ್ಯಕ್ಷ ಝೆಲೆನ್ ಸ್ಕಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next