Advertisement

ಖೇಲೋ ಇಂಡಿಯಾ ಬಂಪರ್‌ ಯೋಜನೆ

10:53 AM Jul 24, 2018 | Team Udayavani |

ಹೊಸದಿಲ್ಲಿ: ಕೇಂದ್ರ ಸರಕಾರ ಆರಂಭಿಸಿದ ಖೇಲೋ ಇಂಡಿಯಾ ಯೋಜನೆ ಪ್ರಸಕ್ತ ಋತುವಿನಿಂದ ಇನ್ನಷ್ಟು ಆಶಾದಾಯಕ ವಾಗಲಿದೆ. “ಖೇಲೋ ಇಂಡಿಯಾ ಟ್ಯಾಲೆಂಟ್‌ ಐಡೆಂಟಿಫಿಕೇಶನ್‌ ಡೆವಲಪ್‌ಮೆಂಟ್‌’ (ಟಿಐಸಿ) ಯೋಜನೆಯಡಿ ದೇಶದ 734 ಮಂದಿ ಯುವ ಪ್ರತಿಭಾನ್ವಿತ ಕ್ರೀಡಾಪಟುಗಳಿಗೆ ಭಾರತೀಯ ಕ್ರೀಡಾ ಪ್ರಾಧಿಕಾರದ ವತಿಯಿಂದ (ಸಾಯ್‌) ಸ್ಕಾಲರ್‌ಶಿಪ್‌ ನೀಡಲು ಯೋಜಿಸಿದೆ. ಭಾರತೀಯ ಕ್ರೀಡಾರಂಗದಲ್ಲಿ ಆಮೂಲಾಗ್ರ ಬದಲಾವಣೆ ತರಲು ಸರಕಾರ ತೀರ್ಮಾನಿಸಿದ್ದು, ಕ್ರೀಡಾಪಟು
ಗಳು ಇದರ ಭರಪೂರ ಪ್ರಯೋ ಜನ ಪಡೆದುಕೊಳ್ಳಬೇಕು ಎಂದು ಈ ಸಂದರ್ಭ ಕ್ರೀಡಾ ಸಚಿವ ರಾಜ್ಯವರ್ಧನ್‌ ಸಿಂಗ್‌ ರಾಥೋಡ್‌ ಹೇಳಿದರು.

Advertisement

ಸ್ಕಾಲರ್‌ಶಿಪ್‌ ಪಡೆಯುವ ಕ್ರೀಡಾ ಪಟುಗಳು ಖೇಲೋ ಇಂಡಿಯಾದಿಂದ ಮಾನ್ಯತೆ ಪಡೆದ ಅಕಾಡೆಮಿ ಗಳಲ್ಲಿ ಉಚಿತ ತರಬೇತಿ ಪಡೆಯ ಲಿದ್ದಾರೆ. 385 ಬಾಲಕರು ಹಾಗೂ 349 ಬಾಲಕಿಯರ ಯಾದಿ ಈಗಾಗಲೇ ಅಂತಿಮಗೊಂಡಿದ್ದು, ಇವರೆಲ್ಲ ವಾರ್ಷಿಕ 1.2 ಲಕ್ಷ ರೂ. ಸ್ಕಾಲರ್‌ಶಿಪ್‌ ಪಡೆಯಲಿದ್ದಾರೆ. ಇದರಂತೆ ಪ್ರತೀ 3 ತಿಂಗಳಿಗೊಮ್ಮೆ 30 ಸಾವಿರ ರೂ. ಲಭಿಸಲಿದೆ. ಆಟಗಾರರ ಖರ್ಚು, ಚಿಕಿತ್ಸೆ, ಖಾಸಗಿ ಪ್ರಯಾಣ ಮೊದಲಾದ ವೆಚ್ಚಗಳಿಗೆ ಈ ಮೊತ್ತವನ್ನು ಬಳಸಿಕೊಳ್ಳಬಹುದಾಗಿದೆ. ಸ್ಕಾಲರ್‌ಶಿಪ್‌ ಪಡೆಯಲಿರುವ ಕ್ರೀಡಾ ಪ್ರತಿಭೆಗಳ ಯಾದಿ ಇನ್ನಷ್ಟೇ ಬಿಡುಗಡೆಯಾಗಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next