Advertisement
ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಯುವ ಸಬಲೀಕರಣ ಕ್ರೀಡಾ ಇಲಾಖೆ, ಸ್ಥಳೀಯ ಶಾಸಕರು,ಸಂಸದರ ಪ್ರದೇಶಾಭಿವೃದ್ಧಿ, ಬಯಲು ಸೀಮೆ ಪ್ರದೇ ಶಾಭಿವೃದ್ಧಿ ಅನುದಾನ ಬಳಕೆ ಹಾಗೂ ಯೋಜನೆಗಳಪಗ್ರತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕ್ರೀಡೆ ಹಾಗೂ ಯುವ ಸಬಲೀಕರಣಕ್ಕೆ ಆದ್ಯತೆ ನೀಡುವುದರ ಜೊತೆಗೆ ಎಲ್ಲ ತಾಲೂಕು ಕ್ರೀಡಾಂಗಣಗಳಿಗೂ ತರಬೇತುದಾರರನ್ನು ನೇಮಕ ಮಾಡಲಾಗುವುದು. ಆಟಗಾರರಿಗೆ ಪ್ರೋತ್ಸಾಹ ನೀಡಿ ಕ್ರೀಡೆಯನ್ನು ಉತ್ತಮ ಸ್ಥಿತಿಗೆಕೊಂಡೊಯ್ಯಲಾಗುವುದು ಎಂದರು.
Related Articles
Advertisement
ತಾಲೂಕು ಗುರುತಿಸಿ: ಆಲೂರು ತಾಲೂಕು ತುಂಬಾ ಹಿಂದುಳಿದಿದ್ದು, ನಂಜುಂಡಪ್ಪ ವರದಿಯಲ್ಲಿ ಬಿಟ್ಟು ಹೋಗಿದೆ. ಇನ್ನೊಂದು ಸಮಿತಿ ಅಥವಾ ಆಯೋಗ ರಚಿಸಿ ಸದ್ಯದ ಪರಿಸ್ಥಿತಿಯಲ್ಲಿ ಹಿಂದುಳಿದ ತಾಲೂಕುಗಳನ್ನು ಗುರುತಿಸಿ ಎಂದು ಶಾಸಕ ಎಚ್.ಕೆ. ಕುಮಾರ ಸ್ವಾಮಿಮನವಿಮಾಡಿದರು.ಈಗಿರುವಪಟ್ಟಿಯಲ್ಲಿಹಾಲಿ ಅಭಿವೃದ್ಧಿ ಹೊಂದಿ ರುವ ತಾಲೂಕು ಗಳನ್ನು ಕೈ ಬಿಟ್ಟು ಇನ್ನೂ ಹಿಂದುಳಿದ ತಾಲೂಕುಗಳನ್ನು ಸೇರಿಸಿ ಎಂದು ಶಾಸಕಪ್ರೀತಂಜೆ ಗೌಡ ಸಲಹೆ ನೀಡಿದರು.
ಕ್ರೀಡೆಗಳಿಗೆ ಒತ್ತು ನೀಡಿ: ಯುವ ಸಬಲೀಕರಣಕ್ಕೆ ಹೆಚ್ಚಿನ ಕಾರ್ಯಕ್ರಮಗಳನ್ನು ರೂಪಿಸಿಕೊಳ್ಳಬೇಕು. ಯುವಕರ ಸಬಲೀಕರಣಕ್ಕೆ ಶಿಬಿರಗಳ ಆಯೋಜಿಸ ಬೇಕು ಹಾಗೂ ಗ್ರಾಮೀಣ ಕ್ರೀಡೆಗಳಿಗೆ ಒತ್ತು ನೀಡ ಬೇಕು ಎಂದು ಶಾಸಕ ಎ.ಟಿ. ರಾಮಸ್ವಾಮಿ ಒತ್ತಾಯಿದರು.
ಯುವಕರ ಅಭಿವೃದ್ಧಿಗೆ ಸ್ವ ಸಹಾಯ ಸಂಘಗಳ ರಚಿಸುವುದರ ಮೂಲಕ ಪ್ರೋತ್ಸಾಹ ನೀಡು ವುದರಿಂದ ಸದೃಢಭಾರತ ನಿರ್ಮಾಣಮಾಡಲು ಸಾಧ್ಯ.ಈ ನಿಟ್ಟಿನಲ್ಲಿ ಯುವ ಸಬಲೀಕರಣಕ್ಕೆ ಒತ್ತು ನೀಡಬೇಕು ಎಂದು ಶಾಸಕ ಕೆ.ಎಂ ಶಿವಲಿಗೇಗೌಡಹೇಳಿದರು.
ಸಿಎಂ ಬದಲಿಸುವ ಪ್ರಶ್ನೆಯೇ ಇಲ್ಲ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಬದಲಿಸುವ ಪ್ರಶ್ನೆಯೇ ಇಲ್ಲ. ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸಿ, 100 ರಿಂದ 150 ಸ್ಥಾನ ಗೆಲ್ಲುತ್ತೇವೆ ಎಂದು ಯುವಜನ ಮತ್ತು ಕ್ರೀಡಾ ಸಬಲೀಕರಣ ಸಚಿವ ನಾರಾಯಣ ಗೌಡ ಹೇಳಿದರು.
ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿಕೆಗೆ ತಲೆಕೆಡಿಸಿ ಕೊಳ್ಳುವ ಅಗತ್ಯವಿಲ್ಲ. ಸರ್ಕಾರಕ್ಕೆ ತೊಂದರೆ ಆಗಿಲ್ಲ. ಅಭಿವೃದ್ಧಿ ಕಾರ್ಯಗಳಿಗೂ ಹಿನ್ನೆಡೆಯಾಗಿಲ್ಲ. ಯಡಿಯೂರಪ್ಪ ಮುಖ್ಯಮಂತ್ರಿಯಾಗುತ್ತಾರೆ ಎಂದು ನಂಬಿ ಬಿಜೆಪಿಗೆ ಬಂದಿದ್ದೇವೆ ಹೊರತು ಬೇರೆ ಯಾರನ್ನೂ ನಂಬಿ ಬಂದಿಲ್ಲ ಎಂದರು.
ಸಭೆಯಲ್ಲಿ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಆಯುಕ್ತ ಡಾ. ಎಚ್.ಎನ್.ಗೋಪಾಲ ಕೃಷ್ಣ, ಕಾರ್ಯಕ್ರಮ ಸಂಯೋಜನೆ ಹಾಗೂ ಸಾಂಖ್ಯೀಕ ಇಲಾಖೆಯ ನಿರ್ದೇಶಕ ಚಂದ್ರಶೇಖರ್, ಜಿಲ್ಲಾಧಿಕಾರಿ ಆರ್. ಗಿರೀಶ್, ಜಿಪಂ ಸಿಇಒ ಬಿ.ಎ.ಪರಮೇಶ್, ಹಾಸನ ನಗರಸಭೆ ಅಧ್ಯಕ್ಷ ಮೋಹನ್, ಅಪರ ಜಿಲ್ಲಾಧಿಕಾರಿ ಕವಿತಾ ರಾಜಾರಾಂ, ಉಪವಿಭಾಗಾಧಿಕಾರಿ ಗಿರೀಶ್ ನಂದನ್, ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.