Advertisement

ಏಪ್ರಿಲ್ 24ರಿಂದ ಬೆಂಗಳೂರಿನಲ್ಲಿ ಖೇಲೋ ಇಂಡಿಯಾ ಗೇಮ್ಸ್: 4500 ಕ್ರೀಡಾಪಟುಗಳು ಭಾಗಿ

04:44 PM Apr 22, 2022 | Team Udayavani |

ಬೆಂಗಳೂರು: ಏಪ್ರಿಲ್ 24ರಿಂದ ಖೇಲೋ ಇಂಡಿಯಾ ಗೇಮ್ಸ್ ನಡೆಯಲಿದ್ದು, ದೇಶದ ಅತಿದೊಡ್ಡ ಕ್ರೀಡಾಕೂಟ ಇದಾಗಲಿದೆ ಎಂದು ಯುವಜನಸೇವೆ ಹಾಗೂ ಕ್ರೀಡಾ ಸಚಿವ ನಾರಾಯಣಗೌಡ ಹೇಳಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊದಲ ಬಾರಿಗೆ ಈ ಕ್ರೀಡಾಕೂಟ ಒಡಿಶಾದಲ್ಲಿ ನಡೆದಿತ್ತು. ಎರಡನೇ ಕ್ರೀಡಾಕೂಡ ಕರ್ನಾಟಕದಲ್ಲಿ ನಡೆಯಲಿದೆ. ಉಪರಾಷ್ಟ್ರಪತಿಗಳು ಚಾಲನೆ ನೀಡಲಿದ್ದಾರೆ. ಕೇಂದ್ರ ಹಾಗೂ ರಾಜ್ಯದ ಹಲವು ಸಚಿವರು ಭಾಗವಹಿಸಲಿದ್ದಾರೆ ಎಂದರು.

4500 ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. 1000ಕ್ಕೂ ಹೆಚ್ಚು ಕ್ರೀಡಾಳುಗಳು ಈಗಾಗಲೇ ಆಗಮಿಸಿದ್ದಾರೆ. ಇದಕ್ಕಾಗಿ 2800 ಕೊಠಡಿಗಳನ್ನು ಕಾಯ್ದಿರಿಸಲಾಗಿದೆ. ರವಿಶಂಕರ್ ಗುರೂಜಿ ಆಶ್ರಮದಲ್ಲೂ ವ್ಯವಸ್ಥೆ ಮಾಡಿದ್ದೇವೆ. 2800 ವಾಹನಗಳನ್ನು ಕ್ರೀಡಾಪಟುಗಳಿಗೆ ಬಳಸ್ತಿದ್ದೇವೆ. 160 ಸಾರಿಗೆ ಬಸ್ ಗಳನ್ನು ಬಳಸಿಕೊಳ್ಳುತ್ತಿದ್ದೇವೆ. ಜೈನ್ ವಿವಿಯಲ್ಲೂ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ. ಕಳೆದ ವರ್ಷವೇ ಈ ಗೇಮ್ ನಡೆಯಬೇಕಿತ್ತು.ಕೋವಿಡ್ ಲಾಕ್ ಡೌನ್ ನಿಂದಾಗಿ ಮುಂದೂಡಲಾಗಿತ್ತು. ಆದರೆ ಇದೀಗ ಕ್ರೀಡಾಕೂಟವನ್ನು ಆಯೋಜಿಸುತ್ತಿದ್ದೇವೆ ಎಂದು ವಿವರಿಸಿದರು.

ರಾಜ್ಯಕ್ಕೆ ಇದು ಉತ್ತಮ ಹೆಸರು ತಂದುಕೊಡಲಿದೆ. ಕ್ರೀಡಾಕೂಟಕ್ಕೆ 62 ಕೋಟಿ ರೂಗಳನ್ನು ವಿನಿಯೋಗಿಸಲಾಗುತ್ತಿದೆ. ರಾಜ್ಯ ಸರ್ಕಾರ 27, ಕೇಂದ್ರ 35 ಕೋಟಿ ವೆಚ್ಚ ಮಾಡಲಿದೆ ಎಂದು ತಿಳಿಸಿದರು.

ಇದನ್ನೂ ಓದಿ:ಕಾಂಗ್ರೆಸ್ ನಲ್ಲಿ ಅಪ್ಪು… ಪಪ್ಪು ಅಷ್ಟೇ ಇರುವುದು: ಆರ್.ಅಶೋಕ್

Advertisement

ರಾಜ್ಯದಿಂದ 25 ಕ್ರೀಡಾಪಟುಗಳು ಇದರಲ್ಲಿ ಭಾಗವಹಿಸಲಿದ್ದಾರೆ. ಜೈನ್, ಕಂಠೀರವ, ಹಾಕಿ ಸ್ಟೇಡಿಯಂನಲ್ಲಿ ಪಂದ್ಯ ನಡೆಯಲಿದೆ. ಈಗಾಗಲೇ 3800 ಜನ ನೋಂದಣಿ ಮಾಡಿಕೊಂಡಿದ್ದಾರೆ. ನಿನ್ನೆಯೇ 890 ಜನ ಆಗಮಿಸಿದ್ದಾರೆ. ಇಂದು 800/900 ಜನ ಆಗಮಿಸಲಿದ್ದಾರೆ. ಕ್ರೀಡೆಗೆ ಯಾವುದೇ ಜಾತಿ ಭೇದ ಇರಬಾರದು. ಎಲ್ಲ ಧರ್ಮೀಯ ಕ್ರೀಡಾಳುಗಳು ಭಾಗವಹಿಸಲಿದ್ದಾರೆ. ಭಾಗವಹಿಸುವ ಕ್ರೀಡಾಳುಗಳಿಗೆ ಎರಡು ಡೋಸ್ ಲಸಿಕೆ ಕಡ್ಡಾಯವಾಗಿರಬೇಕು. ದೇಶದ 210 ವಿವಿಗಳು ಭಾಗವಹಿಸಲಿವೆ. ಮಲ್ಲಕಂಭ, ಕರಾಟೆ ಹೆಚ್ಚುವರಿಯಾಗಿ ಸೇರಿಸಿದ್ದೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next