Advertisement
ಜಿಮ್ನಾಸ್ಟಿಕ್ ಸ್ಪರ್ಧೆಯಲ್ಲಿ ಮಹಾರಾಷ್ಟ್ರದ ಆಸ್ಮಿ ಅಂಕುಶ್ ಬಡಾಡೆ ಮತ್ತು ಉತ್ತರಪ್ರದೇಶದ ಜತಿನ್ ಕುಮಾರ್ ಕಮೋಜಿಯ ಶನಿವಾರವೂ ಬಂಗಾರಕ್ಕೆ ಕೊರಳೊಡ್ಡಿದರು. ಇವರ ಬಂಗಾರದ ಸಂಖ್ಯೆ ಈಗ ಮೂರಕ್ಕೆ ಏರಿದೆ. ಅಂಡರ್-17 ವಿಭಾಗದ ಬಾಲಕರ 3 ಸಾವಿರ ಮೀ. ರೇಸ್‌ನಲ್ಲಿ ಮಧ್ಯಪ್ರದೇಶದ ಅರ್ಜುನ್ ವಸ್ಕಾಲೆ, ಜಾವೇಲಿನ್ ಎಸೆತದಲ್ಲಿ ವಿವೇಕ್ ಕುಮಾರ್ ಚಿನ್ನಕ್ಕೆ ಕೊರಳೊಡಿಡªರು.ಬಾಲಕರ ಅಂಡರ್-21 ವಿಭಾಗದ 5 ಸಾವಿರ ಮೀ. ಓಟದಲ್ಲಿ ಕಳೆದ ಬಾರಿಯ ಚಾಂಪಿಯನ್ ಅಜಿತ್ ಕುಮಾರ್ ಸಣ್ಣ ಅಂತರದಲ್ಲಿ ಪ್ರಶಸ್ತಿ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರು.