Advertisement
ಗೃಹ ಮಂಡಳಿ ಆರಂಭವಾದಾಗಿನಿಂದಲೂ ತನ್ನ ಗ್ರಾಹಕರಿಗೆ ನಿವೇಶನಗಳ ಜತೆಗೆ ಎಲ್‌ಐಜಿ, ಎಂಐಜಿ ಮನೆಗಳ ನಿರ್ಮಾಣ ಮತ್ತು ಬೃಹತ್ ಅಪಾರ್ಟ್‌ಮೆಂಟ್‌ಗಳನ್ನು ನಿರ್ಮಿಸಿ ಮಾರಾಟ ಮಾಡುತ್ತಿದೆ. ಇತ್ತೀಚಿನ ದಿನಗಳಲ್ಲಿ ನಿವೇಶನಗಳಿಗೆ ಹೆಚ್ಚಿನ ಬೇಡಿಕೆ ಬರುತ್ತಿದೆ. ಆದರೆ ಗೃಹ ಮಂಡಳಿ ನಿರ್ಮಿಸಿರುವ ಮನೆ ಮತ್ತು ಅಪಾರ್ಟ್‌ಮೆಂಟ್‌ಗಳ ಖರೀದಿಗೆ ಸಾರ್ವಜನಿಕರು ಹೆಚ್ಚಿನ ಆಸಕ್ತಿ ತೋರುತ್ತಿಲ್ಲ.
ಕೆಲವು ಮಹಾನಗರಗಳಲ್ಲಿ ಮೂರ್ನಾಲ್ಕು ವರ್ಷ ಕಳೆದರೂ ಪ್ಲ್ಯಾಟ್‌ಗಳು ಮಾರಾಟ ವಾಗದೆ ಇರುವುದು ಮಂಡಳಿಗೆ ಆರ್ಥಿಕವಾಗಿ ಹೊರೆಯಾಗುತ್ತಿದೆ. ಬೆಂಗಳೂರಿನ ಕೆಂಗೇರಿ ಬಳಿ ನಿರ್ಮಿಸಿರುವ ಪ್ಲಾಟಿನಂ ಅಪಾರ್ಟ್
ಮೆಂಟ್ ಮತ್ತು ಕಲಬುರಗಿಯಲ್ಲಿ ನಿರ್ಮಾಣವಾಗಿರುವ ಗ್ರೀನ್ ಪಾರ್ಕ್ ಅಪಾರ್ಟ್‌ಮೆಂಟ್‌ಗಳು ಮಾರಾಟವಾಗದೆ ಇರುವುದು ತಲೆನೋವಿಗೆ ಕಾರಣವಾಗಿದೆ. ನಿರ್ವಹಣ ವೆಚ್ಚ ಭಾರ
ಖಾಲಿ ಉಳಿದುಕೊಂಡಿರುವ ಫ್ಲ್ಯಾಟ್‌ಗಳ ನಿರ್ವಹಣ ವೆಚ್ಚವನ್ನು ಮಂಡಳಿಯೇ ನೀಡಬೇಕು. ಇದರಿಂದ ಫ್ಲ್ಯಾಟ್‌ಗಳ ಮಾರಾಟ ವಿಳಂಬವಾದಷ್ಟು ಗೃಹ ಮಂಡಳಿ ಹೊರಬೇಕಾದ ಆರ್ಥಿಕ ವೆಚ್ಚದ ಭಾರ ಹೆಚ್ಚಾಗುತ್ತಿದೆ.
Related Articles
ಗೃಹ ಮಂಡಳಿ ನಿರ್ಮಿಸುವ ಅಪಾರ್ಟ್‌ಮೆಂಟ್‌ಗಳು ಗ್ರಾಹಕರ ನಿರೀಕ್ಷೆಯ ವಾಸ್ತು ಪ್ರಕಾರ ನಿರ್ಮಾಣವಾಗಿರುವುದಿಲ್ಲ ಎಂಬ ಕಾರಣವೂ ಫ್ಲಾ éಟ್ ಮಾರಾಟ ವಿಳಂಬಕ್ಕೆ ಕಾರಣವಾಗುತ್ತಿದೆ. ಇದು ಗೃಹ ಮಂಡಳಿಯ ಗಮನಕ್ಕೂ ಬಂದಿದೆ ಎನ್ನಲಾಗಿದೆ. ಮಂಡಳಿ ಪ್ರತಿಯೊಬ್ಬ ಗ್ರಾಹಕನ ವಾಸ್ತು ನಿರೀಕ್ಷೆಯ ಪ್ರಕಾರ ಫ್ಲಾ éಟ್ ನಿರ್ಮಿಸುವುದು ಕಷ್ಟದ ಕೆಲಸ. ಅಪಾರ್ಟ್‌ಮೆಂಟ್ ನಿರ್ಮಾಣದಿಂದ ಗೃಹ ಮಂಡಳಿಗೆ ಅನುಕೂಲಕ್ಕಿಂತ ತೊಂದರೆ ಮತ್ತು ಆರ್ಥಿಕ ಹೊರೆ ಹೆಚ್ಚಾಗುತ್ತಿದೆ. ಹೀಗಾಗಿ ಮುಂದೆ ಅಪಾರ್ಟ್‌ಮೆಂಟ್ ನಿರ್ಮಿಸದಿರಲು ತೀರ್ಮಾನಿಸಿದೆ. ಇದರ ಜತೆಗೆ ಎಲ್‌ಐಜಿ ಮತ್ತು ಎಂಐಜಿ ಮನೆಗಳ ನಿರ್ಮಾಣವನ್ನೂ ಕೈಬಿಡುವ ಬಗ್ಗೆ ಗೃಹ ಮಂಡಳಿ ಚಿಂತನೆ ನಡೆಸಿದೆ.
Advertisement
ಸೈಟ್‌ಗಳು ಮಾರಾಟವಾದಷ್ಟು ವೇಗವಾಗಿ ಅಪಾರ್ಟ್‌ಮೆಂಟ್ ಮಾರಾಟವಾಗುತ್ತಿಲ್ಲ. ಕೆಲವು ಕಡೆ ನಿರ್ಮಾಣವಾಗಿರುವ ಅಪಾರ್ಟ್‌ಮೆಂಟ್‌ಗಳು ಮಾರಾಟವಾಗಿಲ್ಲ. ಹೀಗಾಗಿ ಮನೆ ಮತ್ತು ಅರ್ಪಾಟ್‌ಮೆಂಟ್‌ಗಳ ನಿರ್ಮಾಣ ನಿಲ್ಲಿಸಲು ಆಲೋಚಿಸಿದ್ದೇವೆ. ಈಗಿರುವ ಅಪಾರ್ಟ್‌ಮೆಂಟ್‌ಗಳ ಮಾರಾಟಕ್ಕೆ ಹೆಚ್ಚಿನ ಪ್ರಚಾರ ನೀಡಲು ತೀರ್ಮಾನಿಸಿದ್ದೇವೆ.
– ಅರಗಸೈಟ್‌ಗಳು ಮಾರಾಟವಾದಷ್ಟು ವೇಗವಾಗಿ ಅಪಾರ್ಟ್‌ಮೆಂಟ್ ಮಾರಾಟವಾಗುತ್ತಿಲ್ಲ. ಕೆಲವು ಕಡೆ ನಿರ್ಮಾಣವಾಗಿರುವ ಅಪಾರ್ಟ್‌ಮೆಂಟ್‌ಗಳು ಮಾರಾಟವಾಗಿಲ್ಲ. ಹೀಗಾಗಿ ಮನೆ ಮತ್ತು ಅರ್ಪಾಟ್‌ಮೆಂಟ್‌ಗಳ ನಿರ್ಮಾಣ ನಿಲ್ಲಿಸಲು ಆಲೋಚಿಸಿದ್ದೇವೆ. ಈಗಿರುವ ಅಪಾರ್ಟ್‌ಮೆಂಟ್‌ಗಳ ಮಾರಾಟಕ್ಕೆ ಹೆಚ್ಚಿನ ಪ್ರಚಾರ ನೀಡಲು ತೀರ್ಮಾನಿಸಿದ್ದೇವೆ.– ಅರಗ ಜ್ಞಾನೇಂದ್ರ, ಗೃಹ ಮಂಡಳಿ ಅಧ್ಯಕ್ಷ ಜ್ಞಾನೇಂದ್ರ, ಗೃಹ ಮಂಡಳಿ ಅಧ್ಯಕ್ಷ ಶಂಕರ ಪಾಗೋಜಿ