Advertisement

Maha Election: ರಜಾಕಾರರ ಹಿಂಸೆಗೆ ಖರ್ಗೆ ತಾಯಿ, ಸಹೋದರಿ ಬಲಿ: ಯೋಗಿ ತಿರುಗೇಟು

10:45 PM Nov 12, 2024 | Team Udayavani |

ಮುಂಬೈ: ಮಹಾರಾಷ್ಟ್ರ, ಜಾರ್ಖಂಡ್‌ ವಿಧಾನಸಭೆ ಚುನಾವಣೆಗಳ ಹಿನ್ನೆಲೆಯಲ್ಲಿ  ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಮತ್ತು ಐಎಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಡುವಿನ ವಾಕ್ಸಮರ ತೀವ್ರಗೊಂಡಿದೆ.

Advertisement

ಮಹಾರಾಷ್ಟ್ರದ ಅಚಲಾಪುರದಲ್ಲಿ ಮಂಗಳವಾರ  ಚುನಾವಣಾ ರ್ಯಾಲಿಯೊಂದರಲ್ಲಿ ಮಾತನಾಡಿದ ಉತ್ತರ ಪ್ರದೇಶ ಸಿಎಂ “ರಜಾಕಾರರ ಕಾಲದಲ್ಲಿ ಖರ್ಗೆ ಅವರ ತಾಯಿ, ಸಹೋದರಿ ಸೇರಿ ಕುಟುಂಬದ ಸದಸ್ಯರನ್ನೇ ಸಜೀವಾಗಿ ದಹಿಸಲಾಯಿತು. ಆದರೆ, ತುಷ್ಟೀಕರಣದಿಂದಾಗಿ ಮುಸ್ಲಿಮರ ವಿರುದ್ಧ ಖರ್ಗೆ ಮಾತನಾಡುತ್ತಿಲ್ಲ’ ಎಂದು ತಿವಿದಿದ್ದಾರೆ.

ಯೋಗಿ ನಿಜವಾದ ಸಾಧು ಅಲ್ಲ ಎಂಬ ಹೇಳಿಕೆಗೆ ತಿರುಗೇಟು ನೀಡಿರುವ ಯೋಗಿ, 3 ದಿನಗಳಿಂದ ಖರ್ಗೆ ಟೀಕೆ ಕೇಳುತ್ತಿದ್ದೇನೆ. ನಾನು ಯೋಗಿ. ನನಗೆ ದೇಶವೇ ಮೊದಲು. ಖರ್ಗೆಗೆ ತುಷ್ಟೀಕರಣ ರಾಜಕೀಯವೇ ಮೊದಲು. ಖರ್ಗೆ ಅವರ ಊರು ವರವಟ್ಟಿ,  ಹೈದ್ರಾಬಾದ್‌ ನಿಜಾಮರ ಆಡಳಿತದಲ್ಲಿದ್ದಂಥ ಗ್ರಾಮ. ಸ್ವಾತ್ಯಂತ್ರ ಬಳಿಕ ಅಧಿಕಾರ ಕಳೆದುಕೊಳ್ಳುವ ಭೀತಿಯಲ್ಲಿದ್ದ ನಿಜಾಮ ಹಿಂಸಾಚಾರ ಶುರು ಮಾಡಿದ್ದರು. ಖರ್ಗೆ ಅವರ ಊರನ್ನು ರಜಾಕಾರರು ಸುಟ್ಟು ಹಾಕಿದರು. ಈ ವೇಳೆ ಖರ್ಗೆ ಕುಟುಂಬದ ಸದಸ್ಯರೂ ಸಾವಿಗೀಡಾಗಿದ್ದರು. ಆದರೆ, ಮತಬ್ಯಾಂಕ್‌ ಕಳೆದುಕೊಳ್ಳಬೇಕಾಗುತ್ತದೆ ಎಂಬ ಕಾರಣಕ್ಕೆ ಈ ಸತ್ಯವನ್ನು ಖರ್ಗೆ ಒಪ್ಪಿಕೊಳ್ಳಲು ತಯಾರಿಲ್ಲ ಎಂದು ಟೀಕಿಸಿದ್ದಾರೆ.

ಯೋಗಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ನ ಪವನ್‌ ಖೇರಾ, ಕಾಂಗ್ರೆಸ್‌ ಭಾರತ್‌ ಜೋಡೋ ಎನ್ನುತ್ತಿದ್ದರೆ ಬಿಜೆಪಿ ಭಾರತ್‌ ತೋಡೋ ಎನ್ನುತ್ತಿದೆ. ರಜಾಕಾರರ ಕಾಲದಲ್ಲಿ ತಮ್ಮ ಕುಟುಂಬದ ಸದಸ್ಯರನ್ನು ಕಳೆದುಕೊಂಡ ಬಗ್ಗೆ ಖರ್ಗೆ ಅನೇಕ ಸಂದರ್ಭದಲ್ಲಿ ಸಾರ್ವಜನಿಕವಾಗಿಯೇ ಮಾತನಾಡಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next