Advertisement

ಖರ್ಗೆ 50ನೇ ಮದುವೆ ವಾರ್ಷಿಕೋತ್ಸವ

05:03 PM May 14, 2018 | |

ಕಲಬುರಗಿ: ರಾಜ್ಯಾದ್ಯಂತ ಸುತ್ತಾಡಿ ಪ್ರಚಾರ ಮಾಡಿದ್ದ ಕಾಂಗ್ರೆಸ್‌ ಹಿರಿಯ ನಾಯಕ, ಸಂಸದ ಮಲ್ಲಿಕಾರ್ಜುನ ಖರ್ಗೆ ಅವರು ಮತದಾನ ಮರುದಿನ ರವಿವಾರ ನಗರದ ತಮ್ಮ ನಿವಾಸದಲ್ಲಿ 50ನೇ ಮದುವೆ ವಾರ್ಷಿಕೋತ್ಸವ ಆಚರಿಸಿಕೊಂಡರು. ಮಲ್ಲಿಕಾರ್ಜುನ ಖರ್ಗೆ ಅವರು ಪತ್ನಿ ರಾಧಾಬಾಯಿ ಅವರೊಂದಿಗೆ 50ನೇ ವರ್ಷದ ವಾರ್ಷಿಕೋತ್ಸವ ಆಚರಿಸಿಕೊಂಡರು. ಖರ್ಗೆ ದಂಪತಿಗೆ
ಆರತಿ ಬೆಳಗಿ, ಹೂ-ಹಣ್ಣು ನೀಡುವ ಮೂಲಕ ಕುಟುಂಬದ ಸದಸ್ಯರು ಸಡಗರ, ಸಂಭ್ರಮದಿಂದ ಆಚರಿಸಿದರು. ದಂಪತಿ ಪರಸ್ಪರ ಹೂಮಾಲೆ, ಉಂಗುರ ಮತ್ತು ಸಿಹಿ ವಿನಿಮಯ ಮಾಡಿಕೊಂಡರು. ಎಲ್ಲರೂ ಅಕ್ಷತೆ ಹಾಕಿ ಶುಭ ಕೋರಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next