Advertisement
ಅದಕ್ಕೆ ಪೂರಕವಾಗಿ ಭಾನುವಾರ ಪುನಾರಚಿಸಲಾಗಿರುವ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲೂಸಿ) ಯಲ್ಲಿ ಮಾಜಿ ಡಿಸಿಎಂ ಸಚಿನ್ ಪೈಲಟ್‌ಗೆ ವಿಶೇಷ ಸ್ಥಾನವನ್ನೂ ಕಲ್ಪಿಸಿಕೊಡಲಾಗಿದೆ. ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಎಂಭತ್ತನಾಲ್ಕು ಮಂದಿಯ ಪೈಕಿ ಮತ್ತೂಬ್ಬ ಪ್ರಮುಖರೆಂದರೆ ಹತ್ತು ತಿಂಗಳ ಹಿಂದೆ ನಡೆದಿದ್ದ ಎಐಸಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡುವ ಬಗ್ಗೆ ನಾಮಪತ್ರ ಸಲ್ಲಿಸಿ ಸುದ್ದಿಯಾಗಿದ್ದ ತಿರುವನಂತಪುರ ಲೋಕಸಭಾ ಕ್ಷೇತ್ರದ ಸಂಸದ ಶಶಿ ತರೂರ್. ಖರ್ಗೆಯವರು ಮುಂದಿನ ಚುನಾವಣೆಗಳನ್ನು ದೃಷ್ಟಿಯನ್ನು ಇರಿಸಿಕೊಂಡು ಹೊಸ ತಂಡ ರಚಿಸಿದ್ದಾರೆ ಎನ್ನುವುದು ಸ್ಪಷ್ಟ. ರಾಜಸ್ಥಾನದಲ್ಲಿ ಪೈಲಟ್ ಅವರಿಗೆ ಮಾಧ್ಯಮ ವಿಭಾಗದ ದೊಡ್ಡ ಹೊಣೆಯನ್ನೇ ನೀಡುವ ಸಾಧ್ಯತೆಗಳು ಇವೆ ಎಂದು ಹೇಳಲಾಗುತ್ತಿದೆ. ಕರ್ನಾಟಕ ವಿಧಾನಸಭೆ ಚುನಾವಣೆ ವೇಳೆ ಸಚಿನ್ ಪೈಲಟ್ ಅವರನ್ನು ಸ್ಟಾರ್ ಪ್ರಚಾರಕರ ಪಟ್ಟಿಯಿಂದ ಕೈಬಿಡಲಾಗಿತ್ತು. ಆದರೆ, ಈ ಬೆಳವಣಿಗೆಯಿಂದಾಗಿ ರಾಜಸ್ಥಾನದಲ್ಲಿ ಕಾಂಗ್ರೆಸ್ ಗೆದ್ದರೆ ಪೈಲಟ್ ಅವರೇ ಸಿಎಂ ಆಗಲಿದ್ದಾರೆ ಎಂಬ ಖಾತರಿ ಆಗಿಲ್ಲವೆನ್ನುವುದು ಸ್ಪಷ್ಟ.
ಸಿಡಬ್ಲೂಸಿಯಲ್ಲಿರುವ ಹೊಸ ತಂಡಕ್ಕೆ ಎರಡು ಪ್ರಮುಖ ಸವಾಲುಗಳಿವೆ. ವರ್ಷಾಂತ್ಯದಲ್ಲಿ ನಡೆಯಲಿರುವ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಢ, ಮಿಜೋರಾಂ, ತೆಲಂಗಾಣ ವಿಧಾನಸಭೆ ಚುನಾವಣೆಗಳಲ್ಲಿ ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರುವುದು, ಎರಡನೇಯದಾಗಿ ಪ್ರತಿಪಕ್ಷಗಳ ಮೈತ್ರಿಕೂಟ ಐ.ಎನ್.ಡಿ.ಐ.ಎ ರಚನೆ ಮಾಡುವಲ್ಲಿ ಕಾಂಗ್ರೆಸ್‌ನ ಮೂಲ ಅಸ್ತಿತ್ವಕ್ಕೆ ಧಕ್ಕೆಯಾಗಿಲ್ಲ ಎನ್ನುವುದನ್ನು ಸಾಬೀತು ಮಾಡಬೇಕಾಗಿದೆ. ಇಷ್ಟು ಮಾತ್ರವಲ್ಲದೆ ಆಪ್ ಮತ್ತು ಟಿಎಂಸಿ ಜತೆಗೆ ಇರುವ ಬಾಂಧವ್ಯ ಇನ್ನೂ ಸುಧಾರಿಸಬೇಕಾಗಿದೆ. ಕಾಂಗ್ರೆಸ್‌ನ ಭಿನ್ನಮತೀಯ ಗುಂಪಿನ ಸದಸ್ಯರಾಗಿರುವ ಶಶಿ ತರೂರ್, ಆನಂದ ಶರ್ಮಾ, ಮುಕುಲ್ ವಾಸ್ನಿಕ್ ಕೂಡ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದು ಮಹತ್ವಪಡೆದುಕೊಂಡಿದೆ.
Related Articles
ಪಕ್ಷದ ಮಹತ್ವದ ಸಮಿತಿಯಲ್ಲಿ ಸ್ಥಾನ ಪಡೆದುಕೊಂಡ ಬಗ್ಗೆ ಮೈಕ್ರೋಬ್ಲಾಗಿಂಗ್ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡ ತರೂರ್ “ವಿನೀತನಾಗಿದ್ದೇನೆ ಮತ್ತು ಎಐಸಿಸಿ ಅಧ್ಯಕ್ಷ ಖರ್ಗೆಯವರ ನಿರ್ಧಾರವನ್ನು ಸ್ವೀಕರಿಸಿದ್ದೇನೆ’ ಎಂದು ಹೇಳಿಕೊಂಡಿದ್ದಾರೆ. 138 ವರ್ಷಗಳ ಪಕ್ಷಕ್ಕೆ ಸಿಡಬ್ಲೂéಸಿ ದಾರಿದೀಪ ತೋರಿಸುತ್ತದೆ ಎಂದೂ ಬರೆದುಕೊಂಡಿದ್ದಾರೆ.
Advertisement
ಮೂವರು ಮಾತ್ರ:ಇದೇ ವೇಳೆ, ಹೊಸಬರಿಗೆ ಮತ್ತು ಯುವಕರಿಗೆ ಅವಕಾಶ ನೀಡಲಾಗಿದೆ ಎಂದು ಪ್ರತಿಪಾದಿಸಲಾಗುತ್ತಿದ್ದರೂ, 39 ಮಂದಿ ಸದಸ್ಯರು ಇರುವ ಸಿಡಬ್ಲೂéಸಿಯಲ್ಲಿ 50 ವರ್ಷಕ್ಕಿಂತ ಕೆಳಗೆ ಇರುವ ಮುಖಂಡರು ಮೂವರು ಮಾತ್ರ. ಅವರೆಂದರೆ ಸಚಿನ್ ಪೈಲಟ್, ಗೌರವ್ ಗೊಗೊಯ್ ಮತ್ತು ಕಮಲೇಶ್ವರ ಪಟೇಲ್. ಮತ್ತೂಂದೆಡೆ, ಉತ್ತರ ಪ್ರದೇಶದ ಕಾಂಗ್ರೆಸ್‌ನ ಉಸ್ತುವಾರಿಯಾಗಿ ನೇಮಕಗೊಂಡಿರುವ ಪ್ರಿಯಾಂಕಾ ವಾದ್ರಾ ಅವರನ್ನು ಬೇರೆ ರಾಜ್ಯದಲ್ಲಿ ಪಕ್ಷದ ವ್ಯವಹಾರಗಳನ್ನು ನೋಡಲು ನಿಯೋಜನೆ ಮಾಡುವ ಸಾಧ್ಯತೆಗಳು ಕಡಿಮೆ ಎಂದು ಕಾಂಗ್ರೆಸ್‌ನ ಮೂಲಗಳ ಹೇಳಿಕೆ.