Advertisement

NDA ಸರಕಾರ ಶೀಘ್ರ ಪತನ ಎಂದ ಖರ್ಗೆ; ಮೂರ್ಖರ ಸ್ವರ್ಗ ಎಂದ ಅಣ್ಣಾಮಲೈ

12:39 AM Jun 16, 2024 | Team Udayavani |

ಹೊಸದಿಲ್ಲಿ: ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರದ ವಿರುದ್ಧ ಟೀಕಾ ಪ್ರಹಾರವನ್ನು ಮುಂದು ವರಿಸಿರುವ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, “ಎನ್‌ಡಿಎ ಅಲ್ಪಮತದ ಸರಕಾರವಾಗಿದ್ದು, ಇದು ಆಕಸ್ಮಿಕವಾಗಿ ಅಧಿಕಾರಕ್ಕೆ ಬಂದಿದೆ. ಮೋದಿಗೆ ಜನಾ ದೇಶವಿಲ್ಲ ಮತ್ತು ಯಾವ ಕ್ಷಣದಲ್ಲಿ ಸರಕಾರವು ಪತನವಾಗಬಹುದು’ ಎಂದು ಹೇಳಿದರು.

Advertisement

“ಈ ಸರಕಾರವು ಯಾವಾಗಬೇಕಾದರೂ ಬೀಳಬಹುದು. ಆದರೂ ಅದು ಮುಂದುವರಿಯಬೇಕು ಎಂದು ಬಯಸುತ್ತೇವೆ. ದೇಶಕ್ಕೆ ಒಳ್ಳೆಯದಾಗಬೇಕು. ದೇಶವನ್ನು ಬಲಿಷ್ಠಗೊಳಿಸಲು ನಾವು ಒಂದಾಗಿ ಕೆಲಸ ಮಾಡಲು ತಯಾ ರಿ ದ್ದೇವೆ. ಆದರೆ ಯಾವುದಾದರೂ ಚೆನ್ನಾಗಿ ನಡೆಯದಂತೆ ನೋಡಿಕೊಳ್ಳುವ ಗುಣ ನಮ್ಮ ಪ್ರಧಾನಿ ಗಳಿಗಿದೆ. ಹಾಗಿದ್ದೂ, ದೇಶಕ್ಕಾಗಿ ನಾವು ಸಹಕಾರ ನೀಡಲು ಸಿದ್ಧರಿದ್ದೇವೆ’ ಎಂದು ಖರ್ಗೆ ತಿಳಿಸಿದ್ದಾರೆ.

ಖರ್ಗೆ ಹೇಳಿಕೆಗೆ ಎನ್‌ಡಿಎ ಪಾಲುದಾರ ಪಕ್ಷ ಜೆಡಿಯು ಟೀಕಿಸಿದೆ. “ಪಿ.ವಿ.ನರಹಸಿಂಹ ರಾವ್‌ ಮತ್ತು ಡಾ| ಮನಮೋಹನ್‌ ಸಿಂಗ್‌ ನೇತೃತ್ವ ಸರಕಾರಗಳಲ್ಲಿ ಕಾಂಗ್ರೆಸ್‌ ಯಾವ ರೀತಿ ವರ್ತಿಸುತ್ತಿತ್ತು ಎಂಬುದನ್ನು ಖರ್ಗೆ ಅವರು ನೆನಪಿಸಿಕೊಳ್ಳಲಿ’ ಎಂದು ಜೆಡಿಯು ಎಂಎಲ್‌ಸಿ ನೀರಜ್‌ ಕುಮಾರ್‌ ಹೇಳಿದ್ದಾರೆ. ಖರ್ಗೆ ಹೇಳಿಕೆಯನ್ನು ಆರ್‌ಜೆಡಿ ಬೆಂಬಲಿಸಿದೆ. ಇತ್ತೀಚೆಗಷ್ಟೇ ಮುಕ್ತಾಯವಾದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 240 ಸ್ಥಾನಗಳನ್ನು ಗೆದ್ದು ಜೆಡಿಯು ಮತ್ತು ಟಿಡಿಪಿಗಳ ನೆರವಿನಿಂದ ಎನ್‌ಡಿಎ ಸರಕಾರವನ್ನು ರಚಿಸಿದೆ.

ಮೂರ್ಖರ ಸ್ವರ್ಗದಲ್ಲಿ ಖರ್ಗೆ: ಅಣ್ಣಾಮಲೈ
ಎನ್‌ಡಿಎ ಸರಕಾರ ಪತನವಾಗಲಿದೆ ಎಂಬ ಹೇಳಿ ಕೆಗೆ ತಿರುಗೇಟು ನೀಡಿರುವ ತಮಿ ಳುನಾಡು ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ ಅವರು, “ಖರ್ಗೆ ಅವರು ಮೂರ್ಖರ ಸ್ವರ್ಗದಲ್ಲಿ ವಾಸಿಸುತ್ತಿದ್ದಾರೆಂದು’ ಹೇಳಿದ್ದಾರೆ. ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪ್ರಜಾಸತ್ತಾತ್ಮಕ ಮನೋಭಾವನೆಯನ್ನು ನೋಡಿದ ಅನಂತರ ಖರ್ಗೆ ಅವರು ಸರಕಾರ ಬೀಳಬಹುದು ಎಂದು ಭಾವಿಸಿದರೆ, ಅವರು ಮೂರ್ಖರ ಸ್ವರ್ಗದಲ್ಲಿ ವಾಸಿಸುತ್ತಿ¨ªಾರೆ ಎಂದು ನಾನು ಭಾವಿಸುತ್ತೇನೆ ಎಂದು ಅಣ್ಣಾಮಲೈ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next