ದೇಡಿಯಾಪದ: ಪ್ರಧಾನಿ ನರೇಂದ್ರ ಮೋದಿ ಅವರನ್ನು “ಸುಳ್ಳುಗಾರರ ಮುಖ್ಯಸ್ಥ ” (ಜೂಟೊಂಕಾ ಸರ್ದಾರ್) ಎಂದು ಭಾನುವಾರ ಕಾಂಗ್ರೆಸ್ ಅಧ್ಯಕ್ಷ ಮಲಿಕಾರ್ಜುನ್ ಖರ್ಗೆ ಅವರು ಕರೆದಿದ್ದಾರೆ.
ಗುಜರಾತ್‌ನ ಬುಡಕಟ್ಟು ಪ್ರಾಬಲ್ಯವಿರುವ ಗುಜರಾತ್‌ನ ನರ್ಮದಾ ಜಿಲ್ಲೆಯ ದೇಡಿಯಾಪಾಡಾದಲ್ಲಿ ಸಾರ್ವಜನಿಕ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಖರ್ಗೆ, ನಾನು ಸ್ವತಃ ಬಡವ ಮತ್ತು ಅಸ್ಪೃಶ್ಯ ಜಾತಿಯಿಂದ ಬಂದವ. ಪ್ರಧಾನಿ ತಮ್ಮನ್ನು ಬಡವರೆಂದು ಕರೆದುಕೊಂಡು ಸಹಾನುಭೂತಿ ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದರು.
“ಮೋದಿಜಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು 70 ವರ್ಷಗಳಲ್ಲಿ ಕಾಂಗ್ರೆಸ್ ಏನು ಮಾಡಿದೆ ಎಂದು ಕೇಳುತ್ತಾರೆ? 70 ವರ್ಷಗಳಲ್ಲಿ ನಾವು ಏನನ್ನೂ ಮಾಡದಿದ್ದರೆ ನಿಮಗೆ ಪ್ರಜಾಪ್ರಭುತ್ವ ಸಿಗುತ್ತಿರಲಿಲ್ಲ ಮತ್ತು ನಿಮ್ಮಂತಹ ಜನರು ಯಾವಾಗಲೂ ಬಡವರು ಎಂದು ಹೇಳಿಕೊಳ್ಳಬೇಕಿತ್ತು. ಕನಿಷ್ಠ ಜನರು ನಿಮ್ಮ ಚಹಾವನ್ನು ಕುಡಿಯುತ್ತಾರೆ, ಆದರೆ ನನ್ನ ಚಹಾವನ್ನು ಸಹ ಕುಡಿಯುವುದಿಲ್ಲ”ಎಂದರು.
“ಅರ್ಥಮಾಡಿಕೊಳ್ಳಿ ಜನರು ಈಗ ಬುದ್ಧಿವಂತರಾಗಿದ್ದಾರೆ, ಅವರು ಮೂರ್ಖರಲ್ಲ.ಒಂದೋ ಎರಡೋ ಬಾರಿ ಸುಳ್ಳು ಹೇಳಿದರೆ ಜನ ಕೇಳುತ್ತಾರೆ , ಎಷ್ಟು ಬಾರಿ ಸುಳ್ಳು ಹೇಳಿದ್ದೀರಿ ಎಂದು ಪ್ರಧಾನಿಯನ್ನು ಖರ್ಗೆ ಪ್ರಶ್ನಿಸಿದರು.