ಮುಂಬಯಿ: ತುಳು ಕನ್ನಡಿಗರ ಸಂಚಾಲಕತ್ವದ ಶ್ರೀ ಶನಿ ಮಹಾತ್ಮ ಸೇವಾ ಸಮಿತಿಯ ಸಂಚಾಲಕತ್ವದಿಂದ ಖಾರ್ ಪೂರ್ವದ ಸಾಯಿಬಾಬಾ ರಸ್ತೆಯ ಜವಾಹಾರ್ ನಗರ್‌ನ ಪಹೆಲ್ವಾನ್ ಚಾಳ್‌ನಲ್ಲಿ ಸೇವಾ ನಿರತ ಸದ್ಯ ಸಾಯಿಧಾಮ್ ಬಿಲ್ಡಿಂಗ್‌ನಲ್ಲಿ ಪ್ರತಿಷ್ಠಾಪಿತ ಶ್ರೀ ಶನಿಮಹಾತ್ಮ ಮಂದಿರದಲ್ಲಿ ಮೇ 15 ರಂದು ಸಾಮೂಹಿಕ ಶನಿ ಪೂಜೆ ಮತ್ತು ಶನೀಶ್ವರ ಗ್ರಂಥಪಾರಾಯಣದೊಂದಿಗೆ ನವಗ್ರಹಶ್ರೇಷ್ಠ ಶ್ರೀ ಶನೈಶ್ಚರ ಜನ್ಮೋತ್ಸವವು ಅದ್ದೂರಿಯಾಗಿ ನಡೆಯಿತು.
ಖಾರ್ ಪೂರ್ವದ ಸ್ಥಾನೀಯ ನಗರ ಸೇವಕಿ ಪ್ರಜ್ಞಾ ಭೂತ್ಕಾರ್ ಇವರು ದೀಪ ಪ್ರಜ್ವಲಿಸಿ ಧಾರ್ಮಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಧಾರ್ಮಿಕ ಕಾರ್ಯಕ್ರಮವಾಗಿ ಅಪರಾಹ್ನ ಕಲಶ ಮುಹೂರ್ತ, ಭಜನೆ, ಸದ್ಭಕ್ತರ ಪರವಾಗಿ ಸಾಮೂಹಿಕ ಶನೀಶ್ವರ ಗ್ರಂಥ ಪಾರಾಯಣ, ಮಂಗಳಾರತಿಗೈದು ನೆರೆದ ಭಕ್ತಾಭಿಮಾನಿಗಳಿಗೆ ತೀರ್ಥ ಪ್ರಸಾದ ವಿತರಣೆ ನಡೆಸಲಾಯಿತು.
ಅರ್ಚಕ ನಾಗೇಶ್ ಸುವರ್ಣ ಅವರು ಕಲಶ ಪ್ರತಿಷ್ಠಾಪನೆಗೈದು ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು. ಚಿತ್ರಕರ್ ಶೆಟ್ಟಿ ಮತ್ತು ಲಕ್ಷ್ಮೀ ಶೆಟ್ಟಿ ದಂಪತಿ ಪೂಜೆಯ ಯಜಮಾನಿಕೆಯನ್ನು ವಹಿಸಿದ್ದರು. ಗ್ರಂಥಪಾರಾಯಣ, ಪೂಜೆ ಇತ್ಯಾದಿ ಪುಣ್ಯಾಧಿ ಕಾರ್ಯಕ್ರಮಗಳಲ್ಲಿ ಸ್ಥಳಿಯ ಮಾಜಿ ನಗರ ಸೇವಕರಾದ ರಾಜು ಭೂತ್ಕರ್, ಸಮಿತಿಯ ಗೌರವ ಅಧ್ಯಕ್ಷ ಶ್ರೀಧರ್ ಜೆ. ಪೂಜಾರಿ, ಅಧ್ಯಕ್ಷ ಶಂಕರ್ ಕೆ. ಸುವರ್ಣ, ಕಾರ್ಯಾಧ್ಯಕ್ಷ ಆರ್. ಡಿ. ಕೋಟ್ಯಾನ್, ಉಪಾಧ್ಯಕ್ಷರಾದ ದೇವೇಂದ್ರ ವಿ. ಬಂಗೇರ, ಶರತ್ ಮೂಡಬಿದ್ರಿ, ಉಪ ಕಾರ್ಯಧ್ಯಕ್ಷ ಜಯರಾಮ್ ಶೆಟ್ಟಿ, ಅರ್ಚಕ ಹಾಗೂ ಗೌರವ ಕೋಶಾಧಿಕಾರಿ ನಾಗೇಶ್ ಸುವರ್ಣ, ಪೂಜಾ ಸಮಿತಿಯ ಕಾರ್ಯದರ್ಶಿ ಜನಾದìನ ಸಾಲ್ಯಾನ್, ಉಪ ಕಾರ್ಯದರ್ಶಿ ರಮೇಶ್ ಪೂಜಾರಿ, ನರಸಿಂಹ ಸಾಲಿಯಾನ್, ಸಹ ಅರ್ಚಕರಾದ ಕೃಷ್ಣ ಕುಲಾಲ್, ಪೂಜಾ ಸಮಿತಿಯ ಕಾರ್ಯದರ್ಶಿ ರವೀಂದ್ರ ಕೋಟ್ಯಾನ್, ವಿಶ್ವನಾಥ ಕುಂದರ್, ಭಾರತ್ ಬ್ಯಾಂಕಿನ ನಿರ್ದೇಶಕ ಅಡ್ವಕೇಟ್ ಸೋಮನಾಥ್ ಬಿ. ಅಮೀನ್, ಪ್ರಬಂಧಕ ಸೋಮನಾಥ್ ಪೂಜಾರಿ, ಸಂಗೀತಾ ಎಸ್. ಪೂಜಾರಿ, ಯುವಕ ವೃಂದದ ಕಾರ್ಯಾಧ್ಯಕ್ಷ ವಿಜಯ್ ಸಾಲ್ಯಾನ್, ಜೊತೆ ಕೋಶಾಧಿಕಾರಿ ವಿನೋದ್ ಹೆಜಮಾಡಿ, ಸಮಿತಿಯ ಸದಸ್ಯರಾದ ರಮೇಶ್ ಪೂಜಾರಿ, ಮಹಿಳಾ ಮಂಡಳಿ ಕಾರ್ಯಾಧ್ಯಕ್ಷೆ ಕೇಸರಿ ಬಿ. ಅಮೀನ್, ಕಾಂದಿವಲಿ ಕನ್ನಡ ಸಂಘದ ಮಾಜಿ ಗೌರವಾಧ್ಯಕ್ಷ ಶ್ಯಾಮರಾಜ್ ಶೆಟ್ಟಿ, ಅಧ್ಯಕ್ಷ ಪೊಲ್ಯ ಜಯಪಾಲ್ ಶೆಟ್ಟಿ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಸಮಿತಿಯ ಇತರ ಪದಾಧಿಕಾರಿಗಳು, ಮಹಿಳಾ ಮಂಡಳಿ ಸದಸ್ಯೆಯರು, ಯುವ ವಿಭಾಗ ಸೇರಿದಂತೆ ವಿವಿಧ ಉಪ ಸಮಿತಿಗಳ ಸದಸ್ಯರು, ಮಹಾನಗರದಲ್ಲಿನ ಬಹುಸಂಖ್ಯೆಯ ಭಕ್ತರು ಪಾಲ್ಗೊಂಡು ಶ್ರೀ ಶನಿದೇವರ ಕೃಪೆಗೆ ಪಾತ್ರರಾಗಿದ್ದು ಕಾರ್ಯಕ್ರಮದಲ್ಲಿ ಬಿಲ್ಲವರ ಅಸೋಸಿಯೇಶನ್ ಮುಂಬಯಿ, ಗುರು ನಾರಾ ಯಣ ಯಕ್ಷಗಾನ ಮಂಡಳಿಯ ಸಚಿನ್ ಪೂಜಾರಿ ಅವರನ್ನು ಸಮಿತಿಯ ಟ್ರಸ್ಟಿ ಸದಸ್ಯ ನಾರಾಯಣ ಜಿ. ಕೋಟ್ಯಾನ್ ಇವರನ್ನು ಪುಷ್ಪಗುತ್ಛ, ಪ್ರಸಾದ ವನ್ನಿತ್ತು ಗೌರವಿಸಿದರು. ಸಮಿತಿಯ ಗೌರವ ಪ್ರಧಾನ ಕಾರ್ಯದರ್ಶಿ ಯೋಗೇಶ್ ಕೆ. ಹೆಜ್ಮಾಡಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಚಿತ್ರ -ವರದಿ: ರೋನ್ಸ್ ಬಂಟ್ವಾಳ್