ಕಾಲ್ಪನಿಕ ಮತ್ತು ವಾಸ್ತವದ ನಡುವೆ ತೆಳುವಾದ ಗೆರೆ ಇದೆ. ಕೆಲವೊಮ್ಮೆ ಆ ಗೆರೆ ಅಳಿಸಿ ಹೋಗಿಬಿಡುತ್ತದೆ. ಯಾವುದನ್ನು ನಾವು ಕಾಲ್ಪನಿಕ ಎಂದುಕೊಂಡಿರುತ್ತೇವೋ, ಅದು ಯಾರಧ್ದೋ ಜೀವನದ ವಾಸ್ತವವಾಗಿರುತ್ತದೆ. ಇದು ಪ್ರಸಿದ್ದ ನಾಟಕಕಾರ ವಿಜಯ್ ತೆಂಡೂಲ್ಕರ್‌ರ ಪ್ರಶಸ್ತಿ ಪುರಸ್ಕೃತ ಮರಾಠಿ ನಾಟಕ “ಶಾಂತತ! ಕೋರ್ಟ್ ಚಾಲು ಆಹೆ’ ನಾಟಕದ ಕಥಾಹಂದರ.
ಐದಾರು ದಶಕಗಳ ನಂತರವೂ ಪ್ರಸ್ತುವವೆನಿಸುವ ಈ ನಾಟಕವನ್ನು ಈಗ ಸಾರ್ಥಕ್ ಪ್ರೊಡಕ್ಷನ್‌ನವರು ಹಿಂದಿಗೆ ತಂದಿದ್ದಾರೆ. ದೀವಾಸ್ ಗುಪ್ತರ ರಂಗಕಲ್ಪನೆ ಇರುವ, “ಖಾಮೋಶ್, ಅದಾಲತ್ ಜಾರಿ ಹೈ’ ನಾಟಕವನ್ನು ಶೌರ್ಯ ಸಿಂಗ್ ನಿರ್ದೇಶಿಸಿದ್ದಾರೆ.
ಹಳ್ಳಿಯೊಂದರಲ್ಲಿ ಜನರ ಗುಂಪೊಂದು ನಾಟಕ ಪ್ರದರ್ಶನದ ಸಿದ್ಧತೆಯಲ್ಲಿರುತ್ತದೆ. ಅಲ್ಲಿ ಬರುವ ನ್ಯಾಯಾಲಯದ ದೃಶ್ಯವೊಂದು ಹೇಗೆ ಅನಿರೀಕ್ಷಿತ ತಿರುವುಗಳನ್ನು ಪಡೆದುಕೊಳ್ಳುತ್ತದೆ ಎಂಬುದನ್ನು ತಿಳಿಯಲು ಈ ನಾಟಕ ನೋಡಬೇಕು. ಟಿಕೆಟ್‌ಗಳು ಬುಕ್‌ವೆುಶೋನಲ್ಲಿ ಲಭ್ಯ. 16 ವರ್ಷ ಮೇಲ್ಪಟ್ಟವರಿಗೆ ಮಾತ್ರ ಪ್ರವೇಶ.
ಎಲ್ಲಿ?: ಅಲಾಯನ್ಸ್ ಫ್ರಾಂಸೈಸ್, ತಿಮ್ಮಯ್ಯ ರಸ್ತೆ, ಯುಎನ್‌ಐ ಬಿಲ್ಡಿಂಗ್ ಎದುರು, ವಸಂತನಗರ
ಯಾವಾಗ?: ಏ.28, ಶನಿವಾರ ಸಂಜೆ 6.30
ಟಿಕೆಟ್ ದರ: 250 ರೂ.