Advertisement

ಖಾಲಿಯಾ ರಫೀಕ್‌ ಕೊಲೆ: ನಾಲ್ವರು ಪೊಲೀಸರ ವಶ

03:45 AM Feb 18, 2017 | Team Udayavani |

ಉಳ್ಳಾಲ: ಖಾಲಿಯಾ ರಫೀಕ್‌ ಕೊಲೆಯ ಪ್ರಮುಖ ಆರೋಪಿ “ಕಸಾಯಿ’ ಆಲಿ ಯಾನೆ ನೂರ್‌ ಆಲಿ ಸಹಿತ ನಾಲ್ವರು ಆರೋಪಿ ಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

Advertisement

ಖಾಲಿಯಾ ಗ್ಯಾಂಗ್‌ ಮುಖಂಡನಾಗಿದ್ದ ರಫೀಕ್‌ನನ್ನು ಕಸಾಯಿ ಗ್ಯಾಂಗ್‌ನ ಪ್ರಮುಖ ನಾದ ಕಸಾಯಿ ಆಲಿ ಯಾನೆ ನೂರ್‌ ಆಲಿ ತಂಡ ಕೋಟೆಕಾರು ಪೆಟ್ರೋಲ್‌ ಪಂಪ್‌ ಬಳಿ ಮಂಗಳವಾರ ತಡರಾತ್ರಿ ಗುಂಡು ಹಾರಿಸಿ ತಲವಾರಿನಿಂದ ಕಡಿದು ಕೊಲೆ ನಡೆಸಿತ್ತು. ಬಳಿಕ ಆರೋಪಿಗಳು ಪರಾರಿಯಾಗಿದ್ದರು. ಪ್ರಮುಖ ಆರೋಪಿಗಳಾದ ಉಪ್ಪಳ ಮೂಲದ ನಿವಾಸಿ ಗಳಾದ ಕಸಾಯಿ ಆಲಿ ಯಾನೆ ನೂರ್‌ ಆಲಿ, ರವೂಫ್‌ ಮತ್ತು ಮಂಗಳೂರು ಮೂಲದ ಆರೋಪಿಗಳಾದ ಪದ್ದು ಯಾನೆ, ಪದ್ಮನಾಭ, ರಶೀದ್‌ನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಖಾಲಿಯಾ ವರ್ಸಸ್‌ ಕಸಾಯಿ : ಉಪ್ಪಳದಲ್ಲಿ ಖಾಲಿಯಾ ರಫೀಕ್‌ ಗ್ಯಾಂಗ್‌ ಬಲಶಾಲಿಯಾಗಿದ್ದು, ಕಸಾಯಿ ಯಾನೆ ನೂರಾಲಿ ತಂಡದೊಂದಿಗೆ ಹಲವು ಬಾರಿ ಹೊಡೆದಾಟ ನಡೆದಿತ್ತು. ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ನೂರ್‌ ಆಲಿಯ ಸಹೋದರ ಮುತ್ತಲಿಬ್‌ನನ್ನು ಆತನ ಪತ್ನಿಯ ಎದುರೇ ಹತ್ಯಗೈದಿದ್ದ ಖಾಲಿಯಾ ರಫೀಕ್‌ನನ್ನು ಮುಗಿಸಲು ಮುತ್ತಲಿಬ್‌ನ ಸಹೋದರ ನೂರಾಲಿ ಕಾಯುತ್ತಿದ್ದ ಎನ್ನಲಾಗಿದೆ.

ರವೂಫ್‌ಗೆ ಚಿತ್ರಹಿಂಸೆ ನೀಡಿದ್ದ 
ನೂರಾಲಿ ತಂಡದಲ್ಲಿ ಗುರುತಿಸಿಕೊಂಡಿದ್ದ ಕಾರಣಕ್ಕೆ ಮೂರು ತಿಂಗಳ ಹಿಂದೆ  ಇನ್ನೋರ್ವ ಆರೋಪಿ ರವೂಫ್‌ ನನ್ನು ಖಾಲಿಯಾ ರಫೀಕ್‌ ಮತ್ತು ಆತನ ಗ್ಯಾಂಗ್‌ ಉಪ್ಪಳದ ಸಮುದ್ರ ತೀರದಲ್ಲಿ ಕುತ್ತಿಗೆಯವರೆಗೆ ಹೊಗೆಯಲ್ಲಿ ಹೂತು ಹಾಕಿ ರಾತ್ರಿಯಿಂದ ಬೆಳಗ್ಗಿನವರೆಗೆ ರವೂಫ್‌ನ ತಲೆಯ ಭಾಗಕ್ಕೆ ಹಲ್ಲೆ ನಡೆಸಿದ್ದರು. ಬೆಳಗ್ಗಿನ ಜಾವ ಆತನನ್ನು ಬಿಟ್ಟು ಹೋಗಿದ್ದು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿ ರವೂಫ್‌ನನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಈ ಘಟನೆಯ ಬಳಿಕ ರಫೀಕ್‌ನನ್ನು ಕೊಲೆ ನಡೆಸಲು ರವೂಫ್‌ ಯೋಜನೆ ಹಾಕಿದ್ದ ಎನ್ನಲಾಗಿದೆ.

ಕಲಿ – ಖಾಲಿಯಾ ನಂಟು : ಖಾಲಿಯಾ ರಫೀಕ್‌ ಮತ್ತು ಭೂಗತ ಜಗ್ಗತ್ತಿನಲ್ಲಿ ಗುರುತಿಸಿ  ಕೊಂಡಿರುವ ಕಲಿ ಯೋಗೀಶನಿಗೂ ನಂಟು ಇತ್ತು. ಹಪ್ತಾ ವಸೂಲಿಗೆ ಸಂಬಂಧಿಸಿ ಕಲಿ ಯೋಗೀಶ್‌ನ ಅಣತಿಯಂತೆ ತಲಪಾಡಿಯಲ್ಲಿ ಮನೆಯೊಂದಕ್ಕೆ ತೆರಳಿ ಶೂಟೌಟ್‌ ಮಾಡಿ ದಾಳಿ ನಡೆಸಿದ್ದ. ಅದರಿಂದ ಕಲಿ ಯೋಗೀಶನಿಗೆ ಕೇರಳ ಗಡಿ ಭಾಗದಲ್ಲಿ ಹಿನ್ನಡೆಯಾಗಿದ್ದು, ಕಲಿ ಯೋಗೀಶ್‌ ಪ್ರತಿಕಾರ ನಡೆಸುವ ಸಾಧ್ಯತೆ ಇದ್ದು, ಗ್ಯಾಂಗ್‌ವಾರ್‌ ಮುಂದುÊರಿಯುವ ಸಾಧ್ಯತೆ ಇದೆ.

Advertisement

ರೈಲು ನಿಲ್ದಾಣಕ್ಕೆ ಹೊರಟಿದ್ದ ಖಾಲಿಯಾ ಕಸಾಯಿ ಆಲಿ ಗ್ಯಾಂಗ್‌ ‌° ಕೊಲೆಗೆ ಸಂಚು ರೂಪಿಸುತ್ತಿರುವುದನ್ನು ಅರಿತಿದ್ದ ರಫೀಕ್‌ ಕೆಲ ಕಾಲ ಮಹರಾಷ್ಟÅದ ಪೂನಾದಲ್ಲಿರುವ ಅಜ್ಞಾತ ಸ್ಥಳಕ್ಕೆ ತೆರಳುವನಿದ್ದ. ಈ ನಿಟ್ಟಿನಲ್ಲಿ ಉಪ್ಪಳದಿಂದ ಮಂಗಳೂರು ತಲುಪಲು ಎರಡೆರಡು ಕಾರನ್ನು ಬದಲಾಯಿಸಿದ್ದ ಎನ್ನಲಾಗಿದೆ.

ಖಲಿಯಾಗೆ ಕಾಯುತ್ತಿದ್ದ ಕಸಾಯಿ : ಖಾಲಿಯಾ ರಫೀಕ್‌ನನ್ನು ಕೊಲೆಗೈಯಲು ತಿಂಗಳ ಹಿಂದೆಯೇ ಯೋಜನೆ ರೂಪಿಸಿದ್ದ ಕಸಾಯಿ ಆಲಿ ಯಾನೆ ನೂರಾಲಿ ಎನ್ನಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next