Advertisement
ಕೆನಡಾಕ್ಕೆ ನಿಷ್ಠರಾಗಿ, ಇಲ್ಲವೇ ತೊಲಗಿಮೋದಿಯ ಹಿಂಸಾತ್ಮಕ ಹಿಂದುತ್ವವನ್ನು ಪಾಲಿಸುವ ಭಾರತೀಯ-ಕೆನಡಿಯನ್ನರೇ, ಕೆನಡಾ ಸಂಸತ್ತಿನಲ್ಲಿ ಹಿಂದೂ ಭಯೋತ್ಪಾದನೆಯ ಪ್ರತಿನಿಧಿಯಾಗಿರುವ ಸಂಸದ ಚಂದ್ರ ಆರ್ಯ ಅವರೇ, ನೀವೆಲ್ಲ ಕೆನಡಾಕ್ಕೆ ನಿಷ್ಠರಾಗಿರಿ, ಇಲ್ಲವಾದಲ್ಲಿ ಕೆನಡಾವನ್ನು ತೊರೆಯಿರಿ. ಖಲಿಸ್ಥಾನಿ ಪರ ಸಿಕ್ಖರ ವಿರುದ್ಧ ಭಾರತೀಯ ರಾಯಭಾರಿಗಳು ಬೇಹುಗಾರಿಕೆ ನಡೆಸುತ್ತಿದ್ದಾರೆ ಎಂಬುದನ್ನು ಕೆನಡಾ ಪ್ರಧಾನಿ ಜಸ್ಟಿನ್ ಟ್ರಾಡೋ ಹಾಗೂ ಕೆನಡಾ ಪೊಲೀಸರು (ಆರ್ಸಿಎಂಪಿ) ಒಪ್ಪಿಕೊಂಡಿದ್ದಾರೆ. ಜತೆಗೆ ನಿಜ್ಜರ್ ಹತ್ಯೆಗೂ ರಾಯಭಾರಿಗಳೇ ಜವಾಬ್ದಾರರು ಎಂಬುದನ್ನೂ ಅಂಗೀಕರಿಸಿದ್ದಾರೆ ಎಂದು ಪನ್ನು ಹೇಳಿದ್ದಾನೆ.
ಭಾರತೀಯ ರಾಯಭಾರಿಗಳ ಮೇಲೆ ನಮ್ಮ ಪ್ರತೀಕಾರ ಮುಂದುವರಿಯಲಿದೆ. ನ. 16-17ರಂದು ನಡೆಯಲಿರುವ ದಾಳಿಗಳು ಈ ರಾಯಭಾರಿಗಳಿಗೆ ಹೊಸ ಸವಾಲಾಗಲಿದೆ. ಸಿಕ್ಖ್ ಫಾರ್ ಜಸ್ಟೀಸ್ ಸಂಘಟನೆಯು ಮೋದಿಯ ರಾಜಕಾರಣವನ್ನು ಕೊಲ್ಲಲಿದೆ. ಮೋದಿ ಹಾಗೂ ಅಮಿತ್ ಶಾ ಅವರೇ, ಕೆನಡಾ ನಿಮ್ಮ ಅಯೋಧ್ಯೆಯ ರೀತಿಯಲ್ಲ ಎಂಬುದನ್ನು ತಿಳಿಯಿರಿ. ಆರೆಸ್ಸೆಸ್, ಬಜರಂಗ ಕಾರ್ಯಕರ್ತರು ಕೆನಡಾದ ಗುರುದ್ವಾರ ಸಾಹಿಬ್ಗ ದಾಳಿ ಮಾಡಲು ಯತ್ನಿಸಿದ್ದಾರೆ. ಈಗ ನಾವು ನಿಮ್ಮ ಅಯೋಧ್ಯೆಯ ಅಡಿಪಾಯವನ್ನು ಅಲುಗಾಡಿಸುತ್ತೇವೆ ಎಂದಿದ್ದಾನೆ.