Advertisement

ದೆಹಲಿಯಲ್ಲಿ ಖಲಿಸ್ತಾನಿ ಸ್ಲೀಪರ್ ಸೆಲ್‌ ಗಳು ಸಕ್ರಿಯ; ದೊಡ್ಡ ದಾಳಿಯ ಬಗ್ಗೆ ಗುಪ್ತಚರ ವರದಿ

03:19 PM Jan 29, 2023 | Team Udayavani |

ಹೊಸದಿಲ್ಲಿ: ಖಲಿಸ್ತಾನಿ ಸ್ಲೀಪರ್ ಸೆಲ್‌ ಗಳ ಭಯೋತ್ಪಾದಕ ಜಾಲಗಳು ದೆಹಲಿ-ಎನ್‌ ಸಿಆರ್ ಪ್ರದೇಶದಲ್ಲಿ ಸಕ್ರಿಯವಾಗಿವೆ ಎಂದು ಗುಪ್ತಚರ ಸಂಸ್ಥೆಗಳ ಮೂಲಗಳನ್ನು ಉಲ್ಲೇಖಿಸಿ ಇಂಡಿಯಾ ಟುಡೇ ವರದಿ ಮಾಡಿವೆ. ಪಶ್ಚಿಮ ದೆಹಲಿಯ ಹಲವು ಪ್ರದೇಶಗಳಲ್ಲಿ ಖಾಲಿಸ್ತಾನ್ ಪರ ಪೋಸ್ಟರ್‌ ಗಳು ಮತ್ತು ಬರಹಗಳು ಕಾಣಿಸಿಕೊಂಡ ಕೆಲವೇ ದಿನಗಳಲ್ಲಿ ಈ ವರದಿ ಬಂದಿದೆ.

Advertisement

ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿ ಖಲಿಸ್ತಾನಿ ಸ್ಲೀಪರ್ ಸೆಲ್‌ ಗಳು ಭಯೋತ್ಪಾದಕ ದಾಳಿಗಳನ್ನು ನಡೆಸಬಹುದು ಎಂದು ವರದಿಯಾಗಿದೆ. ವಿಕಾಸಪುರಿ, ಜನಕಪುರಿ, ಪಶ್ಚಿಮ ವಿಹಾರ್, ಪೀರಗರ್ಹಿ ಮತ್ತು ಪಶ್ಚಿಮ ದೆಹಲಿಯ ಇತರ ಭಾಗಗಳಲ್ಲಿ ಕಾಣಿಸಿಕೊಂಡ ಆಕ್ಷೇಪಾರ್ಹ ಘೋಷಣೆಗಳೊಂದಿಗೆ ಬರಹವು ದೊಡ್ಡ ಪಿತೂರಿಯ ಭಾಗವಾಗಿರಬಹುದು ಎನ್ನಲಾಗಿದೆ.

ಇದನ್ನೂ ಓದಿ:ಕಾಂಗ್ರೆಸ್ ರೀತಿ ಕೀಳುಮಟ್ಟದ ವಿಚಾರದೊಂದಿಗೆ ಪ್ರಚಾರ ಮಾಡುವುದಿಲ್ಲ: ಸಿಎಂ ಬೊಮ್ಮಾಯಿ

ಖಲಿಸ್ತಾನಿ ಪರ ಪೋಸ್ಟರ್‌ ಗಳನ್ನು ಸ್ಥಳೀಯ ಪೊಲೀಸರು ತ್ವರಿತವಾಗಿ ಅಳಿಸಿ ಹಾಕಿದರು. ಆ ಗೋಡೆಗಳಿಗೆ ಪುನಃ ಬಣ್ಣ ಬಳಿಯಲಾಗಿದೆ. ಭಾರತೀಯ ದಂಡ ಸಂಹಿತೆಯ (IPC) ಎರಡು ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವ (153-B) ಮತ್ತು ಕ್ರಿಮಿನಲ್ ಪಿತೂರಿ (120-B) ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.

ಈ ಪ್ರದೇಶಗಳಲ್ಲಿ ಪೊಲೀಸ್ ಗಸ್ತು ಹೆಚ್ಚಿಸಲಾಗಿದ್ದು, ಸಿಸಿಟಿವಿ ಕ್ಯಾಮೆರಾಗಳ ದೃಶ್ಯಗಳನ್ನು ಸಹ ಸ್ಕ್ಯಾನ್ ಮಾಡಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next