Advertisement
ನಿಜ್ಜರ್ ಹತ್ಯೆ ಮೋದಿಗೆ ಗೊತ್ತಿತ್ತು: ಕೆನಡಾ ವರದಿಗೆ ಭಾರತ ತೀವ್ರ ಆಕ್ರೋಶಹೊಸದಿಲ್ಲಿ: ಖಲಿಸ್ಥಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಪ್ರಧಾನಿ ನರೇಂದ್ರ ಮೋದಿಗೆ ತಿಳಿದಿತ್ತು ಎಂಬ ಕೆನಡಾದ ವರದಿಗೆ ಭಾರತ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. “ಇದು ಕಳಂಕ ಬಳಿಯುವ ಹಾಸ್ಯಾಸ್ಪದ ಕೆಲಸ’ ಎಂದಿದೆ. ಕೆನಡಾದ ರಾಜತಾಂತ್ರಿಕ ಅಧಿಕಾರಿಗಳ ಮಾಹಿತಿಯಂತೆ ಅಲ್ಲಿನ ಮಾಧ್ಯಮಗಳು ನಿಜ್ಜರ್ ಹತ್ಯೆ ವಿಚಾರ ಭಾರತದ ಪ್ರಧಾನಿ, ರಾಷ್ಟ್ರೀಯ ಭದ್ರತೆ ಸಲಹೆಗಾರ ಮತ್ತು ವಿದೇಶಾಂಗ ಸಚಿವರಿಗೆ ಗೊತ್ತಿತ್ತು ಎಂದು ವರದಿ ಮಾಡಿವೆ. ಇದಕ್ಕೆ ತಿರುಗೇಟು ನೀಡಿ ರುವ ವಿದೇಶಾಂಗ ಇಲಾಖೆ ವಕ್ತಾರ ಜೈಸ್ವಾಲ್ ಕೆನಡಾದ ಈ ಕೃತ್ಯದಿಂದ ಹದಗೆಟ್ಟಿರುವ 2 ದೇಶಗಳ ಬಾಂಧವ್ಯಕ್ಕೆ ಮತ್ತಷ್ಟು ಧಕ್ಕೆಯಾಗಲಿದೆ ಎಂದಿದ್ದಾರೆ.