Advertisement

ಬಾಂಗ್ಲಾ ಕ್ರಿಕೆಟ್‌ ಮಾಜಿ ನಾಯಕ ಖಾಲಿದ್‌ಗೆ ಕೋಮಾ ಸ್ಥಿತಿ

06:05 AM Aug 01, 2017 | Team Udayavani |

ಢಾಕಾ: ಬಾಂಗ್ಲಾ ಕ್ರಿಕೆಟ್‌ ತಂಡದ ಮಾಜಿ ನಾಯಕ ಖಾಲಿದ್‌ ಮೊಹಮದ್‌ ಪಾರ್ಶ್ವವಾಯುವಿಗೆ ಒಳಗಾಗಿದ್ದಾರೆ.ಪರಿಣಾಮ ಅವರು ಅರೆ ಕೋಮಾವಸ್ಥೆಗೆ ಜಾರಿದ್ದಾರೆ.

Advertisement

ಹೆಚ್ಚಿನ ಚಿಕಿತ್ಸೆಗಾಗಿ ಸಿಂಗಾಪುರಕ್ಕೆ ಕರೆದುಕೊಂಡು ಹೋಗಲಾಗಿದೆ. ಖಾಲಿದ್‌ ಸದ್ಯ ಬಾಂಗ್ಲಾ ಕ್ರಿಕೆಟ್‌ ಮಂಡಳಿಯ ನಿರ್ದೇಶಕ ಮತ್ತು ತಂಡದ ವ್ಯವಸ್ಥಾಪಕರೂ ಆಗಿದ್ದಾರೆ. ಪಾರ್ಶ್ವವಾಯು ಕಾಣಿಸಿಕೊಂಡ ನಂತರ ಕುಟುಂಬದವರು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ತೀವ್ರ ಸಮಸ್ಯೆಯೇನು ಕಾಣಿಸಿಕೊಂಡಿಲ್ಲ. ಖಾಲಿದ್‌ 2001ರಿಂದ 2006ರವರೆಗೆ ಬಾಂಗ್ಲಾ ತಂಡವನ್ನು ಪ್ರತಿನಿಧಿಸಿದ್ದಾರೆ. 12 ಟೆಸ್ಟ್‌, 77 ಏಕದಿನ ಆಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next