ಕೈಕಂಬ : ತೆಂಕುಳಿಪಾಡಿ ಗ್ರಾಮದ ಕಾಜಲ ದಲ್ಲಿರುವ ಪ್ರಕಾಶ್ ಶೆಟ್ಟಿಯವರ ಕಾಜಿಲ ಫಾರಂ ಹೌಸ್ ನಲ್ಲಿದ್ದ 4 ದೊಡ್ಡ ಜಾತಿಯ ದನಗಳನ್ನು 2012ರ ಮೇ.26ರಂದು ಕಳ್ಳತನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಜಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ನ್ಯಾಯಾಲಯದ ವಾಯಿದೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ ಅಬ್ದುಲ್ ಕಬೀರ್ ಯಾನೆ ಪಾರಿವಾಳ ಕಬೀರನನ್ನು ಬಜಪೆ ಠಾಣಾ ಪೊಲೀಸರು ವಿಶೇಷ ಕಾರ್ಯಚರಣೆ ನಡೆಸಿ ಮಾ.20ರಂದು ಮಂಗಳೂರಿನಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿತನ ಮೇಲೆ ಮಂಗಳೂರು ನಗರದ್ಯಾದಂತ ವಿವಿಧ ಠಾಣೆಗಳಾದ ಪಣಂಬೂರು, ಬಂದರು, ಪಾಂಡೇಶ್ವರ, ಉಳ್ಳಾಲ, ಉಪ್ಪಿನಂಗಡಿ, ಮಂಗಳೂರು : ಪೂರ್ವ ಠಾಣೆಗಳಲ್ಲಿ ದರೋಡೆ, ಕನ್ನ ಕಳವು, ದನಗಳವು ಪ್ರಕರಣಗಳು ಈ ಹಿಂದೆ ದಾಖಲಾಗಿರುತ್ತವೆ.
ದಸಗಿರಿಯಾದ ಆರೋಪಿ ಪಣಂಬೂರಿನ ಕಸಬಾ ಬೇಂದ್ರೆ, ಅಬ್ದುಲ್ ಕಬೀರ್ ಯಾನೆ ಪಾರಿವಾಳ ಕಬೀರ್
ಈ ಪ್ರಕರಣದಲ್ಲಿ ಮಂಗಳೂರು ನಗರದ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್‌ರವರ ಮಾರ್ಗದರ್ಶನದಂತೆ, ಮಾನ್ಯ ಡಿಸಿಪಿಯವರಾದ ಅಂಶು ಕುಮಾರ್ (ಕಾ ಮತ್ತುಸು) ದಿನೇಶ್ ಕುಮಾರ್ (ಅ ಮತ್ತು ಸಂ) ಮತ್ತು ಮಂಗಳೂರು ಉತ್ತರ ಉಪ ವಿಭಾಗದ ಎಸಿಪಿ ಮನೋಜ್ ಕುಮಾರ್ ನಾಯ್ಕ ರವರ ನಿರ್ದೇಶನದಂತೆ, ಈ ಕಾರ್ಯಚರಣೆಯಲ್ಲಿ ಬಜಪೆ ಠಾಣಾ ಪಿ.ಐ. ಪ್ರಕಾಶ್, ಪಿ.ಸ್.ಐ. ಗುರು ಕಾಂತಿ, ಪೂವಪ್ಪ, ಎ.ಎಸ್.ಐ. ರಾಮ ಪೂಜಾರಿ, ಮತ್ತು ಹೆಚ್ ಸಿ. ಗಳಾದ ರೋಹಿತ್, ಜಗದೀಶ್, ಸುಜನ್, ರಾಜೇಶ್, ಸಂತೋಷ್, ಸಂಜೀವ ಭಜಂತ್ರಿ, ಬಸವರಾಜ್ ಪಾಟೀಲ್, ಕಾರ್ಯಚರಣೆಯಲ್ಲಿ ಪಾಲ್ಗೊಂಡಿರುತ್ತಾರೆ.