Advertisement

ಖಾಕಿ ತೊಟ್ಟ ಚಿರುಗೆ ಸಾಥ್‌ ಕೊಟ್ಟ ಉಪ್ಪಿ

10:58 AM Jan 09, 2020 | Suhan S |

ಚಿರಂಜೀವಿ ಸರ್ಜಾ ಅಭಿನಯದ “ಖಾಕಿ’ ಚಿತ್ರ ಈಗಾಗಲೇ ಟೀಸರ್‌ ಹಾಗು ಹಾಡುಗಳ ಮೂಲಕ ಭರ್ಜರಿ ಸದ್ದು ಮಾಡುತ್ತಿದೆ. ಈಗ ಚಿತ್ರದ ಟ್ರೇಲರ್‌ ಬಿಡುಗಡೆಯ ಸಮಯ. ಹೌದು, “ಖಾಕಿ’ ಚಿತ್ರದ ಟ್ರೇಲರ್‌ ಜನವರಿ 09 ರಂದು ಬಿಡುಗಡೆಯಾಗುತ್ತಿದೆ. ಈ ಬಾರಿ ಚಿರಂಜೀವಿ ಸರ್ಜಾಗೆ ಸಾಥ್‌ ನೀಡುತ್ತಿರೋದು ಉಪೇಂದ್ರ. ಚಿತ್ರದ ಟ್ರೇಲರ್‌ ಅನ್ನು ಉಪೇಂದ್ರ ಬಿಡುಗಡೆ ಮಾಡಲಿದ್ದಾರೆ.

Advertisement

ಟ್ರೇಲರ್‌ ನೋಡಿದ ಪ್ರೇಕ್ಷಕರಿಗೆ ಸಿನಿಮಾ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚುತ್ತದೆ ಎಂಬ ವಿಶ್ವಾಸ ಚಿತ್ರತಂಡದ್ದು. “ಖಾಕಿ’ ಕನ್ನಡದ ಜೊತೆಯಲ್ಲಿ ಮಲಯಾಳಂ ಭಾಷೆಯಲ್ಲೂ ಬಿಡುಗಡೆಯಾಗುತ್ತಿದೆ. ಜೊತೆಗೆ ತಮಿಳಿನಲ್ಲೂ ಬಿಡುಗಡೆ ಮಾಡುವ ಯೋಚನೆ ಚಿತ್ರತಂಡಕ್ಕಿದೆ. ಇನ್ನು ಚಿತ್ರ ಜನವರಿ 24 ರಂದು ರಾಜ್ಯಾದ್ಯಂತ ಸುಮಾರು 250 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ “ಖಾಕಿ’ ಚಿತ್ರ ಬಿಡುಗಡೆಯಾಗುತ್ತಿದೆ. ಇದೇ ಮೊದಲ ಬಾರಿಗೆ ನವೀನ್‌ ರೆಡ್ಡಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ ಸಿಕ್ಕಿದೆ. ಚಿತ್ರದಲ್ಲಿ ಛಾಯಾಸಿಂಗ್‌ ಕೂಡ ನಟಿಸಿದ್ದಾರೆ.

ನಾಯಕ ಚಿತ್ರದಲ್ಲಿ ಕೇಬಲ್‌ ಹುಡುಗನಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಮಾಸ್‌ ಅಂಶಗಳು ಹೈಲೈಟ್‌. ಚಿತ್ರದ ಶೀರ್ಷಿಕೆಗೆ “ಪವರ್‌ ಆಫ್ ಕಾಮನ್‌ ಮ್ಯಾನ್‌’ ಎಂಬ ಅಡಿಬರಹವಿದೆ.

Advertisement

Udayavani is now on Telegram. Click here to join our channel and stay updated with the latest news.

Next