Advertisement

ಪೊಲೀಸರ ಕಲಾವಿದರ ಖಾಕಿ ಕ್ರಾನಿಕಲ್‌

11:38 AM Jun 29, 2018 | |

ಬೆಂಗಳೂರು: ಲಾಠಿ ಹಿಡಿದು ಕಾನೂನು ಸುವ್ಯವಸ್ಥೆ ಕಾಪಾಡುವ ಕೈಗಳು ಇದೀಗ ಕುಂಚ ಹಿಡಿದು ಕಲೆ ಅರಳಿಸಿದ ಕ್ಷಣವದು. ಪೊಲೀಸರೇ ರೂಪಿಸಿದ ವಿಭಿನ್ನ ರೀತಿಯ ಪೇಂಟಿಂಗ್‌, ಕರಕುಶಳ ಕಲೆ, ಫೋಟೋಗ್ರಾಫಿ ಸೇರಿದಂತೆ ಒಟ್ಟು 77 ಪ್ರಕಾರದ ಕಲೆಗಳನ್ನು ಒಳಗೊಂಡ “ಖಾಕಿ ಕ್ರಾನಿಕಲ್ಸ್‌’ ಪ್ರದರ್ಶನ ಚಿತ್ರಕಲಾ ಪರಿಷತ್‌ನಲ್ಲಿ ಗುರುವಾರ ಆರಂಭವಾಗಿದೆ.

Advertisement

ಜುಲೈ 1ರವರೆಗೆ ನಡೆಯಲಿರುವ ಕಲಾ ಪ್ರದರ್ಶನವನ್ನು ನಟ ಯಶ್‌ ಹಾಗೂ ರಾಜ್ಯ ಪೊಲೀಸ್‌ ಮಹಾನಿರ್ದೇಶಕಿ ನೀಲಮಣಿ ಎನ್‌. ರಾಜು ಉದ್ಘಾಟಿಸಿದರು. ಸಿಎಆರ್‌ ಡಿಸಿಪಿ ವರ್ತಿಕಾ ಕಟಿಯಾರ್‌, ಕೊಪ್ಪಳ ಎಸ್ಪಿ ಅನೂಪ್‌ ಶೆಟ್ಟಿ, ಮುನಿರಾಬಾದ್‌ನ ಇಂಡಿಯಾ ರಿಸರ್ವ್‌ ಬೆಟಾಲಿಯನ್‌ನ ಕಮಾಂಡೆಂಟ್‌ ನಿಶಾ ಜೇಮ್ಸ್‌ ಸೇರಿ ವಿವಿಧ ದರ್ಜೆಯ 19 ಅಧಿಕಾರಿ ಮತ್ತು ಸಿಬ್ಬಂದಿ ರಚಿಸಿರುವ ಕಲಾ ಪ್ರದರ್ಶನಗಳು ಗಮನ ಸೆಳೆಯುತ್ತಿವೆ. ಇದೇ ವೇಳೆ ಕೆಎಸ್‌ಆರ್‌ಪಿ ಪೇದೆ ಶ್ರೀರಾಮುಲು ರಚಿಸಿರುವ ಪೇಟಿಂಗ್‌ ಅಧಿಕಾರಿ ಮತ್ತು ಸಿಬ್ಬಂದಿಯಲ್ಲಿ ಸಂತಸ ಉಂಟು ಮಾಡಿತು.

ಈ ವೇಳೆ ಮಾತನಾಡಿದ ಪ್ರದರ್ಶನದ ಆಯೋಜಕರಾದ ರೇವಾಸ್‌ ಆರ್ಟ್‌ ಗ್ಯಾಲರಿ ಸಂಯೋಜಕಿ, ಕಲಾವಿದೆ ರಜನಿ ರೇಖಾ, ಆರಂಭದಲ್ಲಿ ಒಬ್ಬ ಪೊಲೀಸ್‌ ಸಿಬ್ಬಂದಿ ಕಲೆಯನ್ನು ಪ್ರದರ್ಶನ ಮಾಡುವ ಯೋಚನೆ ಇತ್ತು. ಆದರೆ, ದಿನ ಕಳೆದಂತೆ ಹಲವು ಪೊಲೀಸರು ಒಂದೊಂದೆ ಕಲೆಗಳು, ಕೌಶಲ್ಯಗಳು ಪ್ರದರ್ಶನಕ್ಕೆ ಬಂದವು ಎಂದರು. ಕೆಎಸ್‌ಆರ್‌ಪಿ ಎಡಿಜಿಪಿ ಭಾಸ್ಕರ್‌ ರಾವ್‌, ಹಿರಿಯ ಐಪಿಎಸ್‌ ಅಧಿಕಾರಿಗಳಾದ ಪ್ರವೀಣ್‌ ಸೂದ್‌, ಕೆ.ತ್ಯಾಗರಾಜನ್‌, ಎಂ.ಎ ಸಲೀಂ ಸೇರಿ ಹಲವು ಪೊಲೀಸ್‌ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next