Advertisement

ಜಗತ್ತಿನ ಅತಿ ಕುಬ್ಜ ವ್ಯಕ್ತಿ ಖಾಗೇಂದ್ರ ಥಾಪಾ ಇನ್ನಿಲ್ಲ

10:08 AM Jan 19, 2020 | sudhir |

ಮುಂಬೈ: ಕೇವಲ 2 ಅಡಿ 2.41 ಇಂಚು ಎತ್ತರ ಇದ್ದ “ನಡೆದಾಡುತ್ತಿದ್ದ ಜಗತ್ತಿನ ಅತಿ ಕುಬ್ಜ ವ್ಯಕ್ತಿ ಖಾಗೇಂದ್ರ ಥಾಪಾ ಮಗರ್‌(27) ನೇಪಾಳದ ಆಸ್ಪತ್ರೆಯೊಂದರಲ್ಲಿ ಮೃತಪಟ್ಟಿದ್ದಾರೆ. ಖಾಗ್ರೇಂದ್ರ ಥಾಪಾ ನ್ಯುಮೋನಿಯಾದಿಂದ ಬಳಲುತ್ತಿದ್ದರು. ಪೊಖಾರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫ‌ಲಕಾರಿಯಾಗದೇ ಶನಿವಾರ ಕೊನೆಯುಸಿರೆಳೆದರು ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ.

Advertisement

2010ರಲ್ಲಿ ಅಂದರೆ ತಮಗೆ 18 ವರ್ಷ ತುಂಬಿದ್ದ ಸಂದರ್ಭದಲ್ಲಿ, ಖಾಗೇಂದ್ರ ಅವರು ಪ್ರಪಂಚದ ಅತಿ ಕುಬ್ಜ ವ್ಯಕ್ತಿ ಎಂದು ಗಿನ್ನೆಸ್‌ ದಾಖಲೆಗೆ ಸೇರಿದ್ದರು. ಬಳಿಕ ನೇಪಾಳದವರೇ ಆದ ಚಂದ್ರ ಬಹಾದೂರ್‌ ಡೆಂಗಿ ಅತ್ಯಂತ ಕುಬ್ಜ ವ್ಯಕ್ತಿ ಎಂಬ ಬಿರುದಿಗೆ ಪಾತ್ರರಾದರು. 2015ರಲ್ಲಿ ಡೆಂಗಿ ನಿಧನರಾದ ಬಳಿಕ ಖಾಗೇಂದ್ರ ಈ ಬಿರುದನ್ನು ಮರಳಿ ಪಡೆದರು. ಅವರ ನಿಧನಕ್ಕೆ ಗಿನ್ನೆಸ್‌ ದಾಖಲೆ ಮುಖ್ಯ ಸಂಪಾದಕರು ಕಂಬನಿ ಮಿಡಿದಿದ್ದಾರೆ. 6 ಕೆ.ಜಿ. ತೂಕದ ವ್ಯಕ್ತಿಗೆ ಬದುಕು ದುಸ್ತರವಾಗಿರುತ್ತದೆ. ಆದರೆ ಖಾಗೇಂದ್ರರದ್ದು ಪುಟಿಯುವ ಜೀವನೋತ್ಸಾಹ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next