Advertisement

ತರಂಗ ವಾರಪತ್ರಿಕೆ ಸಂಪಾದಕಿ ಡಾ. ಯು.ಬಿ. ರಾಜಲಕ್ಷ್ಮಿಯವರಿಗೆ ಖಾದ್ರಿ ಶಾಮಣ್ಣ ಪ್ರಶಸ್ತಿ

06:39 PM Jun 05, 2020 | keerthan |

ಬೆಂಗಳೂರು: ಹಿರಿಯ ಪತ್ರಕರ್ತೆ, ತರಂಗ ವಾರಪತ್ರಿಕೆಯ ಸಂಪಾದಕಿ ಡಾ. ಯು.ಬಿ. ರಾಜಲಕ್ಷ್ಮಿಯವರಿಗೆ ಈ ಬಾರಿಯ ಖಾದ್ರಿ ಶಾಮಣ್ಣ ಪತ್ರಿಕೋದ್ಯಮ ಪ್ರಶಸ್ತಿ ಲಭಿಸಿದೆ.

Advertisement

ಉಡುಪಿಯ ಜಿಲ್ಲೆಯ ಕಾರ್ಕಳದವರಾದ ಡಾ. ಯು.ಬಿ. ರಾಜಲಕ್ಷ್ಮಿ ಕಳೆದ 37 ವರ್ಷಗಳಿಂದ ಪತ್ರಿಕಾ ರಂಗದಲ್ಲಿದ್ದಾರೆ. ಆರಂಭಿಕ ದಿನಗಳಲ್ಲಿ ಕೆಲವು ದಿನಪತ್ರಿಕೆಗಳಲ್ಲಿ ಕೆಲಸ ಮಾಡಿ ನಂತರ 1987 ರಲ್ಲಿ ಉದಯವಾಣಿ ಸೋದರ ಪತ್ರಿಕೆ ತರಂಗ ವಾರಪತ್ರಿಕೆಯಲ್ಲಿ ಸೇವೆ ಆರಂಭಿಸಿ ಈಗ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಇವರು ಮೈಸೂರು ವಿವಿಯಲ್ಲಿ ಕನ್ನಡ ಎಂ.ಎ ಮತ್ತು ಪತ್ರಿಕೋದ್ಯಮದಲ್ಲಿ ಡಿಪ್ಲೊಮಾ ಪಡೆದು ಹಂಪಿ ವಿವಿಯಲ್ಲಿ ಡಾಕ್ಟರೇಟ್ ಪಡೆದಿದ್ದಾರೆ. ಹಲವು ಕೃತಿಗಳನ್ನು ರಚಿಸಿರುವ ಇವರು ಸಾಕ್ಷ್ಯಚಿತ್ರಗಳನ್ನೂ ನಿರ್ದೇಶಿಸಿದ್ದಾರೆ. ಮಲೇಷ್ಯಾ ಸರ್ಕಾರದ ಆಹ್ವಾನದ ಮೇಲೆ ಅಧ್ಯಯನ ಪ್ರವಾಸ ಕೈಗೊಂಡಿದ್ದರು.

ಡಾ. ಯು.ಬಿ. ರಾಜಲಕ್ಷ್ಮಿ ಅವರ ಪ್ರತಿಕಾರಂಗದ ಸಾಧನೆಯನ್ನು ಪರಿಗಣಿಸಿ, ಖಾದ್ರಿ ಶಾಮಣ್ಣ ಟ್ರಸ್ಟ್ ಈ ವರ್ಷದ ಪ್ರಶಸ್ತಿಯನ್ನು ನೀಡುತ್ತಿದ್ದು, ಪ್ರಶಸ್ತಿ 15 ಸಾವಿರ ರೂ. ನಗದು ಹಾಗೂ ಫಲಕ ಹೊಂದಿರುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next