Advertisement

ಮನೆಯೊಳಗೆ ಖಾದಿಯ ಶೃಂಗಾರ

11:19 PM Jul 05, 2019 | mahesh |

ಸ್ವದೇಶಿ ಸದ್ಯ ಭಾರತದಲ್ಲಿ ಸಾಕಷ್ಟು ಪ್ರಚಲಿತದಲ್ಲಿರುವ ಪದ. ಬೇರೆ ದೇಶಗಳ ವಸ್ತುಗಳನ್ನು ಖರೀದಿಸದೆ ಭಾರತದಲ್ಲೇ ತಯಾರಾದ ವಸ್ತುಗಳ ಬಳಕೆ ಹೆಚ್ಚಿಸುವುದೆ ಈ ಸ್ವದೇಶಿ ಚಳವಳಿಯ ಉದ್ದೇಶ. ಅದರಂತೆ ಇಂದು ನಮ್ಮಲ್ಲಿ ಸ್ವದೇಶಿ ಉತ್ಪನ್ನಗಳಿಗೆ ಬೇಡಿಕೆ ಕೂಡ ದಿನೇ ದಿನೇ ಹೆಚ್ಚುತ್ತಲೇ ಇದೆ. ಈ ಸ್ವದೇಶಿ ವಸ್ತುಗಳಲ್ಲಿ ಎಲ್ಲರ ಗಮನ ಸೆಳೆದಿರುವುದು ಖಾದಿ.

Advertisement

ಫ್ಯಾಶನ್‌ ಲೋಕದಲ್ಲಿ ಮಾತ್ರವಲ್ಲ ಮನೆಯ ಅಲಂಕಾರದಲ್ಲೂ ಇಂದು ಖಾದಿಯ ಕಾರುಬಾರು ಜೋರಾಗಿಯೇ ಇದೆ.

ಹೌದು ‘ಮೇಕ್‌ ಇಂಡಿಯಾ’ ವಿಷಯ ಫ್ಯಾಶನ್‌ ಹಾಗೂ ಆಹಾರದಲ್ಲಿ ಯಶಸ್ಸು ಕಂಡ ಅನಂತರ ಈಗ ಮನೆಯ ಅಲಂಕಾರಕ್ಕೆ ಖಾದಿ ವಸ್ತುಗಳಿಗೆ ಭಾರೀ ಬೇಡಿಕೆ ಬರುತ್ತಿದೆ.

ಖಾದಿ ಕರ್ಟನ್ಸ್‌, ಸ್ವದೇಶಿ ಬೆಡ್‌ ಕವರ್‌, ಪಿಲ್ಲೋ ಕವರ್‌ ಹೀಗೆ ಮನೆಯ ಸೌಂದರ್ಯವನ್ನು ಹೆಚ್ಚಿಸಲು ಖಾದಿ ವಸ್ತುಗಳು ಬಳಸಲ್ಪಡುತ್ತಿವೆ.ಯುರೋಪ್‌ ದೇಶಗಳಲ್ಲಂತೂ ಖಾದಿ ರಗ್‌ಗೆ ಬೇಡಿಕೆ ಹೆಚ್ಚುತ್ತಿದೆ.

ಚಳಿಗಾಲದಲ್ಲಿ ದೇಹವನ್ನು ಈ ಖಾದಿ ರಗ್‌ ಇನ್ನಷ್ಟು ಬೆಚ್ಚಗಿರಿಸುವಲ್ಲಿ ಸಹಕಾರಿ. ಹೀಗಾಗಿ ಯೂರೋಪ್‌ ರಾಷ್ಟ್ರಗಳಲ್ಲಿ ಖಾದಿ ಹೆಚ್ಚು ಮನ್ನಣೆ ಪಡೆಯುತ್ತಿದೆ.

Advertisement

ಸರಳ, ಸುಂದರ ವಿನ್ಯಾಸ
ಖಾದಿಯಿಂದ ತಯಾರಿಸಲ್ಪಟ್ಟ ರಗ್‌, ಬೆಡ್‌, ಪಿಲ್ಲೋ ಕವರ್‌, ಮ್ಯಾಟ್‌ಗಳ ಸರಳ ಹಾಗೂ ಸುಂದರ ವಿನ್ಯಾಸದಿಂದ ಕೂಡಿರುವುದರಿಂದ ಮನೆಗೆ ವಿಭಿನ್ನ ಮೆರುಗನ್ನು ನೀಡುತ್ತವೆ. ಖಾದಿ ಜಗತ್ತಿನಾದ್ಯಂತ ಭಾರೀ ಮೆಚ್ಚುಗೆಯನ್ನು ಪಡೆಯುತ್ತಿದ್ದು, ಕೇವಲ ಬಟ್ಟೆಯಲ್ಲಿ ಮಾತ್ರವಲ್ಲ ಮನೆಯ ಅಲಂಕಾರಕ್ಕೂ ಬಳಸಲಾರಂಭಿಸಿದ್ದಾರೆ ಎಂಬ ಮಾತುಗಳು ವಿನ್ಯಾಸಕಾರರಿಂದ ಕೇಳಿಬರುತ್ತಿವೆ.

ಪರಿಸರಕ್ಕೆ ಹಾನಿಕಾರಕವಲ್ಲ
ಖಾದಿ ಪರಿಸರ ಸ್ನೇಹಿಯಾಗಿರುವುದರಿಂದ ಮನೆಯ ಉಷ್ಣತೆ ಹಾಗೂ ಯೋಗಕ್ಷೇಮವನ್ನು ಉತ್ತಮವಾಗಿಸುತ್ತದೆ. ಖಾದಿ ಗುಮ್ಜಾ, ಮ್ಯಾಟ್, ತಲೆದಿಂಬು ಹಾಗೂ ಬ್ಯಾಗ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಕೊಂಚ ದುಬಾರಿ ಯಾದರೂ ಮನೆಗೆ ಸುಂದರ ಮೆರುಗು ನೀಡುವ ಕಾರಣ ಕಣ್ಣುಮುಚ್ಚಿ ಖರೀದಿ ಮಾಡಬಹುದು.

ಸೋಫಾ ಸೆಟ್‌ಗಳ ಬಳಸುವ ಬಟ್ಟೆಯಲ್ಲೂ ಖಾದಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ಸಾಂಪ್ರದಾಯಿಕ ಶಾಪಿಂಗ್‌ಗೆ‌ ಮುಖ ಮಾಡುತ್ತಿರುವ ಜಗತ್ತಿಗೆ ಈ ಖಾದಿ ಉತ್ಪನ್ನಗಳು ಅತ್ಯಂತ ಸಮರ್ಥನೀಯ ಹಾಗೂ ಸೊಗಸಾದ ಖರೀದಿಯಾಗಿ ಬದಲಾಗುತ್ತಿದೆ.

ಖಾದಿಯ ನಿರ್ವಹಣೆ

ಮನೆ ಅಲಂಕಾರಕ್ಕೆ ಬಳಸುವ ಖಾದಿ ವಸ್ತುಗಳ ನಿರ್ವಹಣೆ ತುಸು ಕಷ್ಟವೇ. ಹೆಚ್ಚಿನ ಕಾಳಜಿ ಅಗತ್ಯವಿದೆ. ಸಾಮಾನ್ಯವಾದ ಕರ್ಟನ್ಸ್‌, ಪಿಲ್ಲೋ ಕವರ್‌ಗಳ ನಿರ್ವಹಣೆ ಹೇಗೆ ಮಾಡುತ್ತೇವೆಯೇ ಅದಕ್ಕಿಂತ ಒಂದು ಪಟ್ಟು ಹೆಚ್ಚು ಕಾಳಜಿ ಖಾದಿಯ ವಸ್ತುಗಳಿಗೆ ಬೇಕು.

•ರಮ್ಯಾ ಕೆದಿಲಾಯ

Advertisement

Udayavani is now on Telegram. Click here to join our channel and stay updated with the latest news.

Next