Advertisement

ಖಾದಿ, ಗ್ರಾಮೋದ್ಯೋಗ ದೇಶದ ಪರಂಪರೆ

07:24 AM Feb 11, 2019 | |

ಹುಣಸೂರು: ಉದ್ಯೋಗ ಪಡೆಯಲು ಕೇವಲ ಶೈಕ್ಷಣಿಕ ಅರ್ಹತೆ ಇದ್ದರೆ ಮಾತ್ರ ಸಾಲದು, ಬದಲಾಗಿ ಕೌಶಲ್ಯತೆ ಅಗತ್ಯ ಎಂದು ತಾಲೂಕು ಕೈಗಾರಿಕಾ ವಿಸ್ತರಣಾಧಿಕಾರಿ ಆರ್‌.ಅಶ್ವಿ‌ನಿ ಹೇಳಿದರು.

Advertisement

ನಗರದ ಡಿ.ದೇವರಾಜ ಅರಸು ಸರ‌ಕಾರಿ ಪ್ರಥಮದರ್ಜೆ ಕಾಲೇಜಿನ ಉದ್ಯೋಗ ಮಾಹಿತಿ ಮತ್ತು ಮಾರ್ಗದರ್ಶನ ಕೇಂದ್ರ, ಮೈಸೂರಿನ ಖಾದಿ ಮತ್ತು ಗ್ರಾಮೋದ್ಯೋಗ ಕೈಗಾರಿಕಾ ವಿಭಾಗ ಹಾಗೂ ಡಿ ಎಸ್‌ ಎಂ.ಎಸ್‌ ಸಂಸ್ಥೆ ಸಹಯೋಗದಲ್ಲಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಒಂದು ದಿನದ ಉದ್ಯಮಶೀಲತಾ ಜಾಗೃತಿ ಮತ್ತು ಪ್ರಾತ್ಯಕ್ಷತಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹುಣಸೂರು ಖಾದಿ ಮತ್ತು ಗ್ರಾಮೋದ್ಯೋಗ ಎನ್ನುವುದು ನಮ್ಮ ದೇಶದ ಪರಂಪರೆಯಾಗಿದೆ. ಖಾದಿ ಮತ್ತು ಗ್ರಾಮೋದ್ಯೋಗ ಕ್ಷೇತ್ರದಲ್ಲಿ ಇಂದಿನ ದಿನಗಳಲ್ಲಿ ಸುಧಾರಿತ ಕುಶಲಕರ್ಮಿಗಳು ಬಳಸಬಹುದಾದ ಉಪಕರಣಗಳು ಬಂದಿವೆ. ಸ್ವ ಉದ್ಯೋಗ ಪಡೆಯಲು ಇಂತಹ ಕೌಶಲ್ಯಭರಿತ ಉದ್ಯೋಗಳನ್ನು ಅರಿಯುವುದು ಮುಖ್ಯ ಎಂದು ತಿಳಿಸಿದರು.

ಮೈಸೂರು ಸಿಡಾಟ್ ಸಂಸ್ಥೆಯ ಶುಭಂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲಿ ಕುಶಲಕರ್ಮಿಗಳಿಗಾಗಿ ರೂಪುಗೊಂಡಿರುವ ಹಲವಾರು ಯೋಜನೆಗಳ ಕುರಿತು ಮಾಹಿತಿ ಒದಗಿಸಿದರು. ಪ್ರಾಂಶುಪಾಲ ಡಾ.ವೆಂಕಟೇಶಯ್ಯ ಕಾರ್ಯಾಗಾರ ಉದ್ಘಾಟಿಸಿದರು. ಉದ್ಯೋಗ ಮತ್ತು ಮಾಹಿತಿ ಕೇಂದ್ರದ ಸಂಚಾಲಕ ಡಾ.ಗುರುಸ್ವಾಮಿ, ಡಾ.ತ್ರೀವೇಣಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next