Advertisement

ಖಾದಿಗೂ ಬಂತು ಬೇಡಿಕೆ

01:54 PM Jun 28, 2019 | mahesh |

ಫ್ಯಾಶನ್‌ ಲೋಕದಲ್ಲಿ ವಿನೂತನ ರೀತಿಯ ಬಟ್ಟೆಗಳು ಬರುವುದು ಸಾಮಾನ್ಯ. ಆದರೆ ಮೊದಲು ತುಂಬಾ ಪ್ರಚಲಿತದಲ್ಲಿದ್ದ ಖಾದಿ ವಸ್ತ್ರದ ಬಳಕೆಯ ಟ್ರೆಂಡ್‌ ಮತ್ತೆ ಶುರುವಾಗಿದೆ.

Advertisement

ಮೊದಲು ಕುರ್ತಾ ಎಂದರೆ ಹಬ್ಬ ಹರಿ ದಿನಗಳಲ್ಲಿ ಮಾತ್ರ ತೋಡುವ ಬಟ್ಟೆ ಎಂದಾಗಿತ್ತು ಆದರೆ ಇಂದು ಅವು ಸರ್ವೆ ಸಾಮಾನ್ಯವಾಗುತ್ತಿದ್ದು ಅದರಲ್ಲಿಯೂ ಖಾದಿಯನ್ನು ಇಷ್ಟ ಪಡುವ ಹುಡುಗಿಯರ ಸಂಖ್ಯೆ ಅಧಿಕವಾಗಿದೆ.

ಎಲ್ಲ ಬಟ್ಟೆಗಳಿಗೂ ಸೂಕ್ತ
ಖಾದಿ ಕುರ್ತಿಗಳನ್ನು ಸ್ಕರ್ಟ್‌, ಜಿನ್ಸ್‌ ಪ್ಯಾಂಟ್‌, ಲೆಗ್ಗಿಂಗ್ಸ್‌, ದೋತಿ ಪ್ಯಾಂಟ್‌, ಉದ್ದಲಂಗ, ಥ್ರಿ ಫೋರ್ಥ್ ಮತ್ತು ಪ್ಯಾರಲರ್‌ ಪ್ಯಾಂಟ್‌ಗಳ ಜತೆ ತೊಡಬಹುದಾಗಿದ್ದು, ಎಲ್ಲ ಋತುಗಳಲ್ಲೂ ತೊಡಬಹುದಾದಂತಹ ಬಟ್ಟೆ. ಇದನ್ನು ಯಾವ ಸಮಯದಲ್ಲೂ, ಎಲ್ಲ ಕಡೆಗಳಿಗೂ ತೊಟ್ಟು ತಿರುಗಾಡಬಹುದಾಗಿದೆ.

ಆಯ್ಕೆಗಳು ಹೆಚ್ಚು
ಸಾಮಾನ್ಯವಾಗಿ ಇದರಲ್ಲಿ ತಿಳಿ ಬಣ್ಣದ ಬಟ್ಟೆಗಳು ಮಾತ್ರ ಲಭ್ಯದ್ದವು. ಆದರೆ ಈಗ ಎಲ್ಲ ರೀತಿಯ ಬಣ್ಣಗಳಲ್ಲೂ ದೊರೆಯುತ್ತವೆ. ಇದರಲ್ಲಿ ಉದ್ದ ತೋಳಿನ ಕುರ್ತಿ, ಬೆಲ್‌ ಬಾಟಂ ತೋಳು, ಮುಕ್ಕಾಲು ತೋಳು, ಪುಶ್‌ ಅಪ್‌ ತೋಳು, ಗುಂಡಿಗಳು ಬರುವ ತೋಳು ಹೀಗೆ ವಿವಿಧ ಬಗೆಯ ಆಯ್ಕೆಗಳಿವೆ.

ಇತ್ತೀಚೆಗೆ ಹೊಸದಾದ ರೇಖಾ ಚಿತ್ರಗಳು, ಹಾವಿನ ಆಕೃತಿ, ಗಣಿತದ ಕೆಲವು ಆಕೃತಿಗಳು ಮೂಡಿ ಬರುತ್ತಿದ್ದು ಆಶ್ಚರ್ಯವೆಂದರೆ ಬುದ್ಧನ ಚಿತ್ರ, ನಾಣ್ಯಗಳ ಚಿತ್ರ, ಬೇರೆ ಬೇರೆ ಭಾಷೆಯ ಲಿಪಿಗಳ ಅಕ್ಷರ, ದಿನ ಪತ್ರಿಕೆಗಳಂತೆ ಟಾಪ್‌ಗ್ಳು ಲಭ್ಯವಿವೆ.

Advertisement

ಕೆಲವು ಅಂಗಡಿಯವರು ಖಾದಿಯ ರೀತಿಯ ಬಟ್ಟೆಗಳನ್ನು ತೋರಿಸಿ ಮೋಸ ಮಾಡುವ ದಂಧೆ ಹೆಚ್ಚಾಗಿರುತ್ತವೆ. ಖಾದಿ ಭಂಡಾರವಿರುವ ಕಡೆ ಇವುಗಳು ಚೆನ್ನಾಗಿ ದೊರೆಯುತ್ತವೆ. ನಮ್ಮ ಊಹೆಗೂ ಮೀರಿದ ವಿನ್ಯಾಸಗಳು ಮಾರುಕಟ್ಟೆ, ಆನ್‌ಲೈನ್‌ಗಳಲ್ಲಿಯೂ ಲಭ್ಯವಾಗುತ್ತಿದೆ ಅಥವಾ ನಿಮಗೆ ಬೇಕಾಗುವ ಡಿಸೈನ್‌ಗಳನ್ನು ಆನ್‌ಲೈನ್‌ ವ್ಯಾಪಾರಿಗಳಲ್ಲಿ ತಿಳಿಸಿದಲ್ಲಿ ನಿಮಗೆ ಬೇಕಾದ ರೀತಿಯ ಡಿಸೈನ್‌ಗಳನ್ನು ಮಾಡಿಕೊಡುತ್ತಾರೆ.

ತಾರೆಯರಿಗೂ ಇಷ್ಟ
ತಾರೆಯರಿಗೂ ಖಾದಿ ಧಿರಿಸುಗಳು ಬಲು ಇಷ್ಟವಾಗಿದ್ದು ಪಾರ್ಟಿ, ಶೂಟಿಂಗ್‌ಗಳಲ್ಲಿ ಈ ಬಟ್ಟೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿದ್ದಾರೆ. ಇದು ಬೇರೆಯವರಿಗೂ ತುಂಬಾ ಇಷ್ಟವಾಗಿದ್ದು ತಾರೆಯರಿಂದ ಅನುಸರಿಸುತ್ತಿದ್ದಾರೆ.

ಬೆಲೆಯ ಬಗ್ಗೆ ಗಮನವಿರಲಿ
ಕೆಲವೆಡೆ ಖಾದಿ ಎಂದು ಹೆಚ್ಚಿನ ಬೆಲೆ ನಿಗದಿ ಮಾಡಿ ಮೋಸ ಮಾಡುತ್ತಾರೆ. ಬಣ್ಣ ಹೊಗುವುದು, ಸುಂಭು ಏಳುವುದು, ತುಂಬಾ ಸಲ ತೊಳೆದ ಅನಂತರ ಹಳೆ ಬಟ್ಟೆ ಕಂಡ ಹಾಗೇ ಕಾಣಿಸುವ ಸಮಸ್ಯೆ ಇರುತ್ತವೆ ಇದನ್ನು ತಪ್ಪಿಸಲು ಆದಷ್ಟು ಗೊತ್ತಿರುವವರ ಅಥವಾ ಶುಭ್ರ ಖಾದಿಯನ್ನು ಆಯ್ಕೆ ಮಾಡಿ ಕೊಳ್ಳಿ.

-   ಪ್ರೀತಿ ಭಟ್‌ ಗುಣವಂತೆ

Advertisement

Udayavani is now on Telegram. Click here to join our channel and stay updated with the latest news.

Next