Advertisement

ವಿವಿಧ ಕಾಮಗಾರಿಗಳಿಗೆ ಸಚಿವ ಖಾದರ್‌ ಶಿಲಾನ್ಯಾಸ

10:50 AM Jan 07, 2018 | Team Udayavani |

ಉಳ್ಳಾಲ: ಕಳೆದ ಐದು ವರ್ಷದ ಅವಧಿಯಲ್ಲಿ ರಸ್ತೆಯೊಂದಿಗೆ ಮೂಲ ಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದ್ದು, ಮುಂದಿನ ಅವಧಿಯಲ್ಲಿ ಉಳ್ಳಾಲ ಕ್ಷೇತ್ರಕ್ಕೆ 24 ಗಂಟೆಗಳ ಕಾಲ ನಿರಂತರ ನೀರಿಗೆ 170 ಕೋಟಿ ರೂ. ವೆಚ್ಚದ ಯೋಜನೆ ರೂಪಿಸಲಾಗಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್‌ ತಿಳಿಸಿದರು. ಅವರು ಉಳ್ಳಾಲ ಮಾಸ್ತಿಕಟ್ಟೆಯಲ್ಲಿ ಮುಖ್ಯ ರಸ್ತೆ ಸುಂದರಗೊಳಿಸುವುದು, ಫುಟ್‌ಪಾತ್‌ ನಿರ್ಮಾಣ ಸಹಿತ 4.5 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು. 

Advertisement

ರಸ್ತೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆಯೊಂದಿಗೆ ಕೋಟ್ಯಂತರ ರೂ. ಆನುದಾನದಲ್ಲಿ ಕಾಮಗಾರಿಗಳು ನಡೆಯುತ್ತಿವೆ. ಕುಡಿಯುವ ನೀರು ಒದಗಿಸುವ ನಿಟ್ಟಿನಲ್ಲಿ ಹರೇಕಳ ಪಾವೂರಿನಿಂದ ಅಡ್ಯಾರ್‌ವರೆಗೆ ನೇತ್ರಾವತಿ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾನದೊಂದಿಗೆ ನೀರಿನ ಡ್ಯಾಂ ರಚಿಸುವ ಯೋಜನೆ 170 ಕೊಟಿ ರೂ. ವೆಚ್ಚದಲ್ಲಿ ನೀಲನಕ್ಷೆ ಸಿದ್ಧಗೊಂಡಿದ್ದು, ಸರಕಾರದ ಹಣಕಾಸು ವಿಭಾಗಕ್ಕೆ ಕಳುಹಿಸಲಾಗಿದೆ ಎಂದು ತಿಳಿಸಿದರು.

ಒಳರಸ್ತೆಗಳ ಅಭಿವೃದ್ಧಿಗೆ ಬೇಡಿಕೆ
ಅಬ್ಬಕ್ಕ ಸರ್ಕಲ್‌ನಿಂದ ಕೋಟೆಪುರ ರಸ್ತೆ ಅಭಿವೃದ್ಧಿ ಪ್ಯಾರಿಸ್‌ ಜಂಕ್ಷನ್‌ನಿಂದ ತೊಕ್ಕೊಟ್ಟುವರೆಗಿನ ರಸ್ತೆ ಅಭಿವೃದ್ಧಿಗೆ ಟೆಂಡರ್‌ ಮುಗಿದಿದ್ದು, ಶೀಘ್ರವೇ ಕಾಮಗಾರಿ ನಡೆಯಲಿದೆ. ಈಗಾಗಲೇ ಕೋಟ್ಯಂತ ರೂ. ಅನುದಾನದಲ್ಲಿ ಕಾಮಗಾರಿಗಳು ನಡೆಯುತ್ತಿದ್ದು, ಒಳ ರಸ್ತೆಗಳ ಅಭಿವೃದ್ಧಿಗೆ ಇನ್ನೂ ಬೇಡಿಕೆಯಿದೆ. ಆದ್ಯತೆಯ ಮೇರೆಗೆ ಪಟ್ಟಿ ಮಾಡಿ ರಸ್ತೆ ಅಭಿವೃದ್ಧಿ ಮಾಡಲಾಗುವುದು ಎಂದರು.

ಕಾಂಗ್ರೆಸ್‌ ರಾಜ್ಯ ಸಮಿತಿ ಕಾರ್ಯದರ್ಶಿ ಸದಾಶಿವ ಉಳ್ಳಾಲ್‌, ಉಳ್ಳಾಲ ನಗರಸಭಾ ಅಧ್ಯಕ್ಷ ಹುಸೈನ್‌ ಕುಂಞಿಮೋನು, ಸ್ಥಾಯೀ ಸಮಿತಿ ಅಧ್ಯಕ್ಷ ಉಸ್ಮಾನ್‌ ಕಲ್ಲಾಪು, ಸದಸ್ಯರಾದ ಮುಸ್ತಾಫ ಅಬ್ದುಲ್ಲಾ, ಇಸ್ಮಾಯಿಲ್‌, ಬಾಝಿಲ್‌ ಡಿ’ಸೋಜಾ, ಮಹಮ್ಮದ್‌ ಮುಕ್ಕಚ್ಚೇರಿ, ರಝೀಯಾ ಇಬ್ರಾಹಿಂ, ಸುಕುಮಾರ್‌ ಉಳ್ಳಾಲಬೈಲ್‌, ರವಿ ಗಾಂಧಿನಗರ, ರಿಚ್ಚಾರ್ಡ್‌, ಹಮ್ಮಬ್ಬ, ಕಿಶೋರ್‌ ಉಳ್ಳಾಲಬೈಲ್‌, ಉಳ್ಳಾಲ ನಗರಸಭಾ ಕಮಿಷನರ್‌ ವಾಣಿ ಆಳ್ವ, ಉಳ್ಳಾಲ ಬ್ಲಾಕ್‌ ಕಾಂಗ್ರೆಸ್‌ ಉಪಾಧ್ಯಕ್ಷ ಸುರೇಶ ಭಟ್ನಗರ, ಕಾಂಗ್ರೆಸ್‌ ಮಹಿಳಾ ಘಟಕದ ಅಧ್ಯಕ್ಷೆ ದೇವಕಿ ಆರ್‌ ಉಳ್ಳಾಲ್‌, ಅಲ್ಪಸಂಖ್ಯಾಕ ಘಟಕದ ಅಧ್ಯಕ್ಷ ಮಹಮ್ಮದ್‌ ಸಲೀಂ, ಫೈರೋಝ ಉಳ್ಳಾಲ್‌, ಅಬ್ದುಲ್‌ ರಹೆಮಾನ್‌ ಆದಂ, ಮುಖಂಡರಾದ ನಝರ್‌ಷಾ, ಆಹಮ್ಮದ್‌ ಬಾವ ಕೊಟ್ಟಾರ ಮತ್ತಿತರರು ಉಪಸ್ಥಿತರಿದ್ದರು.

ಅಭಿವೃದ್ಧಿಗೆ ಸಹಕರಿಸಿ
ಮಾದರಿ ಉಳ್ಳಾಲ ನಿರ್ಮಾಣದಲ್ಲಿ ಎಲ್ಲರ ಸಹಕಾರ ಅಗತ್ಯ. ಈಗಾಗಲೇ ಮುಖ್ಯ ರಸ್ತೆಯನ್ನು ದ್ವಿಪಥ ರಸ್ತೆಯಾಗಿ ಅಭಿವೃದ್ಧಿ ಪಡಿಸಿದ್ದು, ಈ ರಸ್ತೆಗೆ ಹೆಚ್ಚುವರಿಯಾಗಿ ಕೋಟಿ ಹಣದಿಂದ ರಾಜ ರಸ್ತೆಯಾಗಿ ನಿರ್ಮಾಣ ಮಾಡುವ ಯೋಜನೆ ರೂಪಿಸಲಾಗಿದೆ. ಈ ಕಾಮಗಾರಿ ನಡೆಯುವ ಸಂದರ್ಭದಲ್ಲಿ ಸ್ಥಳೀಯರ ಸಹಕಾರ ಅಗತ್ಯ.
– ಯು.ಟಿ. ಖಾದರ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next