Advertisement

ನಿರುದ್ಯೋಗಿಗಳ ಶೈಕ್ಷಣಿಕ ಸಾಲ ಮನ್ನಾ: ಕೇಂದ್ರಕ್ಕೆ  ಸಚಿವ ಖಾದರ್‌

01:14 PM Jul 15, 2018 | |

ಉಡುಪಿ; ಕೇಂದ್ರ ಸರಕಾರಕ್ಕೆ ಯುವಕರ ಮೇಲೆ ವಿಶ್ವಾಸ ವಿದ್ದದ್ದೇ ಹೌದಾದಲ್ಲಿ ಉದ್ಯೋಗ ಗಳಿಸದೆ ಸಂಕಷ್ಟದಲ್ಲಿರುವವರ ಶೈಕ್ಷಣಿಕ ಸಾಲವನ್ನು ಮನ್ನಾ ಮಾಡಲಿ ಎಂದು ರಾಜ್ಯದ ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್‌ ಆಗ್ರಹಿಸಿದರು. ರಾಜ್ಯ ಸರಕಾರ ಕರಾವಳಿಗೆ ಏನೂ ಕೊಟ್ಟಿಲ್ಲ ಎಂಬ ಬಿಜೆಪಿಯವರ ಆರೋಪದ ಕುರಿತು ಉಡುಪಿ ಪ್ರವಾಸಿ
ಬಂಗಲೆಯಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಪತ್ರಕರ್ತರು ಗಮನ ಸೆಳೆದಾಗ ಪ್ರತಿಕ್ರಿಯೆ ವ್ಯಕ್ತಪಡಿಸಿದ ಸಚಿವರು, ಕೇಂದ್ರ ಸರಕಾರ ಅತ್ತ ಉದ್ಯೋಗ ಸೃಷ್ಟಿ ಯನ್ನೂ ಮಾಡಿಲ್ಲ, ಇತ್ತ ಬ್ಯಾಂಕ್‌ನವರು ಮನೆಗೆ ಬರುತ್ತಿದ್ದಾರೆ. ಆದ್ದರಿಂದ ಇಂತಹವರ ಶೈಕ್ಷಣಿಕ ಸಾಲವನ್ನು ಮನ್ನಾ ಮಾಡಲಿ ಎಂದರು. 

Advertisement

ಕೇಂದ್ರ ಸರಕಾರ ಮೀನುಗಾರರಿಗೆ ಸೀಮೆ ಎಣ್ಣೆ ಏಕೆ ಕೊಡುತ್ತಿಲ್ಲ? ಸೀಮೆ ಎಣ್ಣೆ ಕೊಡುತ್ತಿರುವುದು ರಾಜ್ಯ ಸರಕಾರ. ಗುಜರಾತ್‌ನಲ್ಲಿ ಮೀನುಗಾರರಿಗೆ ಕೊಡುವುದಕ್ಕಿಂತ ಹೆಚ್ಚಿನ ಸೌಲಭ್ಯವನ್ನು ಕರ್ನಾಟಕದಲ್ಲಿ ಕೊಡುತ್ತಿದ್ದೇವೆ. ಹಿಂದೆ ಬಿಜೆಪಿ ಅಧಿಕಾರದಲ್ಲಿದ್ದಾಗ ಶೂನ್ಯ ಬಡ್ಡಿದರದಲ್ಲಿ ಸಾಲ ಕೊಟ್ಟರೆ? ಸೀಮೆ ಎಣ್ಣೆ ಕೊಟ್ಟರೆ ಎಂದು ಪ್ರಶ್ನಿಸಿದರು.

ಪೂರಕ ಬಜೆಟ್‌: ಕುಮಾರಸ್ವಾಮಿ ಮಂಡಿಸಿದ್ದು ಪೂರಕ ಬಜೆಟ್‌. ಹಿಂದಿನ ಮುಖ್ಯ ಮಂತ್ರಿ ಸಿದ್ದರಾಮಯ್ಯ ಘೋಷಿಸಿದ ಬಜೆಟ್‌ 
ಮುಂದುವರಿಯಲಿದೆ. ಇನ್ನು 8 ತಿಂಗಳಲ್ಲಿ ಘೋಷಿತ ಕಾರ್ಯಕ್ರಮಗಳನ್ನು ಹೇಗೆ ಜಾರಿಗೊಳಿಸಬೇಕೆಂದು ಶಾಸಕರು ಯೋಚಿಸಬೇಕು ಎಂದರು

ನಗರಗಳಿಗೆ ಒತ್ತು
ಉಡುಪಿ ನಗರಸಭೆಗೆ ಕುಡಿಯುವ ನೀರಿನ ಯೋಜನೆಗೆ 118 ಕೋ.ರೂ. ಬಿಡುಗಡೆಯಾಗಲಿದೆ. ಕೆಲವೆ ದಿನಗಳಲ್ಲಿ ಟೆಂಡರ್‌ ಕರೆಯ ಲಾಗುವುದು. ಕುಂದಾಪುರದಲ್ಲಿ ಒಳಚರಂಡಿ ಕಾಮಗಾರಿ ನಿಂತಿದ್ದು ಸ್ಥಳೀಯರನ್ನು ವಿಶ್ವಾಸ ಗಳಿಸಿ ಕಾಮಗಾರಿ ಮುಂದುವರಿಯುವಂತೆ ನೋಡಲಾಗುವುದು. ಕಾಪು ಕುಡಿ ಯುವ ನೀರಿನ ಯೋಜನೆ ಕಾಮಗಾರಿ ಟೆಂಡರ್‌ ಪ್ರಕ್ರಿಯೆ ನಡೆಯಲಿದೆ ಎಂದರು. ವಸತಿ ಯೋಜನೆ ಇದುವರೆಗೆ ಗ್ರಾಮಾಂತರ ಪ್ರದೇಶಕ್ಕೆ ಒತ್ತು ಕೊಡಲಾಗುತ್ತಿತ್ತು. ರಾಜೀವ್‌ ಗಾಂಧಿ ವಸತಿ ಯೋಜನೆಯಡಿ ಈಗ ನಗರಕ್ಕೂ ಒತ್ತು ಕೊಡಲಾಗುತ್ತಿದೆ. ಹಿಂದೆ ನೆಲಅಂತಸ್ತು ಮತ್ತು 4 ಮಹಡಿಗೆ ಅವಕಾಶ ವಿದ್ದರೆ ಈಗ ಬೆಲೆ ಬಾಳುವ ಸ್ಥಳದಲ್ಲಿ ನೆಲಅಂತಸ್ತು ಮತ್ತು 14 ಮಹಡಿಗೆ ಅವಕಾಶ ಕೊಡುತ್ತೇವೆ ಎಂದರು. 

500 ಮನೆ- 29 ಕೋ.ರೂ.
ಉಡುಪಿ ನಗರಸಭೆಯ ನಿಟ್ಟೂರು, ಕೊಡಂಕೂರು, ವಿಷ್ಣುಮೂರ್ತಿ ನಗರ, ಪಾಲಿಕಟ್ಟೆಯಲ್ಲಿ ಕೊಳಚೆ ನಿರ್ಮೂಲನ ಮಂಡಳಿಯಿಂದ 29 ಕೋ.ರೂ.ನಲ್ಲಿ 500 ಮನೆ ತಲಾ 5.14 ಲ.ರೂ.ನಲ್ಲಿ ನಿರ್ಮಾಣವಾಗಲಿದೆ ಎಂದರು. 

Advertisement

ಪ್ರತ್ಯೇಕ  ಮಾತೃಪೂರ್ಣ ಯೋಜನೆ
ಮಾತೃಪೂರ್ಣ ಯೋಜನೆ ವೈಫ‌ಲ್ಯ ಕುರಿತು ಗಮನ ಸೆಳೆದಾಗ ಕರಾವಳಿ ಯಲ್ಲಿ ಮಾತ್ರ ಹಿನ್ನಡೆ ಕಂಡಿದೆ. ಕರಾವಳಿ
ಯಲ್ಲಿ ಹೇಗೆ ಮಾರ್ಪಡಿಸಬೇಕೆಂದು ಚಿಂತನೆ ನಡೆಸಲಾಗುತ್ತಿದೆ ಎಂದರು. ವಿಧಾನಸಭಾ ಚುನಾವಣೆ ಫ‌ಲಿತಾಂಶ ಲೋಕಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೆ ಎಂದು ಪ್ರಶ್ನಿಸಿದಾಗ ಜನರ ಮನೋಭಾವನೆ ಬದಲಾಗುತ್ತ ಇರುತ್ತದೆ. ಒಂದು ಬಾರಿ ಮತ ಕೇಳಿದವರು ಆ ಕ್ಷೇತ್ರಕ್ಕೆ ಮುಖ ಹಾಕದಿದ್ದರೆ ಜನರ ಅಭಿಪ್ರಾಯ ಬದಲಾಗುತ್ತದೆ ಎಂದರು. ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಜನಾರ್ದನ ತೋನ್ಸೆ, ಎಐಸಿಸಿ ಸದಸ್ಯ ಅಮೃತ್‌ ಶೆಣೈ, ಪ್ರಖ್ಯಾತ ಶೆಟ್ಟಿ, ಕೀರ್ತಿ ಶೆಟ್ಟಿ, ಯು.ಬಿ. ಸಲೀಂ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next