Advertisement

Operation Blue Star ವರ್ಷಾಚರಣೆ: ಖಾಲಿಸ್ಥಾನ್‌ ಜಿಂದಾಬಾದ್‌ ಘೋಷಣೆ

11:57 AM Jun 06, 2017 | udayavani editorial |

ಅಮೃತಸರ : ಆಪರೇಶನ್‌ ಬ್ಲೂ ಸ್ಟಾರ್‌ ನ 33ನೇ ಸ್ಮರಣ ವರ್ಷಾಚರಣೆ ಪ್ರಯುಕ್ತ ಇಂದು ಮಂಗಳವಾರ ಇಲ್ಲಿನ ಸ್ವರ್ಣ ಮಂದಿರದಲ್ಲಿ ಜಮಾಯಿಸಿದ ಭಾರೀ ಸಂಖ್ಯೆಯ ಸಿಕ್ಖರು “ಖಾಲಿಸ್ಥಾನ್‌ ಜಿಂದಾಬಾದ್‌, ಖಾಲಿಸ್ಥಾನ್‌ ಜಿಂದಾಬಾದ್‌’ ಎಂಬ ಘೋಷಣೆಗಳನ್ನು ಕೂಗಿದರು. 

Advertisement

ಸಿಕ್ಖ ಧರ್ಮದ ಐದು ಅತ್ಯಂತ ಪ್ರಮುಖ ಪವಿತ್ರ ತಾಣಗಳಲ್ಲಿ ಒಂದಾಗಿರುವ ಸ್ವರ್ಣ ಮಂದಿರದಲ್ಲಿಂದು ಸೇರಿದ ನೂರಾರು ಸಿಕ್ಖರು “ಖಾಲಿಸ್ಥಾನ್‌ ಜಿಂದಾಬಾದ್‌ ‘ ಎಂಬ ಘೋಷಣೆ ಕೂಗುವುದನ್ನು ಕಾಣಿಸುವ ವಿಡಿಯೋ ಚಿತ್ರಿಕೆಯನ್ನು ಎಎನ್‌ಐ ಸುದ್ದಿ ಸಂಸ್ಥೆ ಇಂಟರ್‌ನೆಟ್‌ನಲ್ಲಿ ಹಾಕಿದೆ. 

“ಖಾಲಿಸ್ಥಾನ’ ಎಂಬ ಪ್ರತ್ಯೇಕ ಸಿಕ್ಖ ರಾಷ್ಟ ವನ್ನು ಸ್ಥಾಪಿಸುವ, ಸಿಕ್ಖ ಉಗ್ರ, ಪ್ರತ್ಯೇಕತಾವಾದಿ ನಾಯಕ, ಸಂತ ಜರ್ನೈಲ್‌ ಸಿಂಗ್‌ ಭಿಂದ್ರನ್‌ವಾಲೆ 33 ವರ್ಷಗಳ ಹಿಂದೆ “ಸ್ವರ್ಣ ಮಂದಿರ’ವನ್ನೇ ತನ್ನ ಕಾರಸ್ಥಾನವನ್ನಾಗಿ ಮಾಡಿಕೊಂಡು ಭಾರತ ಸರಕಾರದ ವಿರುದ್ಧ  ನಡೆಸುತ್ತಿದ್ದ ಹಿಂಸಾತ್ಮಕ ಸಶಸ್ತ್ರ ಆಂದೋಲನ ಪರಾಕಾಷ್ಠೆಗೆ ಏರಿದ್ದ ಸಂದರ್ಭದಲ್ಲಿ ಅಂದಿನ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರು ಸ್ವರ್ಣ ಮಂದಿರಕ್ಕೆ ಸೈನಿಕರನ್ನು ನುಗ್ಗಿಸಿ ಸಿಕ್ಖ ಉಗ್ರರನ್ನು ಮುಗಿಸಿ ಬಿಡುವ “ಆಪರೇಶನ್‌ ಬ್ಲೂಸ್ಟಾರ್‌’ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಡೆಸಿದ್ದರು. 

ಅಲ್ಲಿಯ ಬಳಿಕ ವರ್ಷಂಪ್ರತಿ ಈ ದಿನದಂದು ಸಿಕ್ಖರು “ಆಪರೇಶನ್‌ ಬ್ಲೂ ಸ್ಟಾರ್‌’ ಸ್ಮರಣ ವರ್ಷಾಚರಣೆಯನ್ನು ನಡೆಸಿಕೊಂಡು ಬಂದಿದ್ದಾರೆ. 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next