Advertisement
ಕಾಂಗ್ರೆಸ್ ಪಕ್ಷದ 136ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದ ಅವರು, “ಯಾರೋ ಬುದ್ದಿ ಇಲ್ಲದವರು ಹೇಳುತ್ತಾರೆ ಮತ್ತೇ ಸಿದ್ದರಾಮಯ್ಯ ಸಿಎಂ ಆಗ್ತಾರೆ, ಇಲ್ಲ ಡಿ.ಕೆ. ಶಿವಕುಮಾರ್ ಸಿಎಂ ಆಗ್ತಾರೆ’ ಎಂದು. ಸಿದ್ದರಾಮಯ್ಯನವರೇ ನಿವಾದರೂ ಸಿಎಂ ಆಗಿ, ಪರಮೇಶ್ವರ್ ಆದ್ರೂ ಆಗಲಿ, ಇಲ್ಲ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆದ್ರೂ ಆಗಲಿ. ಈ ವಿಚಾರದಲ್ಲಿ ಗೊಂದಲ ಬೇಡ. ಇದರಿಂದ ಪಕ್ಷ ಹಾಳಾಗುತ್ತದೆ ಎಂದರು.
Related Articles
Advertisement
ಕಾಂಗ್ರೆಸ್‌ನಲ್ಲೇ ಕೊನೆ ಉಸಿರು: ನಾನು ಕೆಪಿಸಿಸಿ ಅಧ್ಯಕ್ಷನಾಗಬೇಕೆಂದು ಬಯಸಿದ್ದೆ. ಮೇಡಂ (ಸೋನಿಯಾಗಾಂಧಿ) ಸಹ ಹೇಳಿದ್ದರು. ಆದರೆ, ಆವತ್ತು ಯಾರು ಅಡ್ಡಿಪಡಿಸಿದರು ಎಂದು ಈಗ ಉಲ್ಲೇಖ ಮಾಡಲ್ಲ, ಅದರ ಬಗ್ಗೆ ಪ್ರಚಾರವೂ ಮಾಡುವುದಿಲ್ಲ. ಪಕ್ಷ ಬಿಡುವುದಿಲ್ಲ. ಕಡೆವರೆಗೆ ಪಕ್ಷದಲ್ಲೇ ಇರುತ್ತೇನೆ. ನನ್ನ ಕೊನೆ ಉಸಿರು ಬಿಡುವುದು ಕಾಂಗ್ರೆಸ್ ಪಕ್ಷದಲ್ಲೇ. ಯಾವ ಅಧಿಕಾರಕ್ಕೂ ನಾನು ಆಸೆ ಪಡುವುದಿಲ್ಲ ಎಂದು ಇದೇ ವೇಳೆ ಮುನಿಯಪ್ಪ ಹೇಳಿದರು. ಬಿಜೆಪಿ ವಿರುದ್ಧ ಸಿದ್ಧು ಒಬ್ಬರೇ ಹೋರಾಟ
ಕಾರ್ಯಕ್ರಮದಲ್ಲಿ ಮಾತನಾಡಿದ ಕೆ.ಎಚ್. ಮುನಿಯಪ್ಪ, ರಾಜ್ಯದಲ್ಲಿ ಬಿಜೆಪಿ ವಿರುದ್ಧ ಸಿದ್ದರಾಮಯ್ಯನವರು ಒಬ್ಬರೇ ಹೋರಾಟ ಮಾಡುತ್ತಿದ್ದಾರೆ. ಇದಕ್ಕಾಗಿ ಅವರು ಟೀಕೆಗೂ ಒಳಗಾಗಿದ್ದಾರೆ. ಅದೇ ರೀತಿ ಮೋದಿ ವಿರುದ್ಧ ರಾಹುಲ್ ಗಾಂಧಿ ಮಾತ್ರ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯರು, ಶಾಸಕಾಂಗ ಪಕ್ಷದ ನಾಯಕರು, ಪ್ರದೇಶ ಕಾಂಗ್ರೆಸ್ ಅಧ್ಯಕ್ಷರು ಮಾತನಾಡಬೇಕು. ಪ್ರಧಾನಿ ಭಾಷಣ ಮುಗಿದ ತಕ್ಷಣ ಪತ್ರಿಕಾಗೋಷ್ಠಿಗಳನ್ನು ನಡೆಸಿ ಬಿಜೆಪಿ ವಿರುದ್ಧ ಅಟ್ಯಾಕ್ ಮಾಡಬೇಕು, ಅವರ ಅನ್ಯಾಯ ಅಚಾತುರ್ಯಗಳನ್ನು ಜನರಿಗೆ ತಿಳಿಸಬೇಕು. ಆದರೆ, ಕಾಂಗ್ರೆಸ್‌ನಲ್ಲಿ ಅದು ಆಗುತ್ತಿಲ್ಲ ಎಂದು ಬೇಸರದಿಂದ ನುಡಿದರು.