Advertisement
ಬಳ್ಳಾರಿ ಜಿಲ್ಲೆಯಿಂದ ವಿಭಜನೆಗೊಂಡು ಹೊಸ ದಾಗಿ ರಚನೆಯಾಗಿರುವ ವಿಜಯನಗರ ಜಿಲ್ಲೆಗೆ ಯಾವುದೇ ರೀತಿಯ ಆರ್ಥಿಕ ಹೊರೆಯಾಗದಂತೆ ಪೊಲೀಸ್ ಘಟಕವನ್ನು ಸೃಜನೆಮಾಡಲು ರಾಜ್ಯ ಪೊಲೀಸ್ ಮಹಾನಿರ್ದೇಶಕರ ಪ್ರಸ್ತಾವನೆಯಂತೆ ರಾಜ್ಯ ಸರ್ಕಾರವು ಆ.19ರಂದು ಹೊರಡಿಸಿದ ಆದೇಶ ದಂತೆ ಕೆಜಿಎಫ್ ಪೊಲೀಸ್ ವಿಶೇಷ ಜಿಲ್ಲೆಯ ಜಿಲ್ಲಾ ಮಟ್ಟದ ಸ್ಥಾನಮಾನವನ್ನು ಸಂಪೂರ್ಣ ಸ್ಥಳಾಂತರಿಸುವ ಪ್ರಯತ್ನಗಳನ್ನು ನಡೆಸಲಾಗುತ್ತಿದೆ.
Related Articles
Advertisement
ಸಿಬ್ಬಂದಿಗೆ ಸ್ಥಳಾವಕಾಶ: ಕೆಜಿಎಫ್ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಕೆಎಸ್‌ಐಎಸ್‌ಎಫ್ ಘಟಕ ಪ್ರಾರಂಭಿಸಿ ಅದರಲ್ಲಿ 71 ಮಂದಿಗೆ, ಡಿಎಆರ್‌ನಲ್ಲಿ ಪೊಲೀಸ್ ತರಬೇತಿ ಪ್ರಾರಂಭಿಸಿ ಅದರಲ್ಲಿ 40 ಮಂದಿಗೆ, ವಿಜಯ ನಗರ ಜಿಲ್ಲೆಗೆ ತೆರಳಲು ಆಸಕ್ತಿವುಳ್ಳ 67 ಮಂದಿ ಮತ್ತು ಉಳಿದ 70 ಮಂದಿಗೆ ಕೋಲಾರ ಘಟಕದ ಡಿಎಆರ್ ನಲ್ಲಿ ಹಂಚಿಕೆ ಮಾಡಿ, ಒಟ್ಟಾರೆ ಕೆಜಿಎಫ್ ಡಿಎಆರ್ ಮಂಜೂರಾತಿ ಬಲವನ್ನು ವಿಜಯನಗರ ಜಿಲ್ಲೆಗೆ ಸ್ಥಳಾಂತರ ಮಾಡಲು ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ಕಚೇರಿಯಲ್ಲಿ ಎಲ್ಲಾ ಪ್ರಯತ್ನಗಳು ನಡೆಯುತ್ತಿದೆ.
ಸಿಇಎನ್ ಕ್ರೈಂಪೊಲೀಸ್ ಠಾಣೆ ಸ್ಥಳಾಂತರ?: ಜಿಲ್ಲಾ ಪೊಲೀಸ್ ಕಚೇರಿಯ ಲಿಪಿಕ ಮತ್ತು ಕಾರ್ಯಕಾರಿ ಸಿಬ್ಬಂದಿ 40 ಮಂದಿ ಸೇರಿ, ಕೆಜಿಎಫ್ನ ಡಿಎಆರ್, ನಿಸ್ತಂತು ಘಟಕ, ಇಆರ್‌ಎಸ್‌ಎಸ್, ಡಿಎಸ್‌ಬಿ, ಡಿಸಿಐಬಿ, ಡಿಸಿಆರ್‌ಬಿ, ಡಿಎಸ್‌ಎ ಘಟಕಗಳ ಸಹಿತ ಸಿಇಎನ್ ಕ್ರೈಂಪೊಲೀಸ್ ಠಾಣೆಯನ್ನು ವಿಜಯನಗರ ಜಿಲ್ಲೆಗೆ ಸ್ಥಳಾಂತರಿಸಲು ಸಿದ್ಧತೆಗಳು ಮಾಡಲಾಗುತ್ತಿದೆ.
ಡಿ.31ರೊಳಗಾಗಿ ಎಲ್ಲಾ ಪ್ರಕ್ರಿಯೆಗಳು ಪೂರ್ಣ ಗೊಳ್ಳಲಿವೆ ಎಂದು ಹೇಳಲಾಗುತ್ತಿದೆ. ಐತಿಹಾಸಿಕ ಕೆಜಿಎಫ್ ಪೊಲೀಸ್ ಜಿಲ್ಲೆಯ ಸ್ಥಾನ ಮಾನವನ್ನು ಪ್ರಸ್ತುತ ವಿಜಯನಗರ ಜಿಲ್ಲೆಗೆ ಆರ್ಥಿಕ ಹೊರೆಯ ಕಾರಣದಿಂದಾಗಿ ರಾಜ್ಯ ಸರ್ಕಾರವು ಸ್ಥಳಾಂತರಿಸಲು ಮುಂದಾಗಿದ್ದು, ಮುಂದಿನ ದಿನ ಗಳಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ, ಅಪರಾಧಗಳ ಸಂಖ್ಯೆ ಹೆಚ್ಚಳ, ರೌಡಿಗಳ ಅಟ್ಟಹಾಸ ಹೆಚ್ಚಾಗು ವುದರಲ್ಲಿ ಸಂಶಯವಿಲ್ಲ.
– ಬಿ.ಆರ್.ಗೋಪಿನಾಥ್