Advertisement
ಸಾಮಾನ್ಯವಾಗಿ ಒಂದು ಜಿಲ್ಲೆ ಅಥವಾ ತಾಲೂಕು ಕೇಂದ್ರ ಸ್ಥಾನಕ್ಕೆ ಒಂದು ಇಲ್ಲವೇ ಎರಡು ಪಿನ್‌ಕೋಡ್ ಸಂಖ್ಯೆಗಳು ಇರುತ್ತವೆ. ಆದರೆ, ಕೆಜಿಎಫ್ ಯಾವುದೇ ತಾಲೂಕು ಕೇಂದ್ರ ಸ್ಥಾನ ಅಥವಾ ಜಿಲ್ಲಾ ಕೇಂದ್ರಸ್ಥಾನದ ಮಾನ್ಯತೆ ಪಡೆಯುವ ಮುನ್ನವೇ ದಶಕಗಳ ಹಿಂದೆಯೇ 9 ಭಾಗಗಳಿಗೆ ಪ್ರತ್ಯೇಕವಾಗಿ ಪಿನ್‌ಕೋಡ್‌ಗಳನ್ನು ಹೊಂದಿತ್ತು. ಇಡೀ ದೇಶಕ್ಕೆಲ್ಲಾ ಅನ್ವಯಿಸುವ ಹಾಗೆ 9 ಪಿನ್ ಕೋಡ್ ವಲಯಗಳಿದ್ದರೆ, ಕೆಜಿಎಫ್‌ನಲ್ಲಿ ಮಾತ್ರ 9 ಪಿನ್‌ಕೋಡ್ ಇರುವುದು ವಿಶೇಷವಾಗಿದೆ.
Related Articles
Advertisement
9 ಪಿನ್‌ಕೋಡ್ ವಲಯ ಸಿಕ್ಕಿದ್ದು ಏಕೆ?: ಕೆಜಿಎಫ್ 2018ರಲ್ಲಿ ಅ ಧಿಕೃತವಾಗಿ ತಾಲೂಕು ಮಾನ್ಯತೆ ಪಡೆದುಕೊಂಡಿತು. ಆದರೂ ಚಿನ್ನದ ಗಣಿಗಾರಿಕೆ ನಡೆಯುತ್ತಿದ್ದ ಅವಧಿ ಯಲ್ಲೇ ಕೆಜಿಎಫ್‌ನ್ನು ಭೌಗೋಳಿಕವಾಗಿ 9 ಭಾಗಗಳನ್ನಾಗಿ ವಿಭಜಿಸಿ ಆಯಾ ಪ್ರದೇಶಗಳಿಗೆ ಪ್ರತ್ಯೇಕವಾಗಿ 9 ಪಿನ್‌ಕೋಡ್ ಸಂಖ್ಯೆಗಳನ್ನು ಜಾರಿಗೊಳಿಸಲಾಗಿತ್ತು. ಪತ್ರ ವ್ಯವಹಾರ ಸುಲಭ ವಾಗಿ ನಡೆಸಲು ಪಿನ್‌ಕೋಡ್ ಸಂಖ್ಯೆಗಳ ಪ್ರಮಾಣ ವನ್ನು ಹೆಚ್ಚಿಸಲಾಗಿರುತ್ತದೆ. ಆದರೆ, 5 ವರ್ಷಗಳ ಹಿಂದಿನವರೆಗೆ ಯಾವುದೇ ತಾಲೂಕು ಅಥವಾ ಜಿಲ್ಲಾ ಕೇಂದ್ರಸ್ಥಾನದ ಮಾನ್ಯತೆ ಪಡೆದುಕೊಳ್ಳದೇ ಇದ್ದರೂ, ತಾಲೂಕಾದ್ಯಂತ ಕೇವಲ 232 ಮತಗಟ್ಟೆಗಳನ್ನು ಹೊಂದಿದೆ. ಸುಮಾರು ಎರಡೂವರೇ ಲಕ್ಷ ಜನಸಂಖ್ಯೆ ಯನ್ನು ಹೊಂದಿದ್ದರೂ, ಒಟ್ಟು 9 ಪಿನ್‌ಕೋಡ್ ಸಂಖ್ಯೆ ಒಳಗೊಂಡಿರುವುದು ವಿಶೇಷವೆಂದೇ ಹೇಳಲಾಗಿದೆ.
ಚಿನ್ನದ ಗಣಿಗಾರಿಕೆ ನಡೆಯುವ ಅವಧಿಯಲ್ಲೇ ಬ್ರಿಟಿಷರು ಕೆಜಿಎಫ್ನಲ್ಲಿ ಪಿನ್‌ಕೋಡ್ ವ್ಯವಸ್ಥೆ ಜಾರಿಗೆ ತಂದಿದ್ದು, ಜನರು ಮತ್ತು ಕಂಪನಿಯು ಕಳುಹಿಸುತ್ತಿದ್ದ ಸಂದೇಶಗಳು, ನೋಟಿಸ್ ಮತ್ತು ಕಾಗದ ಪತ್ರಗಳು ನಿರ್ದಿಷ್ಟ ಸಮಯಕ್ಕೆ ನಿಖರ ವಾಗಿ ತಲುಪಲು ಪಿನ್‌ಕೋಡ್ ವ್ಯವಸ್ಥೆಯಿಂದ ಸಾಧ್ಯವಾಗಿದೆ.-ವೆಂಕಟರಾಮಪ್ಪ, ನಾಗರಿಕ, ಕ್ಯಾಸಂಬಳ್ಳಿ
-ನಾಗೇಂದ್ರ ಕೆ.