Advertisement

ಕೆಜಿಎಫ್ ಹವಾ…ಪಾಕ್ ನೆಲದಲ್ಲೂ ಕನ್ನಡ ನಟನ ಸಿನಿಮಾದ ಹೊಸ ಶಕೆ..

10:42 AM Jan 10, 2019 | Sharanya Alva |

ನವದೆಹಲಿ: ದೇಶಾದ್ಯಂತ ಭರ್ಜರಿ ಸದ್ದು ಮಾಡಿದ್ದ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಸಿನಿಮಾ ಇದೀಗ ಪಾಕಿಸ್ತಾನದಲ್ಲಿ ತೆರೆ ಕಂಡ ಕನ್ನಡ ಮೂಲದ ಬಹುಭಾಷಾ ಅವತರಣಿಕೆಯ ಮೊದಲ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

Advertisement

ಈಗಾಗಲೇ ಸ್ಯಾಂಡಲ್ ವುಡ್ ನಲ್ಲಿ ಕೆಜಿಎಫ್ ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಕಲೆಕ್ಷನ್ ಮಾಡುವ ಮೂಲಕ ಈಗಾಗಲೇ ಹಲವು ಇತಿಹಾಸ ನಿರ್ಮಿಸಿದೆ. ಅಷ್ಟೇ ಅಲ್ಲ ಬಿಡುಗಡೆಯಾದ ಐದು ಭಾಷೆಗಳಲ್ಲಿಯೂ ಕೆಜಿಎಫ್ ಹವಾ ಮುಂದುವರಿದಿದೆ.

ಪಾಕಿಸ್ತಾನದಲ್ಲಿ ಡಿಸೆಂಬರ್ 21ರಂದು ಕೆಜಿಎಫ್ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿತ್ತು. ಆದರೆ ಇದೀಗ ಹೊಸ ವರ್ಷದಲ್ಲಿ ಕೆಜಿಎಫ್ ರಿಲೀಸ್ ಭಾಗ್ಯ ಕಂಡಿದೆ. ಪಾಕಿಸ್ತಾನದಲ್ಲಿ ಬಾಲಿವುಡ್ ಸಿನಿಮಾಗಳೆಂದರೆ ಭಾರೀ ಬೇಡಿಕೆ. ಆ ನಿಟ್ಟಿನಲ್ಲಿ ಕನ್ನಡ ನಟರೊಬ್ಬರ ಸಿನಿಮಾ ಪಾಕಿಸ್ತಾನದಲ್ಲಿ ತೆರೆ ಕಾಣುತ್ತಿರುವುದು ಇದೇ ಪ್ರಥಮ ಬಾರಿಯದ್ದಾಗಿದೆ.

1980ರ ದಶಕದಲ್ಲಿ ಅಮಿತಾಬ್, ಧರ್ಮೇಂದ್ರ, ರಿಷಿ ಕಪೂರ್, ದಿಲೀಪ್ ಬಳಿಕ ಶಾರುಖ್ ಖಾನ್, ಸಲ್ಮಾನ್ ಖಾನ್, ಅಮೀರ್  ಸೇರಿದಂತೆ ಹಲವು ನಟರ ಸಿನಿಮಾಕ್ಕೆ ಪಾಕ್ ಸಿನಿ ಪ್ರಿಯರು ಮುಗಿ ಬೀಳುತ್ತಿದ್ದರು. ಆ ನಿಟ್ಟಿನಲ್ಲಿ ಪಾಕ್ ನೆಲದಲ್ಲಿ ಕೆಜಿಎಫ್ ಹವಾ ಎಬ್ಬಿಸುತ್ತಿರುವುದು ಮತ್ತೊಂದು ಮೈಲಿಗಲ್ಲಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next