ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಹೊಸ ಮೈಲಿಗಲ್ಲು ದಾಖಲಿಸಿದ ಕೆಜಿಎಫ್ ಚಿತ್ರದಲ್ಲಿ ವಿಭನ್ನ ಪಾತ್ರವೊಂದರಲ್ಲಿ ಕಾಣಿಸಕೊಂಡು ಗಮನ ಸೆಳೆದಿದ್ದ ನಟ ಲಕ್ಷ್ಮೀ ಪತಿ ಅವರು ಅನಾರೋಗ್ಯದಿಂದ ಕೊನೆಯುಸಿರೆಳೆದಿದ್ದಾರೆ.
ಕೆಜಿಎಫ್ ಭಾರೀ ಯಶಸ್ಸು ಸಾಗಿ ಮುನ್ನುಗ್ಗುತ್ತಿರುವ ವೇಳೆಯಲ್ಲೇ ಪಾತ್ರಧಾರಿಯೊಬ್ಬರ ಅಕಾಲಿಕ ಮರಣದಿಂದ ಚಿತ್ರತಂಡ ತೀವ್ರ ನೋವಿಗೆ ಸಿಲುಕಿದೆ.
ಕೆಜಿಎಫ್ ಚಿತ್ರದ ಛಾಯಾಗ್ರಾಹಕ ಭುವನ್ ಗೌಡ ಅವರು ಲಕ್ಷ್ಮೀ ಪತಿ ಅವರು ನಿಧನ ಹೊಂದಿರುವ ವಿಚಾರವನ್ನು ಸಾಮಾಜಿಕ ತಾಣಗಳಲ್ಲಿ ಬಹಿರಂಗ ಪಡಿಸಿದ್ದಾರೆ.
ಚಿತ್ರದಲ್ಲಿ ನರಾಚಿ ಕಾರ್ಖಾನೆಯಲ್ಲಿ ಕಾರ್ಮಿಕರ ಎದುರು ನೋವನ್ನು ಹೇಳಿಕೊಳ್ಳುವ ಅರೆಹುಚ್ಚನ ಪಾತ್ರದಲ್ಲಿ ಲಕ್ಷ್ಮೀ ಪತಿ ನಟಿಸಿ ಚಿತ್ರಪ್ರೇಮಿಗಳ ಮನಸ್ಸಿನಲ್ಲಿ ಉಳಿದಿದ್ದರು.
ಸುಡುವ ಬೆಂಕಿಯಲ್ಲಿ ಸುರಿವ ಮಳೆಯಂತೆ, ಮೃತ್ಯುವಿನ ಮನೆಯಲ್ಲಿ ಮೃತ್ಯುಂಜಯನಂತೆ, ದೌಲತ್ತಿನೆದುರು ದಂಗೆಯ ರೂಪದಲ್ಲಿ, ದಶಕಂಠನೆದುರು ಧನುಜಾರಿ ರೀತಿಯಲ್ಲಿ, ಉರಿವ ಜಮದಗ್ನಿಯ ಬೆದರಿಸಿ, ಸರ್ವವೂ ತಾನೆಂದು ಪರಮಾತ್ಮನನ್ನು ಪ್ರಶ್ನಿಸಿ, ಸಿಡಿಲಂತೆ ಸಿಡಿದ ಧೀರನೊಬ್ಬನ ಕಥೆ ಎನ್ನುವ ಡೈಲಾಗ್ ಹೇಳಿದ್ದ ಲಕ್ಷ್ಮೀ ಪತಿ ಇನ್ನು ನೆನಪು ಮಾತ್ರ.