Advertisement

ಜುಲೈ 16ರಂದು ವಿಶ್ವದಾದ್ಯಂತ  ತೆರೆಗೆ ಅಪ್ಪಳಿಸಲಿದೆ ಕೆ.ಜಿ.ಎಫ್ -2

06:42 PM Jan 29, 2021 | Team Udayavani |

ಬೆಂಗಳೂರು: ಸ್ಯಾಂಡಲ್ ವುಡ್ ನ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನೀರೀಕ್ಷಿತ ಸಿನಿಮಾ ಕೆಜಿ ಎಫ್ -2 ನ ಬಿಡುಗಡೆ ದಿನಾಂಕ ಫೈನಲ್ ಆಗಿದ್ದು ಮುಂಬರುವ ಜುಲೈ 16ರಂದು ಚಿತ್ರ ಬಿಡುಗಡೆಗೊಳ್ಳಲಿದೆ.

Advertisement

ಈ ಕುರಿತಾಗಿ ಟ್ಟೀಟ್ ಮಾಡಿರುವ ನಿರ್ದೇಶಕ ಪ್ರಶಾಂತ್ ನೀಲ್ ಕೆಜಿ ಎಫ್ -2  ಸಿನಿಮಾವನ್ನು ಜುಲೈ 16ರಂದು ವಿಶ್ವದಾದ್ಯಂತ ಬಿಡುಗಡೆಗೊಳಿಸಲಿದ್ದೇವೆ ಎಂದಿದ್ದಾರೆ.

ಈ ಕುರಿತಾಗಿ ಬೆಳಿಗ್ಗೆಯಷ್ಟೇ ನಿರ್ದೇಶಕ ಪ್ರಶಾಂತ್ ನೀಲ್ ಟ್ವೀಟ್ ಮಾಡಿ ಇಂದು ಸಂಜೆ 6:32 ಕ್ಕೆ ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಿಸುದಾಗಿ ತಿಳಿಸುವ ಮೂಲಕ ಸಿನಿರಸಿಕರಲ್ಲಿ ಭಾರಿ ಕುತೂಹಲವನ್ನು ಮೂಡಿಸಿದ್ದರು. ಇದೀಗ ಆ ಎಲ್ಲಾ ಕುತೂಹಲಗಳಿಗೆ ತೆರೆಬಿದ್ದಂತಾಗಿದೆ.

ಕೆ.ಜಿ.ಎಫ್ -1 ಸಿನಿಮಾದ ಭಾರಿ ಯಶಸ್ಸಿನ ಬಳಿಕ ನಿರ್ಮಾಣಗೊಂಡಿರುವ ಕೆ.ಜಿ.ಎಫ್ -2 ಸಿನಿಮಾ ತನ್ನ ಟೀಸರ್ ಬಿಡುಗಡೆಯ ಮೂಲಕ ಚಿತ್ರರಂಗದಲ್ಲಿಯೇ ಹೊಸ ಇತಿಹಾಸವನ್ನು ಸೃಷ್ಟಿಸಿತ್ತು. ಟೀಸರ್ ಬಿಡುಗಡೆಗೊಂಡ ಕೇವಲ 48 ಗಂಟೆಗಳಲ್ಲಿ ಬರೊಬ್ಬರಿ 116 ಮಿಲಿಯನ್ ವೀಕ್ಷಣೆ ಕಾಣುವ ಮೂಲಕ ಭಾರತೀಯ ಚಿತ್ರರಂಗದ ಎಲ್ಲಾ ಸಿನಿಮಾಗಳ ರೆಕಾರ್ಡ್ ಅನ್ನು ಬ್ರೇಕ್ ಮಾಡಿತ್ತು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next