ಬೆಂಗಳೂರು: ಸ್ಯಾಂಡಲ್ ವುಡ್ ಮಾತ್ರವಲ್ಲದೇ ಭಾರತೀಯ ಚಿತ್ರರಂಗದಲ್ಲೇ ಸಂಚಲನ ಮೂಡಿಸಿದ್ದ ರಾಕಿಂಗ್ ಸ್ಟಾರ್ ಯಶ್ ಅಭಿನಯದ KGF ಚಿತ್ರದ ಮುಂದಿನ ಸರಣಿ KGF-2 ಚಿತ್ರದ ಚಿತ್ರೀಕರಣ ಇದೀಗ ಪುನರಾರಂಭಗೊಂಡಿದೆ.
ಕೋವಿಡ್ 19 ಲಾಕ್ ಡೌನ್ ಕಾರಣದಿಂದ ದೇಶಾದ್ಯಂತ ಎಲ್ಲಾ ಚಟುವಟಿಕೆಗಳ ಸಹಿತ ಚಿತ್ರೀಕರಣ ಚಟುವಟಿಕೆಗಳಿಗೂ ಬ್ರೇಕ್ ಬಿದ್ದಿತ್ತು.
ಇದೀಗ KGF-2 ಚಿತ್ರೀಕರಣ ಮರುಪ್ರಾರಂಭಗೊಂಡಿರುವುದು ನಟ ಪ್ರಕಾಶ್ ರಾಜ್ ಮಾಡಿರುವ ಟ್ವೀಟ್ ನಿಂದ ಕನ್ಫರ್ಮ್ ಆಗಿದೆ.
KGF-2ನಲ್ಲಿ ಪ್ರಕಾಶ್ ರಾಜ್ ಹೇಗೆ ಬಂದ್ರ ಅಂತ ಆಶ್ಚರ್ಯ ಆಗ್ತಾ ಇದ್ಯಾ? ಹೌದು, KGF-2 ಚಿತ್ರದಲ್ಲಿ ಪ್ರಕಾಶ್ ರಾಜ್ ಅವರು ಒಂದು ಪಾತ್ರವನ್ನು ಮಾಡುತ್ತಿದ್ದಾರೆ. ಅದರ ಚಿತ್ರೀಕರಣ ಇದೀಗ ನಡೆಯುತ್ತಿದ್ದು ತಮ್ಮ ಪಾತ್ರದ ಶೂಟಿಂಗ್ ನ ಕ್ಲಿಪ್ ಅನ್ನು ನಟ ಪ್ರಕಾಶ್ ರಾಜ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಮಾತ್ರವಲ್ಲದೇ, ‘ಸ್ಟಾರ್ಟ್, ಕೆಮರಾ, ಆ್ಯಕ್ಷನ್.. ಬ್ಯಾಕ್ ಟು ವರ್ಕ್’ ಎಂದು ಅವರು ಬರೆದುಕೊಂಡಿದ್ದಾರೆ.
Related Articles
ಪ್ರಕಾಶ್ ರಾಜ್ ಹಂಚಿಕೊಂಡಿರುವ ಫೊಟೋದಲ್ಲಿ ಕಾಣಿಸುವ ಪ್ರಕಾರ ರಾಜ್ ಅವರ ಪಾತ್ರ KGFನಲ್ಲಿ ಹಿರಿಯ ನಟ ಅನಂತನಾಗ್ ಮಾಡಿದ ಪಾತ್ರವನ್ನು ಹೋಲುತ್ತಿದ್ದು ಇದು ಚಿತ್ರರಸಿಕರಲ್ಲಿ ಇನ್ನಷ್ಟು ಕುತೂಹಲವನ್ನು ಹುಟ್ಟುಹಾಕಿದೆ ಮಾತ್ರವಲ್ಲದೇ KGF-2 ಚಿತ್ರದಲ್ಲಿ ಅನಂತನಾಗ್ ಇದ್ದಾರೋ ಇಲ್ಲವೋ ಎಂಬ ಅನುಮಾನ ಮೂಡಲೂ ಇದು ಕಾರಣವಾಗಿದೆ..
ಆದರೆ ಚಿತ್ರತಂಡ ಇದುವರೆಗೆ ಈ ಕುರಿತಾಗಿ ಯಾವುದೇ ಮಾಹಿತಿಯನ್ನು ಹೊರಹಾಕಿಲ್ಲ. KGF ಚಿತ್ರದಲ್ಲಿ ನಾಯಕನ ಜರ್ನಿಯನ್ನು ಅನಂತ್ ಅವರ ಪತ್ರಕರ್ತ ಪಾತ್ರವೇ ನಿರೂಪಣೆ ಮಾಡಿತ್ತು ಮತ್ತು ಅಲ್ಲಿ ಅನಂತ್ ಅವರ ಧ್ವನಿಯೇ ಚಿತ್ರದ ಪೈಲೈಟ್ ಮತ್ತು ಪ್ಲಸ್ ಪಾಯಿಂಟ್ ಆಗಿತ್ತು ಎಂಬುದನ್ನು ಮರೆಯುವಂತಿಲ್ಲ.
ಬಾಲಿವುಡ್ ನಟ ಸಂಜಯ್ ದತ್, ನಟಿ ರವಿನಾ ಟಂಡನ್ ಮತ್ತು ಇದೀಗ ಪ್ರಕಾಶ್ ರಾಜ್ ಸೇರಿದಂತೆ ಭಾರತೀಯ ಚಿತ್ರರಂಗದ ಧಿಗ್ಗಜ ನಟ-ನಟಿಯರೆಲ್ಲಾ KGF-2 ಚಿತ್ರದಲ್ಲಿ ಪಾತ್ರಮಾಡುತ್ತಿರುವುದು ಯಶ್ ಅಭಿಮಾನಿಗಳು ಮತ್ತು ಚಿತ್ರರಸಿಕರ ಕುತೂಹಲವನ್ನು ಇನ್ನಷ್ಟು ಹೆಚ್ಚಿಸುವಂತೆ ಮಾಡಿದೆ.