Advertisement
ಖ್ಯಾತ ಲೇಖಕಿ, ಸತ್ಯಕಾಮ ಪ್ರತಿಷ್ಠಾನದ ಅಧ್ಯಕ್ಷೆ ವೀಣಾ ಬನ್ನಂಜೆ ಉದ್ಘಾ ಟಿಸಿ, ಕಲಿಕೆ ಸಂದರ್ಭದಲ್ಲಿ ನಾವು ಶೂನ್ಯರಾಗಬೇಕು. ರಂಗ ಮಂಟಪ ಆಡಿಸಿದಂತೆ ಆಟ ಆಡಬೇಕು. ಪಾತ್ರ ಪ್ರವೇಶಿಸುವ ಸಂದರ್ಭದಲ್ಲಿ ನಮ್ಮ ಇಮೇಜ್ ಅನ್ನು ಕಳಚಿಟ್ಟು ಪರಕಾಯ ಪ್ರವೇಶಿಸಬೇಕು ಎಂದರು.
ಹಿರಿಯ ರಂಗಕರ್ಮಿ ಕೆ.ಜಿ. ಕೃಷ್ಣಮೂರ್ತಿ ಅವರಿಗೆ 2019ನೇ ಸಾಲಿನ ರಂಗಮನೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ರಂಗಮನೆಗೆ ಸಹಕಾರ ನೀಡಿದ ಪದ್ಮಿನಿ ಅವರನ್ನು ಸಮ್ಮಾನಿಸಲಾಯಿತು. ಕೆ.ವಿ.ಜಿ. ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ| ಎನ್.ಎ. ಜ್ಞಾನೇಶ್ ಸಭಾಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಸುಜನಾ ಸುಳ್ಯ ಉಪಸ್ಥಿತರಿದ್ದರು.
ಕೆ.ಆರ್. ಗೋಪಾಲಕೃಷ್ಣ ಆಶಯ ಗೀತೆ ಹಾಡಿದರು. ರಂಗಮನೆ ರೂವಾರಿ ಜೀವನ್‌ರಾಂ ಸುಳ್ಯ ಸ್ವಾಗತಿಸಿದರು. ಕೆ. ಕೃಷ್ಣಮೂರ್ತಿ ವಂದಿಸಿದರು. ಅಚ್ಯುತ ಅಟೂÉರು ನಿರೂಪಿಸಿದರು. ಡಾ| ವಿದ್ಯಾ ಶಾರದೆ, ನಾಗೇಶ್, ಡಾ| ಸುಂದರ ಕೇನಾಜೆ, ರವೀಶ್ ಪಿ. ಸಹಕರಿಸಿದರು. ಸುಜನಾ ಯಕ್ಷಗಾನ ಕೇಂದ್ರದ ವಿದ್ಯಾರ್ಥಿಗಳಿಂದ ಚೆಂಡೆ ವಾದನ, ಚಿಗುರು ತಂಡ ಬಾಪು ಪ್ರೌಢಶಾಲೆ ಬೆಂಗಳೂರು ಅಭಿನಯದ ಜಾನಪದ ನಾಟಕ “ಮಂಟೇಸ್ವಾಮಿ ಕಥಾ ಪ್ರಸಂಗ’ ಹಾಗೂ ಜೀವಸ್ವರ ಬೆಂಗಳೂರು ತಂಡದ ಮಹೇಶ್ ಪ್ರಿಯದರ್ಶನ್ ಮತ್ತು ಕವಿತಾ ಉಡುಪ ಇವರಿಂದ ಜನಪದ ಭಾವರಂಗ ಗಾಯನ ನಡೆಯಿತು.
Related Articles
ಜ.18ರಂದು ಸಂಜೆ 6.45ಕ್ಕೆ ಹೆಗ್ಗೊàಡುನೀನಾಸಮ್‌ನಿಂದ “ಸೇತು ಬಂಧ’ ನಾಟಕ ಪ್ರದರ್ಶನಗೊಳ್ಳಲಿದೆ.
Advertisement