ಮಾಸ್ಕೋ: ಕೋವಿಡ್-19 ಅಬ್ಬರಕ್ಕೆ ತತ್ತರಿಸಿ ಹೋಗಿದ ರಷ್ಯಾದ ಮಹಾ ನಗರಿ ಮಾಸ್ಕೋ ಹಂತ ಹಂತವಾಗಿ ಸಹಜ ಸ್ಥಿತಿಯತ್ತ ಮರಳುತ್ತಿದ್ದು, ಆರ್ಥಿಕ ಚಟುವಟಿಕೆಗಳನ್ನು ಪ್ರಾರಂಭಿಸಿದೆ. ಈ ಹಿನ್ನಲೆಯಲ್ಲಿಯೇ ಹೊಟೇಲ್ ಉದ್ಯಮದ ಪ್ರಾರಂಭಕ್ಕೆ ವಿಭಿನ್ನ ಮಾರ್ಗ ಕಂಡು ಕೊಂಡಿದ್ದು, ಗ್ರಾಹಕರಿಗೆ ಸೇವೆ ಒದಗಿಸಲು ತಂತ್ರಜ್ಞಾನದ ಮೊರೆ ಹೋಗಿದೆ.
ಹೌದು ಫಾಸ್ಟ್ ಫುಡ್ ಪ್ರಿಯರ ನೆಚ್ಚಿನ ತಾಣ ಆಗಿರುವ ಕೆಎಫ್‌ಸಿ ಕೋವಿಡ್-19 ಹಿನ್ನೆಲೆಯಲ್ಲಿ ಸ್ಥಗಿತಗೊಂಡಿತ್ತು. ಆದರೆ ಇದೀಗ ನಿಧಾನವಾಗಿ ಲಾಕ್‌ಡೌನ್ ತೆರವುಗೊಳುತ್ತಿದ್ದು, ರೋಬೋ ಆರ್ಮ್ ಗಳ ತಂತ್ರಜ್ಞಾನದ ಮೂಲಕ ಕೆಎಫ್‌ಸಿ ಆಹಾರ ಸರಬರಾಜು ಮಾಡಲು ಸಿದ್ಧವಾಗಿದೆ.
ಹೌದು ಆಹಾರ ಪೂರೈಕೆಗಾಗಿ ಹೊಸ ರೆಸ್ಟೋರೆಂಟ್‌ನ್ನು ತೆರೆಯಲಾಗಿದ್ದು, ಇಲ್ಲಿ ವ್ಯಕ್ತಿಗಳ ಸಹಾಯವಿಲ್ಲದೆ ರೋಬೋ ಆರ್ಮ್ ಆರ್ಡರ್‌ಗಳನ್ನು ಸ್ವೀಕರಿಸಿ, ಕಲೆಕ್ಷನ್ ಪಾಯಿಂಟ್ ಬಳಿ ಇಡುತ್ತದೆ. ಆಹಾರ ಸಿದ್ಧವಾದ ಬಳಿಕ ಜನರಿಗೆ ತಲುಪಿಸಲ್ಲಿದ್ದು, ಹಣಕಾಸಿನ ವಹಿವಾಟನ್ನು ಕೂಡ ರೋಬೋಟ್‌ಗಳೆ ನೋಡಿಕೊಳ್ಳಲಿವೆ.
ಇನ್ನು ಈ ತಂತ್ರಜ್ಞಾನದ ಬಗ್ಗೆ ಇನ್ನೋವೇಷನ್ ಇನ್‌ಫಾರ್ಮೇಷನ್ ಟೆಕ್ನಾಲಜಿಯ ನಿರ್ದೇಶಕ ಡಿಮಿಟ್ರಿ ಏಗೆವ್ ಅಭಿಪ್ರಾಯ ಹಂಚಿಕೊಂಡಿದ್ದು, ಇದು ಆಧುನಿಕ ಯುಗದ ರೆಸ್ಟೋರೆಂಟ್. ಇದನ್ನು ಜನರ ಹಿತದೃಷ್ಟಿಯಿಂದ ಆರಂಭಿಸಿದ್ದು, ವಿನೂತನ, ತಾಂತ್ರಿಕ ಜ್ಞಾನವನ್ನು ಒಳಗೊಂಡಿದೆ. ಮುಂಬರುವ ದಿನಗಳಲ್ಲಿ ರೆಸ್ಟೋರೆಂಟ್‌ಗಳು ಹೇಗೆ ಕೆಲಸ ನಿರ್ವಹಿಸಲಿದ್ದು, ಹೇಗೆ ಗ್ರಾಹಕರೊಂದಿಗೆ ಈ ರೋಬೋಟ್‌ಗಳು ಸಂಭಾಷಣೆ ಮಾಡುತ್ತದೆ ಎಂಬುದನ್ನು ಪ್ರಾಯೋಗಿಕವಾಗಿ ತಿಳಿಯಲು ಈ ರೋಬೋ ಆರ್ಮ್ ರೆಸ್ಟೋರೆಂಟನ್ನು ತೆರೆದಿದ್ದೇವೆ ಎಂದು ಹೇಳಿದ್ದಾರೆ.