Advertisement
ವಿಶೇಷವೆಂದರೆ ಈ ಮರ್ಯಾದಾ ಹತ್ಯೆ ಪ್ರಕರಣದ ದೋಷಿಗಳಲ್ಲಿ ಕೆವಿನ್ ಪ್ರೇಯಸಿಯ ಸಹೋದರನೂ ಒಬ್ಬನಾಗಿದ್ದಾನೆ. ಆದರೆ ಆಕೆಯ ತಂದೆ ಮಾತ್ರ ಸೂಕ್ತ ಸಾಕ್ಷ್ಯಾಧಾರಗಳ ಕೊರತೆಯಿಂದ ಖುಲಾಸೆಗೊಂಡಿದ್ದಾರೆ. ನ್ಯಾಯಾಲವು ಶಿಕ್ಷೆಯ ಸ್ವರೂಪ ಮತ್ತು ಪ್ರಮಾಣವನ್ನು ಶನಿವಾರದಂದು ಘೋಷಿಸಲಿದೆ.
ಕೆವಿನ್ ಜೋಸೆಫ್ ಎಂಬ 23 ವರ್ಷದ ದಲಿತ ಕ್ರಿಶ್ಚಿಯನ್ ಯುವಕ ನೀನೂ ಚಾಕೋ ಎಂಬ ಯುವತಿಯನ್ನು ಪ್ರೀತಿಸುತ್ತಿದ್ದ. ಯುವತಿಯ ಮನೆಯವರ ತೀವ್ರ ವಿರೋಧದ ನಡುವೆಯೂ ಇವರಿಬ್ಬರು ಮದುವೆಯಾಗಲು ನಿರ್ಧರಿಸಿದ್ದರು. 2018ರ ಮೇ ತಿಂಗಳಲ್ಲಿ ಕೆವಿನ್ ಮತ್ತು ನೀನೂ ವಿವಾಹಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಆದರೆ ಇದಕ್ಕೆ ಯುವತಿಯ ಹೆತ್ತವರು ಪ್ರಬಲ ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ ಬಳಿಕ ಈ ವಿಚಾರ ಪೊಲೀಸರ ಸಮ್ಮುಖದಲ್ಲಿ ಇತ್ಯರ್ಥಗೊಂಡಿತ್ತು. ಹೀಗಿರುತ್ತಾ ಮೇ 26ರ ಮಧ್ಯರಾತ್ರಿ ಕೆವಿನ್ ಮತ್ತು ಆತನ ಗೆಳೆಯನನ್ನು ಹುಡುಗಿಯ ಸಹೋದರ ಮತ್ತು ಆತನ ಗೆಳೆಯರು ಕೊಟ್ಟಾಯಂನಲ್ಲಿರುವ ಕೆವಿನ್ ಮನೆಯಿಂದ ಅಪಹರಿಸಿದ್ದರು. ವಿಷಯ ತಿಳಿದ ಬಳಿಕ ನೀನೂ ಜೋಸೆಫ್ ಸಹಾಯಕ್ಕಾಗಿ ಸ್ಥಳೀಯ ಪೊಲೀಸರ ಮೊರೆ ಹೋಗುತ್ತಾರೆ ಆದರೆ ವಿಐಪಿ ಭದ್ರತೆಯ ನೆಪವೊಡ್ಡಿ ಅಲ್ಲಿನ ಪೊಲೀಸರು ಈ ಪ್ರಕರಣದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸುತ್ತಾರೆ.
Related Articles
Advertisement
ಆದರೆ ದುರದೃಷ್ಟವೆಂದರೆ ಕೆವಿನ್ ಅವರ ಮೃತದೇಹ ಮೇ 28ರ ಬೆಳಿಗ್ಗೆ ಕೊಲ್ಲಂ ಜಿಲ್ಲೆಯ ನದಿಯೊಂದರಲ್ಲಿ ಪತ್ತೆಯಾಗುತ್ತದೆ. ಇದು ಪ್ರಕರಣದ ಗಂಭೀರತೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ. ಕೂಡಲೇ ಎಚ್ಚೆತ್ತುಕೊಂಡ ಸರಕಾರ ಈ ಪ್ರಕರಣದಲ್ಲಿ ನಿರ್ಲಕ್ಷ್ಯ ತೋರಿದ ಸಬ್ ಇನ್ ಸ್ಪೆಕ್ಟರ್ ಮತ್ತು ಹೆಚ್ಚುವರಿ ಸಬ್ ಇನ್ ಸ್ಪೆಕ್ಟರ್ ಅವರನ್ನು ಅಮಾನತು ಮಾಡಲಾಗುತ್ತದೆ.
ಈ ಪ್ರಕರಣದ ತನಿಖೆಗಾಗಿ ವಿಶೇಷ ನ್ಯಾಯಾಲಯವೊಂದನ್ನು ಸ್ಥಾಪಿಸಲಾಗುತ್ತದೆ. ನೀನೂ ಜೋಸೆಫ್ ಕೆವಿನ್ ಕುಟುಂಬದ ಜೊತೆಯೇ ಉಳಿಯಲು ನಿರ್ಧರಿಸುತ್ತಾಳೆ. ಪ್ರಕರಣದಲ್ಲಿ ನೀನೂ ಮತ್ತು ಅನೀಶ್ ಪ್ರಮುಖ ಸಾಕ್ಷಿಗಳಾಗಿ ಬದಲಾದ ಕಾರಣ ಆರೋಪಿಗಳ ಆರೋಪ ಸಾಬೀತುಗೊಳ್ಳಲು ಸಹಕಾರಿಯಾಯ್ತು.