Advertisement

ಹಲವರ ಪ್ರಾಣ ರಕ್ಷಿಸಿ ಹೀರೋ ಆದ ಕೇತನ್‌

12:58 AM May 26, 2019 | Team Udayavani |

ಸೂರತ್‌: ಗುಜರಾತ್‌ನ ಸೂರತ್‌ನಲ್ಲಿ ತಕ್ಷಶಿಲಾ ಕೋಚಿಂಗ್‌ ಸೆಂಟರ್‌ನಲ್ಲಿ ಶುಕ್ರವಾರ ಸಂಭವಿಸಿದ ಅಗ್ನಿ ದುರಂತ ದಲ್ಲಿ ಸ್ಥಳೀಯರು ವಿಶೇಷವಾಗಿ ಸಹಾಯ ಮಾಡಿದ್ದು ಗಮನ ಸೆಳೆದಿದೆ. ಅದರಲ್ಲೂ ಕೇತನ್‌ ಚೊದ್ವಾಡಿಯಾ ಎಂಬವರಂತೂ ಜನರನ್ನು ಉಳಿಸಲು ತನ್ನ ಜೀವವನ್ನೇ ಪಣಕ್ಕಿಟ್ಟಿದ್ದರು.

Advertisement

ದುರಂತ ಸಂಭವಿಸಿದಾಗ ಅದೇ ದಾರಿಯಲ್ಲಿ ಸಾಗುತ್ತಿದ್ದ ಕೇತನ್‌, ತತ್‌ಕ್ಷಣವೇ ಕಟ್ಟಡದ ಹಿಂಬದಿಗೆ ಸಾಗಿ ಏಣಿ ಬಳಸಿ ಎರಡನೇ ಮಹಡಿಗೆ ತೆರಳಿದ್ದರು. ಅಲ್ಲದೆ, ಅಲ್ಲಿ ಸಿಲುಕಿಕೊಂಡಿದ್ದ ಹಲವು ಮಕ್ಕಳನ್ನು ರಕ್ಷಿಸಿದರು. ಅಷ್ಟೇ ಅಲ್ಲ, ನಂತರ ಕಟ್ಟಡದ ಮುಂಭಾಗಕ್ಕೆ ಆಗಮಿಸಿ, ಆರೇಳು ವಿದ್ಯಾರ್ಥಿಗಳನ್ನು ರಕ್ಷಿಸಿದ್ದಾರೆ. ಕಟ್ಟಡದ ಮುಂಭಾಗದಲ್ಲಿ ವಿದ್ಯಾರ್ಥಿನಿಯೊಬ್ಬಳು ಜಿಗಿಯುತ್ತಿದ್ದಾಗ ಹಿಡಿಯಲು ಸಾಧ್ಯ ವಾಗದೇ ಮೃತಪಟ್ಟ ದೃಶ್ಯ ಇನ್ನೂ ಕಣ್ಣಿಗೆ ಕಟ್ಟಿದಂತೆ ಇದೆ ಎಂದು ಕೇತನ್‌ ಹೇಳಿದ್ದಾರೆ. ಮನೆಯಲ್ಲಿ ತಂದೆ ಅತ್ಯಂತ ಶಿಸ್ತಿನ ವ್ಯಕ್ತಿ ಯಾಗಿದ್ದು, ಮನೆಗೆ ತಡವಾಗಿ ಬಂದಾಗ ಗೇಟ್‌ ತೆರೆಯುತ್ತಿರ ಲಿಲ್ಲ. ಆಗ ಮನೆಯ ಕಾಂಪೌಂಡ್‌,ಗೋಡೆ ಹತ್ತಿ ಟೆರೇಸ್‌ಗೆ ಹೋಗುತ್ತಿದ್ದೆ. ಇದು ಈ ಅಭ್ಯಾಸ ನನಗೆ ಈಗ ನೆರ ವಿಗೆ ಬಂತು ಎಂದಿದ್ದಾರೆ ಕೇತನ್‌. ಇದೇ ವೇಳೆ, ದುರಂತದಲ್ಲಿ ಮೃತ‌ರ ಸಂಖ್ಯೆ 22ಕ್ಕೇರಿದೆ.

Advertisement

Udayavani is now on Telegram. Click here to join our channel and stay updated with the latest news.

Next